ತುಮಕೂರು –
ಶಿಕ್ಷಣ ಸಚಿವ ನಾಗೇಶ್ ವಿರುದ್ಧ ದೂರು ತ್ರಿವರ್ಣ ಧ್ವಜಕ್ಕಿಂತ ಎತ್ತರದಲ್ಲಿ ಕೇಸರಿ ಧ್ವಜ ಹಾರಿಸಿದ ಆರೋಪ ಹೌದು ತ್ರಿವರ್ಣ ಧ್ವಜಕ್ಕಿಂತ ಎತ್ತರದಲ್ಲಿ ಕೇಸರಿ ಧ್ವಜ ಹಾರಿಸಿದ್ದ ಆರೋಪದ ಹಿನ್ನೆಲೆಯಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಅವರ ವಿರುದ್ಧ ದೂರು ನೀಡಲಾಗಿದೆ.
ತುಮಕೂರು ಜಿಲ್ಲೆಯ ತಿಪಟೂರು ಡಿವೈಎಸ್ಪಿ ಕಚೇರಿಗೆ ಸಚಿವರ ವಿರುದ್ಧ ದೂರು ನೀಡಲಾಗಿದೆ.ತಿಪಟೂರಿನಲ್ಲಿ ತ್ರಿವರ್ಣ ಧ್ವಜ ಮೆರವಣಿಗೆ ನಡೆಸಲಾಗಿದ್ದು ಶಾಲಾ ಮಕ್ಕಳೊಂದಿಗೆ ಧ್ವಜ ಹಿಡಿದು ಸಚಿವ ನಾಗೇಶ್ ಮೆರವ ಣಿಗೆಯಲ್ಲಿ ಭಾಗಿಯಾಗಿದ್ದರು.
ಮೆರವಣಿಗೆ ವೇಳೆ ಕೇಸರಿ ಬಾವುಟವನ್ನು ರಾಷ್ಟ್ರಧ್ವಜ ಕ್ಕಿಂತ ಎತ್ತರದಲ್ಲಿ ಸಚಿವರು ಹಾರಿಸಿದ್ದರು.ಕೇಸರಿ ಧ್ವಜದ ಕೆಳಗೆ ತ್ರಿವರ್ಣ ಧ್ವಜ ಹಿಡಿದುಕೊಂಡಿದ್ದರು.ಈ ಹಿನ್ನೆಲೆ ಯಲ್ಲಿ ಶಿಕ್ಷಣ ಮಂತ್ರಿ ರಾಷ್ಟ್ರಧ್ವಜಕ್ಕೆ ಅಪಮಾನ ಮಾಡಿ ದ್ದಾರೆಂದು ಆರೋಪಿಸಿ ಸಚಿವ ನಾಗೇಶ್ ಅವರ ವಿರುದ್ಧ ಸೂಕ್ತ ಕ್ರಮಕ್ಕೆ ಆಗ್ರಹಿಸಿ ಯುವ ಕಾಂಗ್ರೆಸ್ ಮುಖಂಡ ಬಿ.ವಿ. ಹರಿಪ್ರಸಾದ್ ತಿಪಟೂರು ಡಿವೈಎಸ್ಪಿ ಕಚೇರಿಗೆ ದೂರು ನೀಡಿದ್ದಾರೆ.