ಹುಬ್ಬಳ್ಳಿ –
ಯಾವ ದೇಶದಲ್ಲಿ ಕ್ರಿಕೆಟ್ ಟೂರ್ನಿ ನಡೆಯುತ್ತಿದೆ?, ಮುಂದಿನ ಟೂರ್ನಿ ಯಾವ ರಾಷ್ಟ್ರಗಳ ನಡುವೆ ಆಯೋಜನೆಯಾಗಿದೆ?, ಐ.ಪಿ.ಎಲ್. ಪಂದ್ಯಗಳ ಫಲಿತಾಂಶ ಏನಾಯಿತು?, ಹೀಗೆ ಕ್ರಿಕೆಟ್ ನ ವಿಷಯಗಳಿಗೆ ಸಂಬಂಧಿಸಿದ ಮಾಹಿತಿ ಒದಗಿಸಲು ಡಂಬಳ ಎಂಟರಪ್ರೈಸಿಸ್ ಪ್ರೈ ಲಿಂನ ಕಾರ್ಯಧ್ಯಕ್ಷ ನಗರದ ಯುವ ಉದ್ಯಮಿ ಸಿದ್ಧಾರ್ಥ ಡಂಬಳ ಕ್ರೀಕ್ ನೌ ಆಫ್ ಅಭಿವೃದ್ಧಿಪಡಿಸಿದ್ದಾರೆ.ಬೇರೆ ಕ್ರಿಕೆಟ್ ಆಫ್‍ಗಳಿಗಿಂತ ಇದು ಭಿನ್ನವಾಗಿದ್ದು ಇದು ಗೋಗಲ್ ನ ಪ್ಲೇ ಸ್ಟೋರ್ ನಲ್ಲಿ ಮತ್ತು ಆಫ್‍ಲಿನ ಆಫ್ ಸ್ಟೋರ್ ದರಲ್ಲಿ ಕ್ರಿಕೇಟ್ ಪ್ರೇಮಿಗಳಿಗೆ ಉಚಿತವಾಗಿ ಲಭ್ಯವಾಗಿದ್ದು ಅಧೀಕೃತ ವೆಬ್‍ಸೈಟ್ ಶೀಘ್ರದಲ್ಲಿ ಯೇ ಲಭ್ಯವಾಗಲಿದೆ

ಹೌದು 2019ರಲ್ಲಿ ಅವಳಿ ನಗರದ ಖಾಸಗಿ ಹೊಟೇ ಲ್‍ನಲ್ಲಿ ಹಾಲಿ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ ಹಾಲಿ ವಿಧಾನ ಪರಿಷತ್ ಸಭಾಪತಿ ಬಸವ ರಾಜ ಹೊರಟ್ಟಿ, ಮಾಜಿ ಶಾಸಕರು ಹಾಗೂ ಮಾಜಿ ಸಚಿವರಾದ ಎಚ್.ಕೆ.ಪಾಟೀಲ, ಶಾಸಕರಾದ ಅರವಿಂದ ಬೆಲ್ಲದ, ಪ್ರಸಾದ ಅಬ್ಬಯ್ಯ, ಸಿ.ಎಮ್. ನಿಂಬಣ್ಣವರ,ಪ್ರದೀಪ ಶೆಟ್ಟರ, ಮಾಜಿ ಸಂಸದರಾದ ಐ.ಜಿ.ಸನದಿ, ಧಾರವಾಡ ಜಿಲ್ಲಾ ಕಾಂಗ್ರೇಸ್ ಸಮಿತಿ ಅಧ್ಯಕ್ಷ ಅನೀಲಕುಮಾರ ಪಾಟೀಲ, ಡೆನಿಸನ್ಸ್ ಹೋಟೆಲ್ ಮಾಲೀಕರಾದ ದಿನೇಶ ನಾಯಕ ಹಾಗೂ ಇನ್ನಿತರ ಗಣ್ಯಾತಿ ಗಣ್ಯರು ಭಾಗವಹಿಸಿದ ಬೃಹತ್ ಕಾರ್ಯಕ್ರಮದಲ್ಲಿ ಕ್ರಿಕ್‍ನೌ ಮೊಬೈಲ್ ಆಫ್‍ನ್ನು ಸಾರ್ವಜನಿಕ ಪ್ರತಿಕ್ರಿಯೆ ಪಡೆಯಲು ಬಿಡುಗಡೆಮಾಡಲಾಗಿತ್ತು.

