ಕೋಲಾರ –
ಮುಖ್ಯಶಿಕ್ಷಕರೊಬ್ಬರ ವಿರುದ್ಧ ಶಿಕ್ಷಕಿಯರು ಶಾಸಕರಿಗೆ ದೂರು ನೀಡಿದ ಘಟನೆ ಮುಳಬಾ ಗಿಲಿ ನಲ್ಲಿ ನಡೆದಿದೆ.ಮಹಿಳಾ ಸಿಬ್ಬಂದಿ ಶೋಷಣೆ ಆರೋಪ ಸಧ್ಯ ಕೇಳಿ ಬಂದಿದ್ದು ಮುಖ್ಯ ಶಿಕ್ಷಕರ ವಿರುದ್ಧ ಶಿಕ್ಷಕಿಯರ ದೂರನ್ನು ನೀಡಿದ್ದಾರೆ ನಗರದ ಡಿವಿಜಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕರ ವಿರುದ್ಧ ಅದೇ ಶಾಲೆಯ ಶಿಕ್ಷಕಿಯರು ಶಾಸಕ ಸಮೃದ್ಧಿ ಮಂಜುನಾಥ್ ಅವರಿಗೆ ದೂರು ನೀಡಿದರು.
ಮುಖ್ಯ ಶಿಕ್ಷಕರು ಶಾಲೆಯ ಮಹಿಳಾ ಸಿಬ್ಬಂದಿ ಯನ್ನು ಶೋಷಣೆ ಮಾಡುತ್ತಿದ್ದಾರೆ. ಬಹಿರಂಗ ವಾಗಿ ಹೀಯಾಳಿಸುತ್ತಾ, ಅಸಭ್ಯವಾಗಿ ವರ್ತಿಸು ತ್ತಾರೆ ಎಂದು ಐವರು ಶಿಕ್ಷಕಿಯರು ಶಾಸಕರ ಮುಂದೆ ಅಳಲು ತೋಡಿಕೊಂಡರು.
ನಾನು ಯಾರೊಂದಿಗಾದರೂ ಅಸಭ್ಯವಾಗಿ ವರ್ತಿಸಿದ್ದರೆ ಶಾಲೆಯ ಸಿಸಿಟಿವಿ ಕ್ಯಾಮೆರಾಗಳನ್ನು ಪರೀಕ್ಷಿಸಬಹುದು.ನನ್ನ ವಿರುದ್ಧ ಮಾಡಿರುವ ಆರೋಪ ಸುಳ್ಳು ಎಂದು ಮುಖ್ಯ ಶಿಕ್ಷಕ ಸೊಣ್ಣಪ್ಪ ಪ್ರತಿಕ್ರಿಯಿಸಿದ್ದಾರೆ.ಡಿವಿಜಿ ಸರ್ಕಾರಿ ಹಿರಿಯ ಪ್ರಾಥ ಮಿಕ ಶಾಲೆಯ ಮುಖ್ಯ ಶಿಕ್ಷಕರ ವಿರುದ್ಧ ಬಂದಿರುವ ದೂರುಗಳ ಆಧಾರದ ಮೇಲೆ ಜಿಲ್ಲಾ ಸಾರ್ವಜನಿಕ ಉಪ ನಿರ್ದೇಶಕರಿಗೆ ವರದಿ ಕಳುಹಿಸಲಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಆರ್.ಗಂಗರಾಮಯ್ಯ ತಿಳಿಸಿದ್ದಾರೆ.
ಸುದ್ದಿ ಸಂತೆ ನ್ಯೂಸ್ ಕೋಲಾರ…..