ರಾಜ್ಯದಲ್ಲಿ ಎಲ್ಲೇಲ್ಲಿ ಲೋಕಾಯುಕ್ತ ದಾಳಿ – ಏನೇನು ವಶಪಡಿಸಿಕೊಳ್ಳಲಾಯಿತು ಕಂಪ್ಲೀಟ್ ಮಾಹಿತಿ…..

Suddi Sante Desk
ರಾಜ್ಯದಲ್ಲಿ ಎಲ್ಲೇಲ್ಲಿ ಲೋಕಾಯುಕ್ತ ದಾಳಿ – ಏನೇನು ವಶಪಡಿಸಿಕೊಳ್ಳಲಾಯಿತು ಕಂಪ್ಲೀಟ್ ಮಾಹಿತಿ…..

ಬೆಂಗಳೂರು

ರಾಜ್ಯದ 48 ಕಡೆ ಲೋಕಾಯುಕ್ತ ಅಧಿಕಾರಿಗಳ ಭರ್ಜರಿ ಬೇಟೆ: ಕಂತೆ ಕಂತೆ ನೋಟು, ರಾಶಿ ಆಭರಣ, ಆಸ್ತಿ ದಾಖಲೆ ಪತ್ರ ವಶಕ್ಕೆ ವಶಪಡಿ ಸಿಕೊಂಡ ಆಸ್ತಿ ವಿವರ ಕಂಪ್ಲೀಟ್ ಮಾಹಿತಿ

ರಾಜ್ಯದ 48 ಕಡೆಗಳಲ್ಲಿ ನಿನ್ನೆ ಏಕಕಾಲದಲ್ಲಿ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಬೆಂಗಳೂರು ನಗರ, ಚಿತ್ರದುರ್ಗ, ಮೈಸೂರು, ತುಮಕೂರು, ಬೀದರ್, ಧಾರವಾಡ, ದಾವಣಗೆರೆ, ರಾಯಚೂರು, ಮಡಿಕೇರಿಯಲ್ಲಿ 200 ಲೋಕಾಯುಕ್ತ ಅಧಿಕಾರಿಗಳು ಸರ್ಕಾರಿ ಅಧಿಕಾರಿಗಳ ಮನೆ ಮತ್ತು ಕಚೇರಿ ಮೇಲೆ ದಾಳಿ ಮಾಡಲಾಗಿದೆ

ಕೊಟ್ಯಾಂತರ ರೂ. ಜಪ್ತಿ ಮಾಡಿದ್ದಾರೆ.
ಬೆಂಗಳೂರಿನ 23 ಸ್ಥಳಗಳಲ್ಲಿ ದಾಳಿ ನಡೆಸಿರುವ ಲೋಕಾಯುಕ್ತ ಪೊಲೀಸರು ಆದಾಯ ಮೀರಿ ಆಸ್ತಿ ಗಳಿಸಿದವರ ಮನೆಯಲ್ಲಿ ಶೋಧ ಕಾರ್ಯ ನಡೆಸಿದ್ದಾರೆ. ಬೆಂಗಳೂರಿನ ಮಹದೇವಪುರ BBMP ಆರ್​ಐ ಆಗಿರುವ ನಟರಾಜ್​ ಮನೆ ಮೇಲೆ ದಾಳಿ ವೇಳೆ ಅಂದಾಜು 4.91 ಕೋಟಿ ರೂ. ಮೌಲ್ಯದ ಅಕ್ರಮ ಆಸ್ತಿ-ಪಾಸ್ತಿ ಪತ್ತೆ ಆಗಿದೆ.

