ಬೆಂಗಳೂರು –
ಒಂದೇ ವಾರದಲ್ಲಿ ರಾಜ್ಯದಲ್ಲಿ ಜಾರಿಯಾಗಲಿದೆ ನೀತಿ ಸಂಹಿತಿ 7ನೇ ವೇತನ ಆಯೋಗದ ವರದಿ ಎಲ್ಲಿಗೆ ಬಂತು – ಚುನಾವಣೆಯ ಘೋಷಣೆ ಮುನ್ನವೇ ರಾಜ್ಯದ ಸರ್ಕಾರಿ ನೌಕರರಿಗೆ ಜಾರಿಯಾಗಲಿ 7ನೇ ವೇತನ ಆಯೋಗ
ಇನ್ನೇನು ಒಂದೇ ವಾರ ಕಳೆದರೆ ಸಾಕು ರಾಜ್ಯದ ವಿಧಾನಸಭೆಗೆ ಚುನಾವಣೆಗೆ ಮಹೂರ್ತ ಘೋಷಣೆಯಾಗಲಿದೆ.ಈಗಾಗಲೇ ಎಲ್ಲಾ ಪಕ್ಷದವರು ನಾ ಮುಂದು ನೀ ಮುಂದು ಎನ್ನುತ್ತಾ ಭರ್ಜರಿಯಾಗಿ ಚುನಾವಣೆಯ ತಯಾರಿಯಲ್ಲಿ ತೋಡಗಿಕೊಂಡಿದ್ದಾರೆ. ಇನ್ನೂ ಇತ್ತ ಈಗಾಗಲೇ ರಾಜ್ಯದ ಸರ್ಕಾರಿ ನೌಕರರ ವೇತನ ಪರಿಷ್ಕ್ರರಣೆ ವಿಚಾರ ಕುರಿತಂತೆ ರಾಜ್ಯ ಸರ್ಕಾರ 7ನೇ ವೇತನ ಆಯೋಗವನ್ನು ರಚನೆ ಮಾಡಿದೆ.
ಆಯೋಗಕ್ಕೆ ಬೇಕಾದ ಎಲ್ಲಾ ಸೌಲಭ್ಯ ವ್ಯವಸ್ಥೆ ಯನ್ನು ಕೂಡಾ ರಾಜ್ಯ ಸರ್ಕಾರ ಮಾಡಿದ್ದು ನಾಲ್ಕು ತಿಂಗಳಾಗಿವೆ ಆದರೂ ಕೂಡಾ ಸರ್ಕಾರ ನಿಗದಿ ಮಾಡಿರುವ ಕಾಲ ಮೀತಿಯಲ್ಲಿಯೇ ಈ ಒಂದು ಆಯೋಗವು ವರದಿಯನ್ನು ನೀಡಲಿದ್ದು ಈ ಹಿಂದೆ ರಾಜ್ಯ ಸರ್ಕಾರಿ ನೌಕರರು ನೀತಿ ಸಂಹಿತಿ ಘೋಷಣೆ ಯಾಗುವ ಮುನ್ನವೇ ಕೂಡಲೇ ಮಧ್ಯಂತರ ವರದಿಯನ್ನು ತರಿಸಿ ಕೊಂಡು ಕೂಡಲೇ 7ನೇ ವೇತನ ಆಯೋಗವನ್ನು ಜಾರಿಗೆ ಮಾಡುವಂತೆ ಒತ್ತಾಯವನ್ನು ಮಾಡಿದ್ದರು
ಅಲ್ಲದೇ ಪ್ರತಿಭಟನೆಗೆ ಕೂಡಾ ಕರೆ ನೀಡಿದ್ದರು ಇದೇಲ್ಲದರಿಂದ ಎಚ್ಚುತ್ತುಕೊಂಡ ರಾಜ್ಯ ಸರ್ಕಾರ ಪ್ರತಿಶತ 17 ರಷ್ಟು ವೇತನವನ್ನು ಹೆಚ್ಚಳ ಮಾಡಿ ಆದೇಶವನ್ನು ಮಾಡಿದೆ.ನಂತರ ಪ್ರಮುಖ ಬೇಡಿಕೆ ಯಾಗಿ ರಾಜ್ಯದಲ್ಲಿ ಚುನಾವಣೆ ಘೋಷಣೆಯಾ ಗುವ ಮುನ್ನವೇ ಕೂಡಲೇ 7ನೇ ವೇತನ ಆಯೋ ಗವನ್ನು ಜಾರಿಗೆ ತರುವಂತೆ ಒತ್ತಾಯವನ್ನು ಮಾಡಿದ್ದು
ಹೀಗಾಗಿ ಈ ಕೂಡಲೇ ರಾಜ್ಯದಲ್ಲಿ ನೀತಿ ಸಂಹಿತಿ ಘೋಷಣೆಗೆ ದಿನಗಳು ಮಾತ್ರ ಬಾಕಿ ಉಳಿದಿದ್ದು ಶೀಘ್ರದಲ್ಲೇ 7ನೇ ವೇತನ ಆಯೋಗದಿಂದ ವರದಿಯನ್ನು ತರಿಸಿಕೊಂಡು ಜಾರಿಗೆ ಮಾಡಿ ಮಾತು ಉಳಿಸಿಕೊಳ್ಳಿ ಎಂದು ನಾಡಿನ ಸಮಸ್ತ ಸರ್ಕಾರಿ ನೌಕರರು ಒತ್ತಾಯವನ್ನು ಮಾಡಿದ್ದು ಇತ್ತ ಮುಖ್ಯಮಂತ್ರಿ ಹೇಳಿದಂತೆ ಮಾತನ್ನು ಉಳಿಸಿಕೊಳ್ಳುತ್ತಾರಾ ಇಲ್ಲ ಎಂಬೊದನ್ನು ಕಾದು ನೋಡಬೇಕಿದೆ.
ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..