ಬೆಂಗಳೂರು –
ರಾಜ್ಯದ ಸರ್ಕಾರಿ ನೌಕರರ ಆದ್ಯ ಗಮನಕ್ಕೆ…..
KGID ಗಣಕೀಕರಣಕ್ಕೆ ಸಂಬಂಧಿಸಿದಂತೆ ರಾಜ್ಯಾಧ್ಯಕ್ಷ ರಾದ ಸಿ.ಎಸ್.ಷಡಾಕ್ಷರವರ ಮನವಿಯಂತೆ ಇಂದು ಖಜಾನೆ ಆಯುಕ್ತರ ಕಚೇರಿ ಸಭಾಂಗಣದಲ್ಲಿ ಗಣಕೀಕರಣ ಉಸ್ತುವಾರಿ ನೋಡಲ್ ಆಫೀಸರ್ ಹಾಗೂ ಖಜಾನೆ ಆಯುಕ್ತರಾದ ಉಜ್ವಲ್ ಕುಮಾರ್ ಘೋಷ್ ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆಸಲಾಯಿತು.

ಈ ಸಭೆಯಲ್ಲಿ KGID ಇಲಾಖೆಯ ಅಧಿಕಾರಿಗಳು ಭಾಗವಹಿಸಿದ್ದರು.ಇದೇ ತಿಂಗಳು 30ನೇ ತಾರೀಖಿನಂದು ಮಾನ್ಯ ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ರವರಿಂದ KGID Online ಸೇವಾ ಸೌಲಭ್ಯಗಳನ್ನು ಲೋಕಾರ್ಪಣೆಗೊಳಿಸಲು ತೀರ್ಮಾನಿಸಲಾಯಿತು.