ಗುತ್ತಲ –
ಮುಖ್ಯಶಿಕ್ಷಕ ಹುದ್ದೆಗೆ ಶಿಕ್ಷಕರ ನಡುವೆಯೇ ಪೈಪೋಟಿ ನಡೆದು ಪೊಲೀಸ್ ಠಾಣೆ ಮೆಟ್ಟಿಲು ಹತ್ತಿದ ಘಟನೆ ಗುತ್ತಲದಲ್ಲಿ ನಡೆದಿದೆ ಹೌದು ಪ್ರಾಥಮಿಕ ಕನ್ನಡ ಹೆಣ್ಣು ಮಕ್ಕಳ ಸರ್ಕಾರಿ ಶಾಲೆಯ ಪ್ರಭಾರ ಮುಖ್ಯಶಿಕ್ಷಕ ಹುದ್ದೆಗೆ ಶಿಕ್ಷಕರ ನಡುವೆಯೇ ಪೈಪೋಟಿ ಶುರುವಾಗಿದೆ. ಕೆಲ ದಿನಗಳ ಅವಧಿಯಲ್ಲಿ ಮೂವರು ಶಿಕ್ಷಕರು, ಪ್ರಭಾರಿ ಮುಖ್ಯಶಿಕ್ಷಕರಾಗಿ ಆದೇಶ ಪಡೆದುಕೊಂಡಿದ್ದಾರೆ.
ಇದೇ ಹುದ್ದೆಯ ವಿಚಾರವಾಗಿ ಶಿಕ್ಷಕರೊಬ್ಬರು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.ಶಾಲೆಯೊಳಗಿನ ಶಿಕ್ಷಕರ ಪೈಪೋಟಿಯ ಜಗಳ ಬೀದಿಗೆ ಬಂದಿದ್ದರಿಂದ ಮಕ್ಕಳ ಪೋಷಕರು ಆತಂಕಗೊಂಡಿದ್ದಾರೆ ಶಿಕ್ಷಕರ ನಡುವೆಯೇ ಪರಸ್ಪರ ಸಹಕಾರ ಇಲ್ಲದಿದ್ದರಿಂದ,ಮಕ್ಕಳ ಶಿಕ್ಷಣದ ಮೇಲೆ ಪರಿಣಾಮ ಬೀರುತ್ತಿರುವುದಾಗಿ ಪೋಷಕರು ಆರೋಪಿಸಿದ್ದಾರೆ
ಸಿದ್ದರಾಮಯ್ಯ ಹಿರೇಮಠ ಶಾಲೆಯ ಮುಖ್ಯ ಶಿಕ್ಷಕ ರಾಗಿದ್ದು 2023ರಲ್ಲಿ ವರ್ಗಾವಣೆಗೊಂಡರು. ವರ್ಗಾವಣೆ ಯಿಂದ ತೆರವಾದ ಸ್ಥಾನಕ್ಕೆ, ಪ್ರಭಾರಿಯಾಗಿ ನೇಮಕಗೊಳ್ಳಲು ಶಾಲೆಯ ಶಿಕ್ಷಕ ಶಂಕರ ಎನ್.ಎ. ಅವರು ಪ್ರಯತ್ನಿಸಿದರು.ಪ್ರಯತ್ನ ಫಲ ನೀಡಲಿಲ್ಲ. ಅವರ ಸ್ಥಾನಕ್ಕೆ ಅದೇ ಶಾಲೆಯ ಸಹ ಶಿಕ್ಷಕ ಓ.ಸಿ. ಪಾಟೀಲ ಪ್ರಭಾರಿ ಮುಖ್ಯ ಶಿಕ್ಷಕರನ್ನಾಗಿ ಮಾಡಿ ಕ್ಷೇತ್ರ ಶಿಕ್ಷಣಾಧಿಕಾರಿ ಆದೇಶ ನೀಡಿದ್ದರು.
