ಬೆಂಗಳೂರು –
ಹತ್ತು ಹಲವಾರು ಗೊಂದಲ ಸಮಸ್ಯೆಗಳ ನಡುವೆಯೂ ಕೂಡಾ ರಾಜ್ಯದಲ್ಲಿ ಎಸ್ ಎಸ್ ಎಲ್ ಸಿ ಪರೀಕ್ಷೆಗಳು ಆರಂಭವಾಗಿದ್ದು ಮೊದಲ ದಿನ ಶಾಂತಿಯುತ ವಾಗಿ ಪರೀಕ್ಷೆ ನಡೆದಿದ್ದು ಮುಕ್ತಾಯವಾಗಿದ್ದು ಇನ್ನೂ ಮೊದಲ ದಿನವೇ ಅನಾರೋಗ್ಯ ಮತ್ತಿತರ ಕಾರಣಗಳಿಂದ 20,994 ಮಕ್ಕಳು ಗೈರು ಹಾಜರಾಗಿದ್ದಾರೆ.

8,69,399 ವಿದ್ಯಾರ್ಥಿಗಳು ಎಸ್‌ಎಸ್‌ಎಲ್ ಸಿ ಪರೀಕ್ಷೆಗೆ ಹಾಜರಾಗಬೇಕಿತ್ತು.ಕಳೆದ ವರ್ಷ 3769 ವಿದ್ಯಾರ್ಥಿಗಳು ಪರೀಕ್ಷೆಗೆ ಗೈರುಹಾಜರಾಗಿದ್ದರು.ಮೊದಲ ದಿನದ ಪರೀಕ್ಷೆ ಯ ವೇಳೆ ಯಾವುದೇ ನಕಲು ಕೇಸ್ ವರದಿಯಾಗಿಲ್ಲ. ಯಾವುದೇ ವಿದ್ಯಾರ್ಥಿಗೆ ಕೊರೋನಾ ಪಾಸಿಟಿವ್ ಬಂದಿಲ್ಲ ಎಂದು ಕರ್ನಾಟಕ ಪ್ರೌಢ ಶಿಕ್ಷಣ ಮಂಡಳಿಯಿಂದ ಮಾಹಿತಿ ನೀಡಲಾಗಿದೆ.


ಮೊದಲ ದಿನ ಪ್ರಥಮ ಭಾಷೆ ಪರೀಕ್ಷೆ ನಡೆದಿದ್ದು, 8,48,405 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದಾರೆ. ಇವರಲ್ಲಿ 1701 ಪುನರಾವರ್ತಿತ ಅಭ್ಯರ್ಥಿಗಳು 35,509 ಖಾಸಗಿ ಅಭ್ಯರ್ಥಿಗಳು ಹಾಗೂ 8,11,195 ಮೊದಲ ಬಾರಿ ಪರೀಕ್ಷೆಗೆ ಹಾಜರಾದ ವಿದ್ಯಾರ್ಥಿಗಳು ಸೇರಿದ್ದಾರೆ. ಅನಾ ರೋಗ್ಯದ ಕಾರಣದಿಂದಾಗಿ 336 ವಿದ್ಯಾರ್ಥಿಗಳು ವಿಶೇಷ ಕೊಠಡಿಯಲ್ಲಿ ಪರೀಕ್ಷೆ ಬರೆದಿದ್ದಾರೆನ್ನಲಾಗಿದೆ.