ಹಾವೇರಿ –
ಕರ್ತವ್ಯನಿರತ ಪೊಲೀಸ್ ಸಿಬ್ಬಂದಿಯೊಬ್ಬರು ಅನಾ ರೋಗ್ಯಕ್ಕೀಡಾಗಿ ಮೃತಪಟ್ಟ ಘಟನೆ ಹಾವೇರಿ ಜಿಲ್ಲೆ ಯಲ್ಲಿ ನಡೆದಿದೆ.ಜಿಲ್ಲೆಯ ಸವಣೂರ ಪಟ್ಟಣ ದಲ್ಲಿ ಕರ್ತವ್ಯದ ಮೇಲಿದ್ದ ಪೊಲೀಸ್ ಹೆಡ್ ಕಾನ್ಸ್ಟೆಬಲ್ ಗುಡ್ಡಪ್ಪ ನೀಲಪ್ಪ ಬಜ್ಜಳ್ಳಿ (45)ಮೃತಪಟ್ಟವರಾಗಿ ದ್ದಾರೆ.ಕರ್ತವ್ಯ ದಲ್ಲಿದ್ದ ಇವರು ತಲೆಸುತ್ತು ಬಂದು ಕುಸಿದು ಬಿದ್ದಿದ್ದಾರೆ. ತಕ್ಷಣ ಸಾರ್ವಜನಿಕರು ಅವರ ನ್ನು ಸವಣೂರ ತಾಲೂಕು ಸಾರ್ವಜನಿಕ ಆಸ್ಪತ್ರೆಗೆ ಕರೆದೊಯ್ದು ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ದ್ದಾರೆ.

ನಂತರ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ಶಿಪ್ಟ್ ಮಾಡುವಾಗ ಮಾರ್ಗಮಧ್ಯೆ ಕೊನೆಯುಸಿರೆಳೆದಿದ್ದಾರೆ.ಅವರ ಪಾರ್ಥಿವ ಶರೀರ ವನ್ನು ಅವರ ಸ್ವಂತ ಗ್ರಾಮವಾದ ಹಾವೇರಿ ತಾಲೂ ಕು ಕಳ್ಳಿಹಾಳ ಗ್ರಾಮದಲ್ಲಿ ಅಂತಿಮದರ್ಶನಕ್ಕೆ ಇರಿಸಿ ಸಕಲ ಪೋಲಿಸ್ ಗೌರವಗಳೊಂದಿಗೆ ಅಂತ್ಯ ಸಂಸ್ಕಾ ರ ನೆರವೇರಿಸಲಾಯಿತು.ಮೃತರಿಗೆ ಪತ್ನಿ, ಇಬ್ಬರು ಪುತ್ರರು,ಒಬ್ಬಳು ಪುತ್ರಿ ಹಾಗೂ ಅಪಾರ ಬಂಧುಗ ಳು ಇದ್ದಾರೆ.

ಮೃತರ ಆತ್ಮಕ್ಕೆ ಶಾಂತಿಕೋರಿ ಗೃಹ ಸಚಿವ ಬಸವರಾ ಜ ಬೊಮ್ಮಾಯಿ,ಎಸ್ಪಿ ಕೆ.ಜಿ. ದೇವರಾಜ್, ಸವಣೂ ರ ಉಪವಿಭಾಗಾಧಿಕಾರಿ ಅನ್ನಪೂರ್ಣ ಮುದಕಮ್ಮ ನವರ, ತಹಸೀಲ್ದಾರ್ ಸಿ.ಎಸ್.ಭಂಗಿ, ಪಿಎಸ್‌ಐ ಶಶಿಧರ ಜಿ.ಎಂ. ಹಾಗೂ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಸಂತಾಪ ಸೂಚಿಸಿದ್ದಾರೆ.