ಪಾಟೀಲ ಅವರು ಕೆಲಸ ಮಾಡಿಕೊಂಡು ಹೊರಟಿದ್ದರು. ಶಿಕ್ಷಕ ಶಂಕರ, ತಾವು ಪ್ರಭಾರಿ ಮುಖ್ಯ ಶಿಕ್ಷಕ ಹುದ್ದೆಗೆ ಅರ್ಹರಿರುವುದಾಗಿ ವಾದಿಸಲಾರಂಭಿಸಿದ್ದರು. ಅದೇ ವಿಚಾರವಾಗಿ ಶಾಲೆಯಲ್ಲಿ ಪದೇ ಪದೇ ಗಲಾಟೆ ನಡೆಯುತ್ತಿತ್ತು. ಇಬ್ಬರೂ ಶಿಕ್ಷಕರು, ಕೊಠಡಿಗಳಲ್ಲಿ ಮಕ್ಕಳ ಎದುರೇ ಏರು ಧ್ವನಿಯಲ್ಲಿ ಜಗಳ ಮಾಡುತ್ತಿ ದ್ದರು.ಪದೇ ಪದೇ ಜಗಳ ಮಾಡಿದರೆ, ವಾದಿಸಿದರೆ ಜಾತಿ ನಿಂದನೆ ಪ್ರಕರಣ ಹಾಕುತ್ತೇನೆ’ ಎಂಬುದಾಗಿ ಶಿಕ್ಷಕ ಶಂಕರ್ ಅವರು ಪಾಟೀಲ ಅವರಿಗೆ ಬೆದರಿಸುತ್ತಿದ್ದರು.
ಬೇಸತ್ತ ಪಾಟೀಲ, ಮುಖ್ಯಶಿಕ್ಷಕ ಹುದ್ದೆ ಬೇಡವೆಂದು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ತಿಳಿಸಿದ್ದರು. ಶಾಲೆಗೆ ಬೇಟಿ ನೀಡಿದ್ದ ಶಿಕ್ಷಣಾಧಿಕಾರಿ, ಪರಿಸ್ಥಿತಿ ಬಗ್ಗೆ ಮಾಹಿತಿ ಪಡೆದುಕೊಂಡಿದ್ದರು. ಶಾಲೆಯ ಇನ್ನೊಬ್ಬ ಶಿಕ್ಷಕಿ ಆರ್.ಎಸ್.ಪಠಾಣ ಅವರನ್ನು ಪ್ರಭಾರಿ ಮುಖ್ಯ ಶಿಕ್ಷಕಿಯನ್ನಾಗಿ ಹೊಸದಾಗಿ ನೇಮಿಸಿದ್ದರು.ಪಠಾಣ ಅವರ ವಿರುದ್ಧವೂ ಶಂಕರ ಅವರು ಶಿಕ್ಷಣಾಧಿಕಾರಿಗೆ ದೂರು ನೀಡಿದ್ದರು.ಇದರಿಂದ ಬೇಸತ್ತ ಪಠಾಣ ಸಹ ಮುಖ್ಯಶಿಕ್ಷಕಿ ಹುದ್ದೆ ಬೇಡವೆಂದು ಹಿಂದೆ ಸರಿದಿದ್ದರು.
ಪ್ರಭಾರಿ ಮುಖ್ಯ ಶಿಕ್ಷಕ ಹುದ್ದೆಯೇ ದೊಡ್ಡ ಸವಾಲಾ ಗಿತ್ತು. ಪಠಾಣ ಅವರ ನಂತರ, ಪಟ್ಟಣದ ಚಿದಂಬರ ನಗರದ ಕಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಮೌನೇಶ ಕರಿಯಮ್ಮನವರ ಅವರನ್ನು ಹೆಚ್ಚುವರಿ ಪ್ರಭಾರಿ ಮುಖ್ಯ ಶಿಕ್ಷಕರನ್ನಾಗಿ ಮಾಡಿ ಶಿಕ್ಷಣಾಧಿಕಾರಿಯ ವರು ಆದೇಶ ನೀಡಿದ್ದರು.
ಸಧ್ಯ ಶಿಕ್ಷಕ ಶಂಕರ ಅವರನ್ನು ಪ್ರಭಾರಿ ಮುಖ್ಯ ಶಿಕ್ಷಕ ಎಂಬುದಾಗಿ ಆದೇಶ ನೀಡಲಾಗಿದೆ.ಅದೇ ಹುದ್ದೆಯಲ್ಲಿ ಅವರು ಮುಂದುವರಿಯುತ್ತಿದ್ದಾರೆ.
ಸುದ್ದಿ ಸಂತೆ ನ್ಯೂಸ್ ಗುತ್ತಲ…..