ಹುಬ್ಬಳ್ಳಿ ಧಾರವಾಡ –
ಲೋಕಸಭಾ ಚುನಾವಣೆ ಘೋಷಣೆ ಬೆನ್ನಲ್ಲೇ ಕಾರ್ಯಪ್ರವೃತ್ತರಾದ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಆಯುಕ್ತರು ಕಾರ್ಯ ಪ್ರವೃತ್ತರಾದ ಪಾಲಿಕೆಯ ಆಯುಕ್ತ ಡಾ ಈಶ್ವರ ಉಳ್ಳಾಗಡ್ಡಿ ರಾಜಕೀಯ ಪಕ್ಷಗಳ ಬ್ಯಾನರ್, ಪೋಸ್ಟರ್ ಗಳ ತೆರುವು ಹೌದು
ಅತ್ತ ಲೋಕಸಭಾ ಚುನಾವಣೆಗೆ ಮಹೂರ್ತ ಘೋಷಣೆಯಾಗುತ್ತಿದ್ದಂತೆ ಇತ್ತ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಆಯುಕ್ತರು ಕಾರ್ಯ ಪ್ರವೃತ್ತರಾಗಿದ್ದಾರೆ.ಹೌದು ಲೋಕಸಭಾ ಚುನಾವಣೆಯ ಘೋಷಣೆಯ ಬೆನ್ನಲ್ಲೇ ನೀತಿ ಸಂಹಿತೆ ಜಾರಿಯಾಗಿದೆ.ಅತ್ತ ದಿನಾಂಕ ಪ್ರಕಟ ವಾಗುತ್ತಿದ್ದಂತೆ ಇತ್ತ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಆಯುಕ್ತರು ಅಖಾಡಕ್ಕಿ ಳಿದಿದ್ದಾರೆ.
ಅವಳಿ ನಗರದ ಪಾಲಿಕೆಯ ವ್ಯಾಪ್ತಿಯಲ್ಲಿ ಬರುವ ಸಾರ್ವಜನಿಕ ಪ್ರದೇಶಗಳಲ್ಲಿರುವ ರಾಜಕೀಯ ಪಕ್ಷಗಳ ಗೋಡೆ ಬರಹ,ಬ್ಯಾನರ್,ಬಂಟಿಂಗ್ಸ್, ಪ್ಲೇಕ್ಸ್,ಸೇರಿದಂದೆ ಎಲ್ಲೆಂದರಲ್ಲಿ ಹಾಕಲಾಗಿರುವ ರಾಜಕೀಯ ಪಕ್ಷಗಳ ಪೋಸ್ಟರ್, ಬ್ಯಾನರ್, ಹಾಗೂ ಬಂಟಿಂಗ್ಸ್ ಗಳ ತೆರುವು ಕಾರ್ಯಾಚರಣೆ ಆರಂಭಗೊಂಡಿದೆ.ಸಹಾಯಕ ಚುನಾವಣಾಧಿಕಾ ರಿಗಳು ಮಹಾನಗರ ಪಾಲಿಕೆಯ ಆಯುಕ್ತರ ನಿರ್ದೇಶನದಂತೆ ಎಲ್ಲಾ ವಲಯ ಸಹಾಯಕ ಆಯುಕ್ತರ
ಮುಂದಾಳತ್ವದಲ್ಲಿ ತಮ್ಮ ವಲಯದ ಅಧೀನದಲ್ಲಿ ಬರುವ ಪ್ರದೇಶದಲ್ಲಿ ರಾಜಕೀಯ ಪೋಸ್ಟರ್ ಗಳನ್ನು, ಬ್ಯಾನರ್ ಗಳನ್ನು ಆರೋಗ್ಯ ನಿರೀಕ್ಷಕರು ತಮ್ಮ ಸ್ವಚ್ಚತಾ ಸಿಬ್ಬಂದಿ ಗಳಿಂದ ತೆರವು ಕಾರ್ಯಾಚರಣೆ ಮಾಡಿಸಲಾಯಿತು ಸಂಪೂರ್ಣ ವಾಗಿ ತೆರವುಗೊಳಿಸುವಂತೆ ಸಹಾಯಕ ಚುನಾವಣಾಧಿಕಾರಿಗಳಾದ
ಡಾ ಶ್ರೀ ಈಶ್ವರ ಉಳ್ಳಾಗಡ್ಡಿಯವರು ಆದೇಶಿ ಸಿದ್ದು ಹೀಗಾಗಿ ಎಲ್ಲೇಂದರಲ್ಲಿ ಬೇಕಾ ಬಿಟ್ಟಿಯಾಗಿ ಹಾಕಲಾಗಿರುವ ಇವುಗಳನ್ನು ಪಾಲಿಕೆಯ ಪೌರ ಕಾರ್ಮಿಕರೊಂದಿಗೆ ಅಧಿಕಾರಿಗಳು ತೆರುವು ಮಾಡುತ್ತಿದ್ದು ಮೊದಲನೇಯ ದಿನವೇ ಸಾಕಷ್ಟು ಪ್ರಮಾಣದಲ್ಲಿ ಇವುಗಳ ತೆರುವು ನಗರದಲ್ಲಿ ಕಂಡು ಬಂದಿತು.
ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..