ಬೆಂಗಳೂರ –
ಶಿಕ್ಷಣ ಸಚಿವ ಮಧು ಬಂಗಾರಪ್ಪ ಉಪ ಮುಖ್ಯಮಂತ್ರಿ ಡಿಕೆಶಿ ಯವರು ಅಧಿಕಾರ ದುರ್ಬಳಕೆ ಮಾಡಿಕೊಂಡಿದ್ದಾರೆಂದು ಇವರ ಮೇಲೆ ದೂರು ನೀಡಲಾಗಿದೆ ಹೌದು ಡಿಸಿಎಂ ಡಿ.ಕೆ.ಶಿವಕುಮಾರ್ ಹಾಗೂ ಶಿಕ್ಷಣ ಸಚಿವ ಮಧು ಬಂಗಾರಪ್ಪ ವಿರುದ್ಧ ಜೆಡಿಎಸ್ ಚುನಾವಣಾ ಆಯೋಗಕ್ಕೆ ದೂರು ನೀಡಿದೆ.
ರಾಮನಗರ, ಬೆಂಗಳೂರು ಗ್ರಾಮಾಂತರ ಜಿಲ್ಲೆ ಹಾಗೂ ಬೆಂಗಳೂರು ನಗರ ಜಿಲ್ಲೆ ಡಿಡಿಪಿಐ, ಬಿಇಒಗಳ ಜೊತೆ ಸಭೆ ಸೇರಿಸಿ ಡಿಸಿಎಂ ಹಾಗೂ ಶಿಕ್ಷಣ ಸಚಿವರು ಪ್ರಚಾರ ಮಾಡುತ್ತಿರುವ ಕುರಿತು ಚುನಾವಣಾ ಅಧಿಕಾರಿಗಳಿಗೆ ಜೆಡಿಎಸ್ ದೂರು ನೀಡಿದೆ.
ತಮ್ಮ ಪಕ್ಷದ ಅಭ್ಯರ್ಥಿ ಪರ ಮತ ಚಲಾಯಿಸು ವಂತೆ ಪ್ರಭಾವ ಬೀರುತಿದ್ದಾರೆ.ಅಧಿಕಾರ ದುರು ಪಯೋಗ ಮಾಡಿಕೊಂಡು ಇಬ್ಬರು ನಾಯಕರು ಡಿಡಿಪಿಐ, ಬಿಇಒಗಳನ್ನು ಪ್ರಚಾರಕ್ಕೆ ಬಳಸುತ್ತಿ ದ್ದಾರೆ ಎಂದು ದೂರಲಾಗಿದ್ದು ಸದ್ಯ ಈ ಒಂದು ಕುರಿತು ದೂರನ್ನು ಸ್ವೀಕರಿಸಿರುವ ಅಧಿಕಾರಿ ಗಳು ಮುಂದಿನ ಕ್ರಮವನ್ನು ಕೈಗೊಂಡಿದ್ದಾರೆ.
ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..