ಆದರೆ ಕಳೆದ ಎರಡು ವರ್ಷಗಳಿಂದ ಉತ್ತರ ಕನಾಟ ಕದಲ್ಲಿ ಪ್ರವಾಹ ಮತ್ತು ಕಳೆದ ವರ್ಷ ಕೋವಿಡ್-19 ಹರಡುವಿಕೆ ಹಿನ್ನಲೆಯಲ್ಲಿ ಈ ಮೊಬೈಲ್‍ನ ಅಪ್ಲಿಕೇ ಶನ್ ಸಂಬಂ ಧಪಟ್ಟಂತೆ ಎಲ್ಲ ಕಾರ್ಯಗಳನ್ನು ಸ್ಥಗಿತಗೊಳಿಸಲಾಗಿತ್ತು. ಮುಂದುವರೆದ ಭಾಗವಾಗಿ ಡಂಬಳ ಎಂಟರ ಪ್ರೈಸಿಸ್ ಪ್ರೈ. ಲಿಂ. ಕ್ರಿಕ್‍ನೌ ಮೊಬೈಲ್ ಆಫ್‍ನ್ನು ಜಗತ್ತಿನಾದ್ಯನ್ಯಾದಕ್ಕಿಂತ ಕ್ರಿಕೇಟ್ ಪ್ರೇಮಿಗಳಿಗಾಗಿ ಇದೆ ವರ್ಷ ಮೇ-25 ರಂದು ಲೋಕಾರ್ಪಣೆ ಮಾಡಲು ನಿರ್ಧರಿಸಿದೆ.

ಉತ್ತರ ಕರ್ನಾಟಕದ ಪ್ರತಿಭಾವಂತ ಸಂಸ್ಥೆಯಿಂದ ಅಭಿವೃದ್ಧಿಪಡಿಸಿದ ಈ ತಂತ್ರಜ್ಞಾನಕ್ಕೆ ಮಾಜಿ ಉಪಮುಖ್ಯ ಮಂತ್ರಿ ಡಾ.ಜಿ.ಪರಮೇಶ್ವರ, ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಗುಂಡಪ್ಪ ವಿಶ್ವನಾಥ, ಶಾಸಕರಾದ ಪ್ರೀಯಂಕ ಖರ್ಗೆ ಹಾಗೂ ಚೆನೈ ಸುಪರ್ ಕಿಂಗ್ಸ್‍ನ ಆಟಗಾರ ರಾಬಿನ ಉತ್ತಪ್ಪ ಪ್ರಶಂಸೆ ವ್ಯಕ್ತಿಪಡಿಸಿ ದ್ದಾರೆ.ಕ್ರಿಕನೌ ಆಫ್ ನಲ್ಲಿ ಕ್ರಿಕೇಟ್ ಪಂದ್ಯಗಳ ಲೈವ್ ಸ್ಕೋರ್, ವೀಕ್ಷಕ ವಿವರಣೆಯ ಮಾಹಿತಿ, ಇನ್ಪೋ ಗ್ರಾಫಿಕ್ಸ್, ಅಂಕಿ ಅಂಶಗಳ ಮಾಹಿತಿ, ತಂಡಗಳ ಹಾಗೂ ಆಟಗಾರರ ಶ್ರೇಣಿಗಳ ಮಾಹಿತಿ, ಫ್ಯಾಂಟಿಸಿ ಅಂಕಗಳು ಪಂದ್ಯ ಗಳ ವೇಳಾ ಪಟ್ಟಿ, ಕ್ಷಣ ಕ್ಷಣದ ಸುದ್ದಿ ಹಾಗೂ ಇನ್ನಿ ತರ ಮಾಹಿತಿ ಅಂಗೈಯಲ್ಲಿಯೇ ಸಿಗುತ್ತದೆ.

ಸೋಷಿಯಲ್ ವಾಲ್,ಮಾಹಿತಿ ಇನ್ಪೋಡೆಸ್ಕ್, ಲೈವ್ ಚಾಟ್, ರಸಪ್ರಶ್ನೆ ಕ್ರಿಕೆಟ್ ಸಂಬಂಧಿಸಿದ ಪ್ರಶ್ನೆಗಳಿಗೆ ಮತದಾನ ಪ್ರೀಮಿಯಂ ಪ್ರವೇಶ ಒಳಗೊಂಡಂತೆ ಹೊಸ ವೈಶಿಷ್ಟೆಗಳನ್ನು ರೂಪಿಸ ಲಾಗುತ್ತಿದ್ದು, ಕ್ರಿಕ್‍ನೌ ಸಂಸ್ಥಾಪಕರಾದ ಸಿದ್ಧಾರ್ಥ ಡಂಬಳರವರು ಆಟದ ಅಭಿಮಾನಿಗಳ ನ್ನು ಕೂಡಾ ಕ್ರಿಕ್‍ನೌ ಮೂಲಕ ಪಂದ್ಯದಲ್ಲಿ ಪಾಲ್ಗೋಳ್ಳುವ ವ್ಯವಸ್ಥೆ ಕಲ್ಪಿಸಲು ಹಾಗೂ ಕಾಲಕ್ಕನುಗುಣ ವಾಗಿ ಆಫ್‍ನಲ್ಲಿ ನೂತನ ವಿಶಿಷ್ಟತೆಗಳನ್ನು ತರಲು ಉದ್ಧೇಶಿಸಿದ್ದಾರೆ ಎಂದು ಆಫ್‍ನ ಉಪಾಧ್ಯಕ್ಷರಾದ ಮಹೇಶ ಡಂಬಳ ತಿಳಿಸಿದ್ದಾರೆ.

