ಮಂಗಳೂರು –
ಲೋಕಾಯುಕ್ತ ಬಲೆಗೆ ಬಿದ್ದ ಆಯುಕ್ತರು – 25 ಲಕ್ಷ ರೂಪಾಯಿ ಲಂಚ ತಗೆದುಕೊಳ್ಳುವಾಗ ಟ್ರ್ಯಾಪ್ ಮಾಡಿ ಲಾಕ್ ಮಾಡಿದ ಲೋಕಾಯುಕ್ತ ಟೀಮ್ ಹೌದು
ಆಯುಕ್ತರೊಬ್ಬರು ಲೋಕಾಯುಕ್ತ ಬಲೆಗೆ ಬಿದ್ದ ಘಟನೆ ಮಂಗಳೂರಿನಲ್ಲಿ ನಡಿದಿದೆ.ಹೌದು 25 ಲಕ್ಷ ರೂಪಾಯಿ ಲಂಚ ಸ್ವೀಕರಿಸುತ್ತಿದ್ದ ವೇಳೆ ಮಂಗಳೂರು ಅಭಿವೃದ್ಧಿ ಪ್ರಾಧಿಕಾರದ ಕಮಿಷನರ್ ಮನ್ಸೂರ್ ಅಲಿ ಎಂಬುವರೇ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ನಗರದ ಉದ್ಯಮಿಯೊಬ್ಬರಿಗೆ ಟಿಡಿಆರ್ ಪ್ರಮಾಣಪತ್ರವನ್ನು ನೀಡಲು ₹25 ಲಕ್ಷ ಲಂಚಕ್ಕೆ ಬೇಡಿಕೆಯನ್ನು ಇಟ್ಟಿದ್ದರು.ಈ ಒಂದು ಕುರಿತಂತೆ ಹಣವನ್ನು ಸ್ವೀಕರಿಸುತ್ತಿದ್ದ ವೇಳೆ ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಆಯುಕ್ತ ಮನ್ಸೂರ್ ಅಲಿ ರೆಡ್ ಹ್ಯಾಂಡ್ ಆಗಿ ಲೋಕಾ ಯುಕ್ತ ಬಲೆಗೆ ಬಿದ್ದಿದ್ದಾರೆ.
ಸಾಗರ್ ರಿಯಾಲಿಟಿ ಪ್ರಮೋಟರ್ಸ್ ನ ಮಾಲೀಕ ಉದ್ಯಮಿ ಗಿರಿಧರ್ ಶೆಟ್ಟಿಯಿಂದ ದಲ್ಲಾಳಿ ಮೂಲಕ 25 ಲಕ್ಷ ರೂಪಾಯಿ ಲಂಚ ಸ್ವೀಕರಿಸುತ್ತಿದ್ದಾಗ ಬಲೆಗೆ ಬಿದ್ದಿದ್ದಾರೆ.ಈ ವೇಳೆ ದಲ್ಲಾಳಿ ಸಲೀಂನನ್ನೂ ವಶಕ್ಕೆ ಪಡೆದ ಲೋಕಾ ಯುಕ್ತ ಪೊಲೀಸರು ಡಿವೈಎಸ್ಪಿ ಚೆಲುವರಾಜ್, ಇನ್ಸ್ಪೆಕ್ಟರ್ ಗಳಾದ ಅಮಾನುಲ್ಲಾ, ಸುರೇಶ್ ಕುಮಾರ್ ನೇತೃತ್ವದಲ್ಲಿ ಈ ಒಂದು ದಾಳಿ ನಡೆದಿದೆ.
ಕುಡುಪು ಗ್ರಾಮದಲ್ಲಿ ಜಾಗವನ್ನು ಖರೀದಿ ಮಾಡಿದ್ದ ಉದ್ಯಮಿ ಗಿರಿಧರ್ ಶೆಟ್ಟಿ ಜಮೀನಿಗೆ ಟಿಡಿಆರ್ ನೀಡಲು ಫೈಲ್ ಮುಡಾ ಇಲಾಖೆಗೆ ವರ್ಗಾವಣೆ ಯಾಗಿತ್ತು ಆದರೆ ಮುಡಾ ಆಯುಕ್ತ ಮನ್ಸೂರ್ ಅಲಿ ಲಂಚಕ್ಕಾಗಿ ಫೈಲ್ ಪೆಂಡಿಂಗ್ ಮಾಡಿದ್ದರು.ಅಲ್ಲದೆ ಗಿರಿಧರ್ ಶೆಟ್ಟಿ ಬಳಿ ನೇರ ವಾಗಿ 25 ಲಕ್ಷ ಲಂಚ ನೀಡುವಂತೆ ಬೇಡಿಕೆ ಇಟ್ಟಿದ್ದರು.
ಬ್ರೋಕರ್ ಸಲೀಂ ಮೂಲಕ ಲಂಚ ಸ್ವೀಕರಿಸಲು ಪ್ಲಾನ್ ಮಾಡಿದ್ದ ಕಮಿಷನರ್. ಮಂಗಳಾ ಕ್ರೀಡಾಂಗಣದ ಬಳಿ ಉದ್ಯಮಿಯಿಂದ ಲಂಚ ಸ್ವೀಕರಿಸುವಾಗ ಲೋಕಾಯುಕ್ತರ ಬಲೆಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ. ಭ್ರಷ್ಟಾಚಾರ ತಡೆ ಕಾಯ್ದೆಯಡಿ ಶಿಕ್ಷಾರ್ಹ ಅಪರಾಧಕ್ಕಾಗಿ ಸಲೀಂ ಮತ್ತು ಅಲಿಯನ್ನು ಬಂಧಿಸಿದ್ದು ಹೆಚ್ಚಿನ ವಿಚಾರ ಣೆಯನ್ನು ಮಾಡಲಾಗುತ್ತಿದ್ದು ಸಧ್ಯ ಆಯುಕ್ತ ರನ್ನು ವಶಕ್ಕೆ ತಗೆದುಕೊಂಡಿರುವ ಲೋಕಾಯುಕ್ತ ಪೊಲೀಸರು ತನಿಖೆ ಮಾಡ್ತಾ ಇದ್ದಾರೆ.
ಸುದ್ದಿ ಸಂತೆ ನ್ಯೂಸ್ ಮಂಗಳೂರು…..