ಹಾವೇರಿ –
ಗುತ್ತಿಗೆದಾರನ ಬಿಲ್ ಪಾಸ್ ಮಾಡಲು ಹಣದ ಬೇಡಿಕೆ ಇಟ್ಟಿದ್ದ ನಗರ ಸಭೆಯ ಆಯುಕ್ತರೊಬ್ಬರು ಎಸಿಬಿ ಬಲೆಗೆ ಬಿದ್ದ ಘಟನೆ ಹಾವೇರಿ ಜಿಲ್ಲೆಯಲ್ಲಿ ನಡೆದಿದೆ. ಹೌದು ಒಂದು ಕಡೆಗೆ ರಾಜ್ಯಾದ್ಯಂತ ಎಸಿಬಿ ದಾಳಿಗೆ ಭ್ರಷ್ಟ ಅಧಿಕಾರಿ,ಸಿಬ್ಬಂದಿ ಸಿಕ್ಕಿ ಹಾಕಿಕೊಳ್ಳುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿದ್ದು ದಾಳಿಯೊಂದರಲ್ಲಿ ಲಂಚ ಪಡೆಯುತ್ತಿದ್ದ ನಗರ ಸಭೆ ಆಯುಕ್ತರೇ ಸಿಕ್ಕಿ ಹಾಕಿಕೊಂಡಿದ್ದಾರೆ.
ಹಾವೇರಿ ನಗರ ಸಭೆ ಆಯುಕ್ತ ಎಂ.ವಿ. ಪೂಜಾರ್ ಎಸಿಬಿ ದಾಳಿಯಲ್ಲಿ ಸಿಕ್ಕಿಬಿದ್ದ ಆರೋಪಿಯಾಗಿದ್ದು ಗುತ್ತಿಗೆದಾರ ರೊಬ್ಬರಿಂದು ಹಣ ಪಡೆಯುತ್ತಿರುವಾಗಲೇ ಸಿಕ್ಕಿಬಿದ್ದಿದ್ದಾರೆ. ಎಸಿಬಿ ಡಿವೈಎಸ್ಪಿ ಗೋಪಿ ನೇತೃತ್ವದಲ್ಲಿ ಈ ದಾಳಿ ನಡೆದಿದೆ
ಗುತ್ತಿಗೆದಾರರೊಬ್ಬರ ಬಿಲ್ ಪಾಸ್ ಮಾಡಲು ಕಮಿಷನರ್ ಪೂಜಾರ್ 50 ಸಾವಿರ ರೂ ಲಂಚ ಕೇಳಿದ್ದರು ಬಳಿಕ 15,000 ಸಾವಿರ ರೂ ಲಂಚ ಪಡೆಯುವಾಗ ಸಿಕ್ಕಿಬಿದ್ದಿ ದ್ದಾರೆ ಹಾವೇರಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ.