ಬೆಂಗಳೂರು –
ರಾಜ್ಯ ಸರ್ಕಾರಿ ನೌಕರರ 7ನೇ ವೇತನ ಆಯೋಗಕ್ಕೆ ಅಧ್ಯಕ್ಷರಾಗಿ ಸುಧಾಕರ್ ರಾವ್ ಅವರ ಹೆಸರನ್ನು ಘೋಷಣೆ ಮಾಡಿ ಒಂದು ವಾರ ಕಳೆಯುತ್ತಾ ಬಂದಿದೆ ಈಗಾಗಲೇ ಅವರು ಒಂದಿಷ್ಟು ಕಾರ್ಯಚಟುವಟಿಕೆಗಳನ್ನು ಆರಂಭ ಮಾಡಿದ್ದು ಇತ್ತ ಈವರೆಗೆ ಸರ್ಕಾರದಿಂದ ಅಧಿಕೃ ತವಾಗಿ ಆದೇಶ ಬಂದಿಲ್ಲ ಹೀಗಾಗಿ ವೇತನ ಆಯೋಗದ ಅಧ್ಯಕ್ಷರೆಂದು ಘೋಷಣೆಯಾಗಿ ರುವ ಡಾ ಸುಧಾಕರ್ ರಾವ್ ಅವರು ಮುಖ್ಯ ಮಂತ್ರಿ ಭೇಟಿಗೆ ಸಮಯವನ್ನು ಕೇಳಿದ್ದಾರೆ
ಈಗಾಗಲೇ ದಾವಣಗೇರಿಯಲ್ಲಿ ಮುಖ್ಯಮಂತ್ರಿ ಅವರು ಘೋಷಣೆ ಮಾಡಿದಂತೆ ಸರ್ಕಾರದಿಂದ ಅಧಿಕೃತವಾಗಿ ಘೋಷಣೆಯ ಮುನ್ನವೇ ಒಂದಿಷ್ಟು ಮಾಹಿತಿಯ ಕಲೆಹಾಕುವ ಕಾರ್ಯ ದೊಂದಿಗೆ ಈ ಕುರಿತಂತೆ ಚಟುವಟಿಕೆಗಳನ್ನು ಆರಂಭ ಮಾಡಿದ್ದು ಇತ್ತ ಇನ್ನೂ ಕೂಡಾ ಸರ್ಕಾರ ದಿಂದ ಆದೇಶ ಮಾತ್ರ ಬರುತ್ತಿಲ್ಲ ಹೀಗಾಗಿ ಸಧ್ಯ ಇವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಲು ಸಮಯವನ್ನು ಕೇಳಿದ್ದು ಇವರ ಭೇಟಿಯು ತೀವ್ರ ಕುತೂಹಲವನ್ನು ಕೇರಳಿಸಿದ್ದು ಭೇಟಿಯ ಉದ್ದೇಶ ಏನು ಎಂಬ ಕುರಿತಂತೆ ಸಾಕಷ್ಟು ಚರ್ಚೆಗೆ ಗ್ರಾಸವಾಗಿದ್ದು
ಇನ್ನೂ ಶೀಘ್ರದಲ್ಲೇ ಸಾಲು ಸಾಲಾಗಿ ಚುನಾವಣೆ ಗಳು ಬರಲಿದ್ದು ಅವೆಲ್ಲವುಗಳು ಈ ಒಂದು ವೇತನ ಸಮಿತಿ ರಚನೆಗೆ ಸಮಸ್ಯೆಯಾಗಲಿದ್ದು ವರದಿ ನೀಡಲು ತಿಂಗಳುಗಳು ಬೇಕಾಗಲಿದ್ದು ಇದನ್ನು ನೀಡಿದ ಮೇಲೆ ಜಾರಿಗೆ ಮಾಡಲು ಸಮಯ ಬೇಕಾಗಲಿದ್ದು ಇದರಿಂದಾಗಿ ಮತ್ತಷ್ಟು ತಡವಾಗಲಿದ್ದು ಇವೇಲ್ಲ ವಿಚಾರಗಳ ಕುರಿತಂತೆ ವೇತನ ಆಯೋಗದ ಅಧ್ಯಕ್ಷರು ಮುಖ್ಯಮಂತ್ರಿ ಅವರನ್ನು ಭೇಟಿಯಾಗಲಿದ್ದು ಮುಖ್ಯಮಂತ್ರಿ ಚಿಕ್ಕಮಗಳೂರು ಜಿಲ್ಲೆಯ ಪ್ರವಾಸದಲ್ಲಿದ್ದು ಸಮಯವನ್ನು ಯಾವಾಗ ಕೊಡುತ್ತಾರೆ ಅಧ್ಯಕ್ಷರು ಏನೇನು ಚರ್ಚೆಯನ್ನು ಮಾಡಲಿದ್ದಾರೆ ಎಂಬುದು ಕುತುಹೂಲ ಕೇರಳಿಸಿದೆ.
ಗೋಪಿ ಸುದ್ದಿ ಸಂತೆ ನ್ಯೂಸ್