ಬೆಂಗಳೂರು –
ರಾಜ್ಯ ಸರ್ಕಾರದಿಂದ 7ನೇ ವೇತನ ಸಮಿತಿ ರಚನೆ ಕುರಿತಂತೆ ಅಧಿಕೃತವಾದ ಆದೇಶ ಬಂದ ಕೂಡಲೇ ಮುಖ್ಯಮಂತ್ರಿ ಮತ್ತು ಆರ್ಧಿಕ ಇಲಾಖೆಯ ಅಧಿಕಾರಿಗಳನ್ನು ಭೇಟಿಯಾಗಿರುವ ಆಯೋಗದ ಅಧ್ಯಕ್ಷ ಡಾ ಸುಧಾಕರ್ ರಾವ್ ನೇತ್ರತ್ವದಲ್ಲಿನ ಟೀಮ್ ಚಟುವಟಿಕೆಗಳನ್ನು ಆರಂಭ ಮಾಡಿದ್ದು ಮುಂದೆ ಬರುವ ಸಾಲು ಸಾಲು ಚುನಾವಣೆಗಳನ್ನು ಮುಂದಿಟ್ಟುಕೊಂಡಿ ರುವ ಸಮಿತಿಯು ಕಾರ್ಯ ಚಟುವಟಿಕೆಗಳನ್ನು ಚುರುಕುಗೊಳಿಸಿದೆ.
ಈಗಾಗಲೇ ಒಂದು ಬಾರಿ ಮೊದಲು ಮುಖ್ಯ ಮಂತ್ರಿ ಅವರನ್ನು ಭೇಟಿಯಾಗಿ ಗ್ರೀನ್ ಸಿಗ್ನಲ್ ಪಡೆದುಕೊಂಡಿರುವ ಸಮಿತಿ ನಂತರ ಹಿರಿಯ ಅಧಿಕಾರಿಗಳನ್ನು ಭೇಟಿಯಾಗಿ ಮಾತುಕತೆ ನಡೆಸಿ ನಂತರ ವರದಿ ಸಿದ್ದತೆ ಕುರಿತಂತೆ ರಾಜ್ಯದ ಸರ್ಕಾರಿ ನೌಕರರ ಅಂಕಿ ಅಂಶಗಳನ್ನು ಪಡೆದು ಕೊಂಡಿದ್ದು ಆರ್ಥಿಕ ಇಲಾಖೆಯಿಂದ 7ನೇ ವೇತನ ಆಯೋಗದ ಯೋಜನಗೆ ವ್ಯಾಪ್ತಿಯಲ್ಲಿ ಬರುವ ನೌಕರರ ವೇತನದ ಡಾಟಾವನ್ನು ಸಮಿತಿಯ ಸದಸ್ಯರು ಸರ್ಕಾರಿಂದ ಪಡೆದುಕೊಂಡಿದ್ದು
ಇದರ ನಂತರ ಹಾಗೇ 6ನೇ ವೇತನ ಆಯೋಗದ ವರದಿಯನ್ನು ಕೂಡಾ ಸರ್ಕಾರಿಂದ ಪಡೆದು ಕೊಂಡಿರುವ ಸಮಿತಿಯ ಸರ್ವ ಸದಸ್ಯರು 7ನೇ ವೇತನ ಆಯೋಗ ರಚನೆ ಕುರಿತಂತೆ ಎಲ್ಲಾ ದಾಖಲೆಗಳನ್ನು ಈಗಾಗಲೇ ಸಂಪೂರ್ಣವಾಗಿ ಶೇಖರಣೆ ಮಾಡಿಕೊಳ್ಳುತ್ತಿದ್ದು ಇನ್ನೇನು ಎರಡು ಮೂರು ದಿನಗಳಲ್ಲಿ ಈ ಕುರಿತಂತೆ ಮತ್ತಷ್ಟು ಇದಕ್ಕೆ ಬೇಕಾದ ಎಲ್ಲಾ ದಾಖಲೆಗಳನ್ನು ಪಡೆದು ಕೊಂಡ ನಂತರ 7ನೇ ವೇತನ ಆಯೋಗದ ವರದಿ ಸಿದ್ದತೆ ಕಾರ್ಯ ನಡೆಯಲಿದೆ.
ಇದರೊಂದಿಗೆ ಸಧ್ಯ ಮುಂದೆ ಸಾಲು ಸಾಲು ಚುನಾವಣೆಗಳು ಅದರಲ್ಲೂ ವಿಧಾನ ಸಭಾ ಚುನಾವಣೆಗಳು ಕೂಡಾ ಬರಲಿದ್ದು ಹೀಗಾಗಿ ಇವೆಲ್ಲವುಗಳನ್ನು ಮುಂದಿಟ್ಟುಕೊಂಡಿರುವ ಸಮಿತಿ ಕಾಲ ಮಿತಿಯಲ್ಲಿ ಸಿದ್ದತೆ ಮಾಡಲಿದೆ ಎಂಬ ಮಾತುಗಳು ಕೇಳಿ ಬರುತ್ತಿದ್ದು ಏನೇನಾ ಗಲಿದೆ ಎಂಬುದನ್ನು ಕಾದು ನೋಡಬೇಕಿದೆ.
ಸುದ್ದಿ ಸಂತೆ ನ್ಯೂಸ್…..






















