ಹುಬ್ಬಳ್ಳಿ –
ವಾರ್ಡ್ ಗಳಿಗೆ ಭೇಟಿ ನೀಡಿ ಸಾರ್ವಜನಿಕರ ಸಮಸ್ಯೆ ಆಲಿಸಿದ ಪಾಲಿಕೆಯ ಆಯುಕ್ತ ಡಾ ಈಶ್ವರ ಉಳ್ಳಾಗಡ್ಡಿ – ಹಲವೆಡೆ ಮಿಂಚಿನ ಸಂಚಾರ ಮಾಡಿ ಸಮಸ್ಯೆ ಆಲಿಸಿದ ಆಯುಕ್ತರು ಹೌದು ಸಾರ್ವಜನಿಕರ ಕುಂದು ಕೊರತೆ ಕುರಿತು ವಾರ್ಡ್ ಗಳಿಗೆ ಭೇಟಿ ನೀಡಿದ ಆಯುಕ್ತರು
ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಬರುವ ಉಣಕಲ್ ಚನ್ನಬಸವೇ ಶ್ವರ ದೇವಸ್ಥಾನದ ಎದುರಿಗೆ ಇರುವ ವಾರ್ಡ್ ನಂಬರ್ 36 ಮತ್ತು 38ರ ಪ್ರೆಸಿಡೆಂಟ್ ಹೋಟೆಲ್ ಮೇನ್ ರೋಡ್ ಶ್ರೀನಗರ ಸ್ಕೂಲ್
ಶ್ರೀನಗರ 1 ರಿಂದ 5 ನೇ ಕ್ರಾಸ್ ಧರ್ಮಪುರಿ
ಬಡಾವಣೆ,ಸಂತೆ ಬೈಲ ಪ್ರದೇಶಗಳಲ್ಲಿ ಸಂಚ ರಿಸಿದ ಆಯುಕ್ತರು ಹಾಗೂ ಪಾಲಿಕೆಯ ಸದಸ್ಯರಾದ ರಾಜಣ್ಣ ಕೊರವಿ ಯವರು ಮಳೆಯಿಂದ ಚರಂಡಿಗಳು ತುಂಬಿ ಮನೆಗಳಿಗೆ ಹಾಗೂ ರಸ್ತೆಗಳನ್ನು ಪ್ರವೇಶಿಸಿ ಸಾರ್ವಜನಿಕರಿಗೆ ಉಂಟಾದ ತೊಂದರೆಗಳನ್ನು ವೀಕ್ಷಿಸಿ ಜೆ ಸಿ ಬಿ ಯಿಂದ ನಡೆಯುತ್ತಿರುವ ಸ್ವಚ್ಛತಾ ಕಾರ್ಯವನ್ನು ಪರಿಶೀಲಿಸಿದರು ಚರಂಡಿಗಳ ಮದ್ಯದಲ್ಲಿ ಹಾಕ ಲಾದ ವಿದ್ಯುತ್ ಕಂಬಗಳನ್ನು ಸ್ಥಳಾಂತರಿಸು ವಂತೆ ಕಾರ್ಯನಿರ್ವಾಹಕ ಅಭಿಯಂತರರಾದ ಗಣಾಚಾರಿ ಯವರಿಗೆ ತಿಳಿಸಿದರು
ಹಾಗೂ ಅಲ್ಲಿ ನೆರೆದಿದ್ದ ಸಾರ್ವಜನಿಕರ ದೂರುಗಳನ್ನು ಸ್ವೀಕರಿಸಿ ಮಾತನಾಡಿದ ಆಯುಕ್ತರು ಅತಿ ಶೀಘ್ರದಲ್ಲಿ ಸಮಸ್ಯೆಯನ್ನು ಬಗೆಹರಿಸಲಾಗುವುದು ಎಂದು ವಲಯ ಸಹಾಯಕ ಆಯುಕ್ತರನ್ನು,ಕಿರಿಯ ಅಭಿಯಂತ ರರನ್ನು ಹಾಗೂ ಆರೋಗ್ಯ ನಿರೀಕ್ಷಕರನ್ನು ಸ್ಥಳಕ್ಕೆ ಕರೆದು ತಕ್ಷಣ ಸಾರ್ವಜನಿಕರಿಗೆ ಉಂಟಾದ ಸಮಸ್ಯೆಯನ್ನು ಬಗೆಹರಿಸಲು
ಕ್ರಮ ಕೈಗೊಳ್ಳುವಂತೆ ನಿರ್ದೇಶನ ನೀಡಿದರು. ಪಾಲಿಕೆಯ ಸದಸ್ಯರಾದ ರಾಜಣ್ಣ ಕೊರವಿ ಯವರು ಆಯುಕ್ತರಿಗೆ ಸಾಥ್ ನೀಡಿದರು. ಸ್ಥಳದಲ್ಲಿ ವಲಯ ಸಹಾಯಕ ಆಯುಕ್ತರು, ಕಾರ್ಯನಿರ್ವಾಹಕ ಅಭಿಯಂತರರು, ಹಾಗೂ ಆರೋಗ್ಯ ನಿರೀಕ್ಷಕರಾದ ಸೋನು ಪರದೇಶಿ ಹಾಜರಿದ್ದರು.
ಸುದ್ದಿ ಸಂತೆ ನ್ಯೂಸ್ ಹುಬ್ಬಳ್ಳಿ…..