ಆರ್‌ಐ ಎಸ್.ನಟರಾಜ್‌ಗೆ ಸೇರಿದ 4 ಸ್ಥಳಗಳಲ್ಲಿ ದಾಳಿ ಮಾಡಿದ್ದು, 3.91 ಕೋಟಿ ರೂ. ಸ್ಥಿರಾಸ್ತಿ, 1 ಕೋಟಿ ರೂ. ಚರಾಸ್ತಿ, ನಿಗದಿತ ಆದಾಯಕ್ಕಿಂತ ಶೇಕಡಾ 391ಕ್ಕಿಂತ ಹೆಚ್ಚು ಆಸ್ತಿ ಪತ್ತೆಯಾಗಿದೆ.

ಗ್ರೇಡ್-2 ತಹಶೀಲ್ದಾರ್ ಶಿವರಾಜು ಮನೆ ಮೇಲೆ ದಾಳಿ ವೇಳೆ 3.50 ಕೋಟಿ ರೂ. ಸ್ಥಿರಾಸ್ತಿ, 65 ಲಕ್ಷ ರೂ. ಚರಾಸ್ತಿ ಸೇರಿದಂತೆ ಒಟ್ಟು 4.15 ಕೋಟಿ ರೂ. ಪತ್ತೆ ಆಗಿದೆ.

ಜಿಲ್ಲಾ ಪಂಚಾಯಿತಿ ಸದಸ್ಯ ಲಕ್ಷ್ಮೀಪತಿಗೆ ಸೇರಿದ್ದ 6 ಸ್ಥಳಗಳಲ್ಲಿ ದಾಳಿ ನಡೆದಿದ್ದು, 2.80 ಕೋಟಿ ರೂ. ಸ್ಥಿರ ಆಸ್ತಿ, 1.15 ಕೋಟಿ ರೂ. ಚರ ಆಸ್ತಿ ಸೇರಿದಂತೆ ಒಟ್ಟು 3.95 ಕೋಟಿ ರೂ. ಮೌಲ್ಯದ ಆಸ್ತಿ ಪತ್ತೆಯಾಗಿದೆ.

ಚಿತ್ರದುರ್ಗದ ಎ.ಇ. ಕೆ.ಮಹೇಶ್ ಚರ ಆಸ್ತಿ ಅಂದಾಜು ಮೌಲ್ಯ -20 ಲಕ್ಷ ರೂ. ಸ್ಥಿರಾಸ್ತಿ: ಅಂದಾಜು ಮೌಲ್ಯ-88 ಲಕ್ಷ ರೂ. ಒಟ್ಟು ಮೌಲ್ಯ-1 ಕೋಟಿ 8 ಲಕ್ಷ ರೂ. ಅಂದಾಜು ಮೌಲ್ಯ 211% ಹೆಚ್ಚಳ

ತುಮಕೂರಿನ ಜಂಟಿ ನಿರ್ದೇಶಕ ಕೆ.ಎನ್. ನಾಗರಾಜು ದಾಳೆ ವೇಳೆ ಪತ್ತೆಯಾದ ಚರ ಆಸ್ತಿ ಅಂದಾಜು ಮೌಲ್ಯ 41 ಲಕ್ಷ ರೂ. ದಾಳೆ ವೇಳೆ ಪತ್ತೆಯಾದ ಸ್ಥಿರಾಸ್ತಿ ಅಂದಾಜು ಮೌಲ್ಯ-3 ಕೋಟಿ ರೂ. ಒಟ್ಟು ಮೌಲ್ಯ-3.41 ಕೋಟಿ ರೂ. ಅಂದಾಜು ಮೌಲ್ಯವು 138.19% ಹೆಚ್ಚಳ

ಮಡಿಕೇರಿಯ ಕಂದಾಯ ಇಲಾಖೆ ಅಧಿಕಾರಿ ಡಾ. ನಂಜುಂಡೇಗೌಡ.ದಾಳೆ ವೇಳೆ ಪತ್ತೆಯಾದ ಚರ ಆಸ್ತಿಗಳ ಅಂದಾಜು ಮೌಲ್ಯ – 98 ಲಕ್ಷಕ್ಕೂ ಅಧಿಕ ದಾಳಿ ವೇಳೆ ಪತ್ತೆಯಾದ ಸ್ಥಿರ ಆಸ್ತಿಗಳ ಅಂದಾಜು ಮೌಲ್ಯ – 2,55,00,000 ಒಟ್ಟು ಮೌಲ್ಯ-3,53,43,518 ಅಂದಾಜು ಮೌಲ್ಯ 243.20% ಹೆಚ್ಚಳ

