ಮಂಡ್ಯ –
ಬಾರಿ ಮಳೆಗೆ ಪ್ರಾಥಮಿಕ ಶಾಲೆಯ ಗೋಡೆಯೊಂದು ಕುಸಿದು ಬಿದ್ದ ಘಟನೆ ಮಂಡ್ಯದಲ್ಲಿ ನಡೆದಿದೆ.ಹೌದು ಜಿಲ್ಲೆಯ ಶ್ರೀರಂಗಪಟ್ಟಣ ತಾಲ್ಲೂಕಿನ ಬಲ್ಲೇನಹಳ್ಳಿ ಗ್ರಾಮದಲ್ಲಿನ ಶಾಲೆಯ ಗೋಡೆ ಕುಸಿದು ಶಾಲೆಯ ಗೋಡೆಯ ಪಕ್ಕದಲ್ಲಿದ್ದ ಆಟೋ ಜಖಂ ಆಗಿದೆ.


ಬಲ್ಲೇನಹಳ್ಳಿ ಗ್ರಾಮದಲ್ಲಿ ಈ ಒಂದು ಘಟನೆ ನಡೆದಿದೆ. ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲ್ಲೂಕಿನ ಬಲ್ಲೇನಹಳ್ಳಿ ಯಾಗಿದ್ದು ಗ್ರಾಮದಲ್ಲಿನ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಗೋಡೆ ಕುಸಿತವಾಗಿದೆ.ರಾತ್ರಿ ಸುರಿದ ಧಾರಾಕಾರ ಮಳೆಗೆ ಶಾಲೆಯ ಗೋಡೆ ಕುಸಿದಿದೆ ಅಲ್ಲದೆ ಶಾಲೆಯ ಪಕ್ಕದಲ್ಲಿ ನಿಂತಿದ್ದ ಆಟೋ ಮೇಲೆ ಶಾಲೆ ಗೋಡೆ ಕುಸಿತದಿಂದ ಆಟೋ ಕೂಡ ಜಖಂಗೊಂಡಿದೆ
ಇನ್ನೂ ಶಾಲೆಗೆ ರಜೆ ಘೋಷಣೆ ಹಿನ್ನಲೆಯಲ್ಲಿ ದೊಡ್ಡ ದೊಂದು ಅವಘಡವೊಂದು ತಪ್ಪಿದಂತಾಗಿದ್ದು ಸಧ್ಯ ಸ್ಥಳಕ್ಕೇ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀ ಲನೆ ಮಾಡಿದ್ದಾರೆ.