ವಿವಿಧ ದೇಶಗಳಲ್ಲಿ ನಡೆಯುವ ಕ್ರಿಕೆಟ್ ಟೂರ್ನಿಗಳ ಸ್ಕೂರ್, ಮುಂಬರುವ ಪಂದ್ಯಗಳ ವಿವರ, ಇತ್ತೀಚಿಗೆ ಮುಗಿದ ಪಂದ್ಯಗಳ ಫಲಿತಾಂಶ, ಹೆಚ್ಚು ಪ್ರಚಲಿತ ದಲ್ಲಿರುವ ಆಟಗಾರರ ಮಾಹಿತಿ, ಅಂತರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ ಪ್ರಕಟಿಸುವ ಏಕದಿನ, ಟೆಸ್ಟ್, ಟಿ-20 ಮಾದರಿಯಲ್ಲಿ ತಂಡಗಳ ಹಾಗೂ ಆಟಗಾರ ರ ರಾಂಕ್ಯಪಟ್ಟಿಯ ಪೂರ್ಣ ಮಾಹಿತಿಯು ಆಫ್ ನಲ್ಲಿ ಅಳವಡಿಸಲಾಗುವುದು, ನಿಮಗೆ ನೆಚ್ಚಿದ ತಂಡವನ್ನು ಆಯ್ಕೆ ಮಾಡಿಕೊಂಡರೆ ಆ ತಂಡದ ಕ್ರಿಕೇಟ್ ಪಂದ್ಯಗಳ ವೇಳಾ ಪಟ್ಟಿ , ಫಲಿತಾಂಶ, ಮುನ್ನೊಟ, ವಿಮರ್ಶೆ ಇತ್ಯಾದಿ ಒಂದೇ ಕಡೆ ಸಿಗುತ್ತದೆ.ಆಫ್ ಅಭಿವೃದ್ಧಿಗೊಳಿಸುವ ಕಾರ್ಯ ನಿರಂತರವಾಗಿ ನಡೆಯಲಿದ್ದು ಇನ್ನು ಹೊಸತನಗಳ ನ್ನು ತರುವ ಯೋಚನೆ ಇದ್ದು, ಈಗ ನಡೆಯುತ್ತಿರುವ ವಿವೋ ಐ.ಪಿ.ಎಲ್-2021 ಟೂರ್ನಿಯ ವೇಳೆ ಸುಮಾರು 10,000 ಕ್ರಿಕೇಟ್ ಪ್ರೇಮಿಗಳಿಂದ ಆಫ್ ಬಗ್ಗೆ ಪ್ರತಿಕ್ರಿಯ ಪಡೆಯುವ ಉದ್ಧೇಶಹೊಂದಿದ್ದು ಆಫ್‍ನ್ನು ಇದೆ ವರ್ಷ ಮೇ-25 ರಂದು ಬಿಡುಗಡೆ ಮಾಡಲಾಗುವುದೆಂದು ಡಂಬಳ ಎಂಟರಪ್ರೈಸಿಸ್ ಪ್ರೈ.ಲಿಂ. ಪತ್ರಿಕಾ ಪ್ರಕಟಣೆ ತಿಳಿಸಿದೆ.2018ರಲ್ಲಿ ಪ್ರಾರಂಭವಾದ ಡಂಬಳ ಎಂಟರಪ್ರೈಸಿಸ್ ಪ್ರೈ.ಲಿಂ. (ಡಿ.ಇ.ಪಿ.ಎಲ್) ಕ್ರಿಕ್‍ನೌ ಚಾಂಪಿಯನ್ಸ್ ಉತ್ತರ ಕರ್ನಾಟಕ ಪ್ರೀಮಿಯರ್ ಲೀಗ್ (ಎನ್.ಕೆ.ಪಿ.ಎಲ್), ಸೇಫ್ ಇಂಡಿಯಾ ಮತ್ತು ಕರ್ನಾಟಕದಲ್ಲಡೆ ಕಾರ್ಯಕ್ರಮ ನಿರ್ವಹಣೆ, ಕ್ರೀಡಾ ನಿರ್ವಹಣೆ, ಹಾಗೂ ಬಿಜನೆಸ್ ಸೊಲೋಷನ್ಸ್‍ನ ಉದ್ಯಮ ಗಳಲ್ಲಿ ಕೆಲಸ ಮಾಡುತ್ತಿರುವ ಭಾರತ ಸರಕಾರದ ಸ್ಟಾಟ್ ಅಫ್ ಇಂಡಿಯಾ ಮಾನ್ಯತೆ ಪಡೆದ ಉತ್ತರ ಕರ್ನಾಟಕದ ಖ್ಯಾತ ಸಂಸ್ಥೆಯಾಗಿದೆ