ಬೆಂಗಳೂರು –
ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ಈಗಾಗಲೇ ನಮ್ಮ ಶಾಲೆ ನನ್ನ ಕೊಡುಗೆ ಯೋಜನೆ ಜಾರಿ ಮಾಡಲಾ ಗಿದ್ದು ಈ ಒಂದು ಯೋಜನೆಯಲ್ಲಿ ಆದ್ಯತೆ ಮೇರೆಗೆ ವೆಚ್ಚ ಮಾಡಲು ಶಿಕ್ಷಕರಿಗೆ ಸೂಚನೆ ನೀಡಲಾಗಿದ್ದು ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿ ಸರ್ಕಾರದ ಅನುದಾನದ ಹೊರತಾಗಿಯೂ ಕೊರತೆಯಾಗುವ ಮೂಲ ಸೌಕರ್ಯಗಳ ಅಭಿವೃದ್ಧಿಗೆ ಶಾಲಾ ಅಭಿವೃದ್ಧಿ ಹಾಗೂ ಮೇಲುಸ್ತುವಾರಿ ಸಮಿತಿ ದಾನ ದೇಣಿಗೆ ಗಳನ್ನು ಸ್ವೀಕರಿಸಲು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಅನುಮೋದನೆ ನೀಡಿದೆ
ಸರ್ಕಾರಿ ಶಾಲೆಗಳಲ್ಲಿ ಅನಿರೀಕ್ಷಿತವಾಗಿ ಉಂಟಾ ಗುವ ಸಣ್ಣ ಪ್ರಮಾಣದ ದುರಸ್ತಿ ಶಾಲಾ ಶುಚಿತ್ವ, ಶಾಲಾ ಶೈಕ್ಷಣಿಕ ಚಟುವಟಿಕೆಗಳು ಇತ್ಯಾದಿ ತುರ್ತು ವೆಚ್ಚಗಳಿಗೆ ಸಹಕಾರಿಯಾಗಲೆಂದು ಈ ನಿರ್ಧಾರ ಕೈಗೊಳ್ಳಲಾಗಿದೆ.ಇದಕ್ಕಾಗಿ ನಮ್ಮ ಶಾಲೆ ನನ್ನ ಕೊಡುಗೆ ಎಂಬ ಯೋಜನೆ ಜಾರಿ ಮಾಡ ಲಾಗಿದ್ದು ಈ ಯೋಜನೆಯಿಂದ ಸರ್ಕಾರಿ ಶಾಲೆ ಗಳ ಅಭಿವೃದ್ಧಿಗಾಗಿ ಸಾರ್ವಜನಿಕರಿಂದ ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯು ಆರ್ಥಿಕ ಸಹಾಯವನ್ನು ಕೊಡುಗೆ,ದಾನದ ರೂಪದಲ್ಲಿ ಪಡೆಯಲು ಅನುಮತಿ ನೀಡಲಾಗಿದೆ
ಶಾಲೆಯ ಪೋಷಕರಿಗೆ ಹೆಚ್ಚು ಹೆಚ್ಚು ತಮ್ಮ ಮಕ್ಕಳ ವಿದ್ಯಾಭ್ಯಾಸದ ಕಡೆಗೆ ಹಾಗೂ ಶಾಲೆ ಯಲ್ಲಿ ಮಕ್ಕಳ ಕಲಿಕೆಯ ಬಗ್ಗೆ ಗಮನಕೊಡುವ ಉದ್ದೇಶದಿಂದ ಹಾಗೂ ಸರ್ಕಾರಿ ಶಾಲೆಯು ನಮ್ಮ ಶಾಲೆ ಎಂಬ ಭಾವನೆ ಮೂಡುವ ಉದ್ದೇ ಶದಿಂದ ಸ್ವ ಇಚ್ಛೆಯಿಂದ ದಾನ,ದೇಣಿಗೆ ನೀಡಲಿ ಚ್ಚಿಸುವ ವ್ಯಕ್ತಿಗಳಿಂದ ದೇಣಿಗೆ ರೂಪದಲ್ಲಿ ಹಣ ಅಥವಾ ವಸ್ತುಗಳನ್ನು ಪಡೆದುಕೊಳ್ಳಲು ಅವ ಕಾಶ ಕಲ್ಪಿಸಲಾಗಿದೆ.ವಿದ್ಯಾರ್ಥಿಗಳ ಪೋಷಕ ರಿಂದ ಪಡೆಯಬಹುದಾದ ದಾನ, ಸ್ವ ಇಚ್ಛೆಯಿಂದ ನೀಡುವ ಕೊಡುಗೆ ಹಾಗೂ ದೇಣಿಗೆ ರೂಪದಲ್ಲಿ ಮಾಸಿಕ ಸುಮಾರು ರೂ.100/-ಗಳಂತೆ ಹಣ ವನ್ನು ಸಂಗ್ರಹಿಸಿ ಸದರಿ ಹಣವನ್ನು ನಿಗದಿತ ಎಸ್.ಡಿ.ಎಂ.ಸಿ. ಖಾತೆಗೆ ಪೋಷಕರಿಂದ ಸಂದಾಯ ಮಾಡಲು ಕ್ರಮಕೈಗೊಳ್ಳಲು ಸೂಚಿಸಲಾಗಿದೆ.
