ಹುಬ್ಬಳ್ಳಿ –
DC ಯವರಿಗೆ ಭೇಟಿಯಾಗಿ ಬಾ ಟ್ರೇಂಡ್ ಆಗಿದೆ ಚಿಗರಿ ಡಿಪೋ ದಲ್ಲಿ – ಏನೇ ಆದರೂ DC ಯವರಿಗೆ ಭೇಟಿಯಾಗಬೇಕು ಅವರು ಹೇಳಿದ ಮೇಲೆ ಪೈನಲ್ ದಾರಿ…..ವೈರಲ್ ಆಗಿದೆ ಡೈಲಾಗ್…..
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ ಜೈಲು ಸೇರಿದ ಬಳಿಕ ಶೆಡ್ ಗೆ ಬಾ ಎಂಬ ಡೈಲಾಗ್ ವೈರಲ್ ಆಗಿರುವ ವಿಚಾರ ಎಲ್ಲರಿಗೂ ಗೊತ್ತು.ಇದರ ಬೆನ್ನಲ್ಲೇ ಹುಬ್ಭಳ್ಳಿ ಧಾರವಾಡ ಚಿಗರಿ ಡಿಪೋ ದಲ್ಲಿ ಡೈಲಾಗ್ ವೊಂದು ಸಾಕಷ್ಟು ಸದ್ದು ಮಾಡುತ್ತಿದ್ದು ವೈರಲ್ ಆಗಿದೆ.ಹೌದು ಚಿಗರಿ ಬಸ್ ಗಳು ಆರಂಭಗೊಂಡು ಐದಾರು ವರ್ಷ ಗಳು ಕಳೆದಿದ್ದು ಸಧ್ಯ ಬಸ್ ಗಳ ಪರಸ್ಥಿತಿ ದೇವರೆ ಕಾಪಾಡಬೇಕು.
ಸರಿಯಾದ ನಿರ್ವಹಣೆ ಸರಿಯಾದ ವ್ಯವಸ್ಥೆ ಇಲ್ಲದ ಪರಿಣಾಮವಾಗಿ ಡೂಟಿ ಮಾಡುವಾಗ ಹೆಚ್ಚು ಕಡಿಮೆ ಏನಾದರೂ ಆದರೆ ಡ್ರೈವರ್ ಗಳಿಗೆ ಡೂಟಿಯನ್ನು ನೀಡದೆ ನೀವು ಡಿಸಿ ಸಾಹೇಬ್ರ ಗೆ ಭೇಟಿಯಾಗಿ ಬನ್ನಿ ಎಂಬ ಮಾತನ್ನು ಹೇಳುತ್ತಿ ದ್ದಾರೆ.ಡಿಸಿ ಯವರಿಗೆ ಭೇಟಿಯಾಗಿ ಬಾ ಎನ್ನುವ ಡೈಲಾಗ್ ಹುಬ್ಬಳ್ಳಿ ಧಾರವಾಡ ಎರಡು ಡಿಪೋ ಗಳಲ್ಲಿ ಸಾಕಷ್ಟು ಪ್ರಮಾಣದಲ್ಲಿ ವೈರಲ್ ಆಗಿವೆ
ಸಣ್ಣ ಸಣ್ಣ ಪ್ರಮಾಣದಲ್ಲಿ ಏನೇ ಅವಘಡ ಘಟನೆಗಳು ನಡೆದರು ಕೂಡಾ ಅದರ ಬಗ್ಗೆ ವಿಚಾರಣೆಯನ್ನು ಮಾಡದೇ ಮಾಹಿತಿಯನ್ನು ತಗೆದುಕೊಳ್ಳದೇ ಡೂಟಿ ಕ್ಯಾನ್ಸಲ್ ಮಾಡೊದು ಡಿಸಿಯವರಿಗೆ ಭೇಟಿಯಾಗಿ ಬಾ ಎಂದು ಹೇಳೊದು ಕಡ್ಡಾಯವಾಗಿದ್ದು ಮೊದಲೇ ಹತ್ತು ಹಲವಾರು ಸಮಸ್ಯೆ ಸಂಕಷ್ಟಗಳ ನಡುವೆ ಈ ಒಂದು ಡೈಲಾಗ್ ಸಾಕಷ್ಟು ವೈರಲ್ ನೊಂದಿಗೆ ಸದ್ದು ಮಾಡುತ್ತಿದೆ.
ಮೊದಲೇ ಉಸಿರುಗಟ್ಟಿದ ವಾತಾವರಣದಲ್ಲಿ ಕರ್ತವ್ಯವನ್ನು ಮಾಡುತ್ತಿರುವ ಚಾಲಕರಿಗೆ ಈ ಒಂದು ಡೈಲಾಗ್ ಮತ್ತಷ್ಟು ಭಯವನ್ನುಂಟು ಮಾಡಿದ್ದು ಡಿಸಿಯವರೆ ಇದೇನಿದು ಹೀಗೆ ಯಾಕೆ ನಡೆಯುತ್ತಿದೆ ನಿಮ್ಮನ್ನು ಭೇಟಿಯಾಗಿ ಬಾ ಅಂತಾ ಹೇಳುವ ಉದ್ದೇಶವಾದರು ಏನು ಉತ್ತರಿಸಿರಿ.
ಸುದ್ದಿ ಸಂತೆ ನ್ಯೂಸ್ ಹುಬ್ಬಳ್ಳಿ…..