ಕೊಡಗಿನ ಎ.ಇ ಕೆ.ಕೆ. ರಘುಪತಿ ದಾಳೆ ವೇಳೆ ಪತ್ತೆಯಾದ ಚರ ಆಸ್ತಿಗಳ ಅಂದಾಜು ಮೌಲ್ಯ: 1,32 ಕೋಟಿ ರೂ. ದಾಳಿ ವೇಳೆ ಪತ್ತೆಯಾದ ಸ್ಥಿರ ಆಸ್ತಿಗಳ ಅಂದಾಜು ಮೌಲ್ಯ: 2.34 ಕೋಟಿ ರೂ. ಒಟ್ಟು ಮೌಲ್ಯ-3.66 ಕೋಟಿ ರೂ. ಅಂದಾಜು ಮೌಲ್ಯ 205% ಹೆಚ್ಚಳ

ದಾವಣಗೆರೆಯ ಎಸ್.ಸತೀಶ್
ದಾಳಿ ವೇಳೆ ಪತ್ತೆಯಾದ ಚರ ಆಸ್ತಿ ಅಂದಾಜು ಮೌಲ್ಯ: 46 ಲಕ್ಷ ರೂ. ದಾಳಿ ವೇಳೆ ಪತ್ತೆಯಾದ ಸ್ಥಿರಾಸ್ತಿ ಅಂದಾಜು ಮೌಲ್ಯ: 1.16 ಕೋಟಿ ರೂ. ಒಟ್ಟು ಮೌಲ್ಯ: l.62 ಕೋಟಿ ರೂ.

ಕೊಪ್ಪಳ ವ್ಯವಸ್ಥಾಪಕರು, ನಿರ್ಮಿತಿ ಕೇಂದ್ರದ ಮಂಜುನಾಥ ದಾಳಿ ವೇಳೆ ಪತ್ತೆಯಾದ ಚರ ಆಸ್ತಿಗಳ ಅಂದಾಜು ಮೌಲ್ಯ: 57 ಲಕ್ಷ ರೂ. ದಾಳಿ ವೇಳೆ ಪತ್ತೆಯಾದ ಸ್ಥಿರಾಸ್ತಿಗಳ ಅಂದಾಜು ಮೌಲ್ಯ: 2.22 ಕೋಟಿ ರೂ. ಒಟ್ಟು ಮೌಲ್ಯ: 2.79 ಕೋಟಿ ರೂ. ಅಂದಾಜು ಮೌಲ್ಯವು 136 ಹೆಚ್ಚಳ

ಬೀದರ್​ನ ಪೊಲೀಸ್ ಪೇದೆ ವಿಜಯಕುಮಾರ್
ದಾಳಿ ವೇಳೆ ಪತ್ತೆಯಾದ ಚರ ಆಸ್ತಿಗಳ ಅಂದಾಜು ಮೌಲ್ಯ: 54 ಲಕ್ಷ ರೂ. ದಾಳಿ ವೇಳೆ ಪತ್ತೆಯಾದ ಸ್ಥಿರಾಸ್ತಿಗಳ ಅಂದಾಜು ಮೌಲ್ಯ: 1.26 ಕೋಟಿ ರೂ. ಒಟ್ಟು ಮೌಲ್ಯ: 1.80 ಕೋಟಿ ರೂ. ಅಂದಾಜು ಮೌಲ್ಯವು 136 ರಷ್ಟು ಹೆಚ್ಚಳ

ಸುದ್ದಿ ಸಂತೆ ನ್ಯೂಸ್ ಬೆ‌ಂಗಳೂರು‌‌‌‌…..

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.