ಜೊತೆಗೆ ಎಸ್.ಡಿ.ಎಂ.ಸಿ ನಿಯಮಾವಳಿಗಳ ಪ್ರಕಾರ ನಿಗದಿತ ರಶೀದಿ ನೀಡಿ ಅವುಗಳಿಗೆ ಪ್ರತ್ಯೇಕ ಲೆಕ್ಕಪತ್ರಗಳನ್ನು ಇಡುವ ಜವಾಬ್ದಾರಿ ಯನ್ನು ಎಸ್.ಡಿ.ಎಂ.ಸಿ ಸದಸ್ಯ ಕಾರ್ಯದರ್ಶಿಗೆ ವಹಿಸಬೇಕು ಎಂದು ನಿರ್ದೇಶಿಸಲಾಗಿದೆ. ಸದರಿ ಹಣವನ್ನು ಎಸ್.ಡಿ.ಎಂ.ಸಿ ಯ ನಿಯಮಗಳ ಮಿತಿಯಲ್ಲಿ ಆದ್ಯತೆ ಮೇರೆಗೆ ವಿವಿಧ ಕಾರ್ಯ ಗಳಿಗೆ ವೆಚ್ಚ ಮಾಡಬಹುದಾಗಿದೆ.ಪ್ರಥಮ ಆದ್ಯತೆ ಯಾಗಿ ಕುಡಿಯುವ ನೀರು ಪೂರೈಕೆ ಶೌಚಾಲಯ ಮತ್ತು ಶಾಲೆ ಶುಚಿಗೊಳಿಸಲು,ಶಾಲೆಯ ವಿದ್ಯುತ್ ಶುಲ್ಕ ಕಟ್ಟಲು,ಶಾಲೆಯಲ್ಲಿನ ಪರಿಕರಗಳ ತುರ್ತು ರಿಪೇರಿಗಳು,ಮಕ್ಕಳು ಬಿಸಿಯೂಟ ಸೇವಿಸಲು ತಟ್ಟೆ,ಲೋಟ ಮತ್ತಿತರ ಪೂರಕ ವಸ್ತುಗಳು, ಇಲಾಖೆ ಹೆಚ್ಚುವರಿ ಶಿಕ್ಷಕರನ್ನು ಒದಗಿಸಿದ್ದರೂ ಹೆಚ್ಚುವರಿಯಾಗಿ ಅತಿಥಿ ಶಿಕ್ಷಕರನ್ನು ಶೈಕ್ಷಣಿಕ ಚಟುವಟಿಕೆಗಳಿಗೆ ಬಳಸಿಕೊಂಡಲ್ಲಿ ಅವರಿಗೆ ನೀಡಲು ಗೌರವ ಸಂಭಾವನೆ, ಗಣಕಯಂತ್ರಗಳ ರಿಪೇರಿ, ಅಗತ್ಯ ಬೋಧನೋಪಕರಣಗಳ ಸಂಗ್ರಹಣೆಗಾಗಿ ಬಳಸಬಹುದಾಗಿದೆ.
ದ್ವಿತೀಯ ಆದ್ಯತೆಯಾಗಿ ಮಕ್ಕಳ ಉಪಯೋಗ ಕ್ಕಾಗಿ ಬೆಂಚ್ ಅಥವಾ ಡೆಸ್ಕ್ ಗಳು,ಶಾಲಾ ಆಟದ ಮೈದಾನದ ಸಿದ್ಧತೆ, ಇ-ಕಲಿಕಾ ಕೇಂದ್ರದ ಸ್ಥಾಪನೆ, ಶಾಲೆಯ ಗ್ರಂಥಾಲಯ,ವಾಚನಾಲಯ ಬಲವ ರ್ಧನೆ, ಸ್ಕೌಟ್ಸ್ ಗೈಡ್, ಎನ್.ಎಸ್.ಎಸ್,ಎನ್.ಸಿ.ಸಿ ಕ್ರೀಡಾ ಮಕ್ಕಳಿಗೆ ಅಗತ್ಯ ಸಮವಸ್ತ್ರ, ಸಾಮಗ್ರಿ ಗಳು, ಶಾಲಾವನ ಬಲವರ್ಧನೆ, ಅತ್ಯಂತ ಅವಶ್ಯ ಕವಾಗಿ ಮಾಡಲೇಬೇಕಾದ ಇತರ ವೆಚ್ಚಗಾಗಿ ಖರ್ಚು ಮಾಡಬಹುದಾಗಿದೆ.
ಈ ಸಂಬಂಧ ಶಾಲೆಯಲ್ಲಿ ಅಗತ್ಯವಿರುವ ತುರ್ತು ಕ್ರಮಗಳ ಬಗ್ಗೆ ಎಸ್.ಡಿ.ಎಂಸಿ ಸಭೆಯಲ್ಲಿ ವಿವರ ವಾಗಿ ಚರ್ಚಿಸಿ ಅನುಮೋದನೆ ಪಡೆದು ವೆಚ್ಚ ಮಾಡಲು ಅನುಮತಿಸಬಹುದಾಗಿದೆ.ಜೊತೆಗೆ ಪ್ರತಿ ಮೂರು ತಿಂಗಳಿಗೊಮ್ಮೆ ಪೋಷಕರು,ತಂದೆ ತಾಯಂದಿರ ಸಭೆ ಕರೆದು ಶಾಲೆಯಲ್ಲಿ ಅಗತ್ಯವಿ ರುವ ಚಟುವಟಿಕೆಗಳಿಗೆ ಅನುದಾನ ಮತ್ತು ಪ್ರಗತಿ ಬಗ್ಗೆ ವಿವರಣೆ ನೀಡ ಇತರ ಆದ್ಯತೆ ಕ್ರಮಗಳ ಬಗ್ಗೆಯೂ ಸಹ ಸಭೆಯಲ್ಲಿ ವಿವರಿಸಿ/ಚರ್ಚಿಸಿ ನಡಾವಳಿ ದಾಖಲಿಸುವುದು ಮುಂದಿನ ಸಭೆಯಲ್ಲಿ ನಡಾವಳಿಯನ್ನು ಓದಿ ತಿಳಿಸಿ ಅನುಪಾಲನ ಮಾಡಲು ಆದೇಶಿಸಲಾಗಿದೆ.ಯಾವುದೇ ಕಾರಣಕ್ಕೂ ಯಾವುದೇ ಪೋಷಕರಿಂದ ಬಲವಂತವಾಗಿ ಹಣ, ದಾನ/ದೇಣಿಗೆಯನ್ನು ಸಂಗ್ರಹಿಸುವುದನ್ನು ನಿರ್ಬಂಧಿಸಲಾಗಿದೆ. ಆದರೆ ಪೋಷಕರ ಮನವೊಲಿಸಿ ಶಾಲೆಯ ಅಗತ್ಯ ಖರ್ಚುವೆಚ್ಚಗಳನ್ನು ಮನವರಿಕೆ ಮಾಡಿಕೊಟ್ಟು, ಪೋಷಕರು ಸ್ವಯಂ ಪ್ರೇರಿತವಾಗಿ ಎಸ್.ಡಿ.ಎಂ.ಸಿ ಖಾತೆಗೆ ಹಣ ನೀಡುವಂತೆ ಮಾಡಲು ಸೂಚಿಸಲಾಗಿದೆ.
ಖಾತೆಯಲ್ಲಿ ಸ್ವೀಕರಿಸಿದ ಹಣದಿಂದ ಮೇಲೆ ವಿವರಿಸಿರುವ ಆದ್ಯತೆಗಳ ಅನುಸಾರ ವೆಚ್ಚಮಾಡಲು ಕ್ರಮವಹಿಸಬೇಕು ಆಯುಕ್ತರು ನಿರ್ದೇಶನ ನೀಡಿದ್ದಾರೆ.
ಸರ್ಕಾರಿ ಶಾಲೆಗಳಿಗಾಗಿ ಹೊಸ ಸೂಚನೆಗಳನ್ನು ನೀಡಿದ ಆಯುಕ್ತರು – ತಪ್ಪದೇ ಈ ಮಾರ್ಗಸೂಚಿಗಳನ್ನು ಪಾಲಿಸುವಂತೆ ಶಾಲಾ ಶಿಕ್ಷಕರಿಗೆ ಖಡಕ್ ಸೂಚನೆ