ಕೋಲಾರ –
ಶಿಕ್ಷಕರ ವರ್ಗಾವಣೆ ಸೇರಿದಂತೆ ಕೆಲ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಕೋಲಾರ ಜಿಲ್ಲೆಯ ಮಾಲೂರಿನಲ್ಲಿ ರಾಜ್ಯ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದಿಂದ ಮನವಿಯನ್ನು ನೀಡಲಾಯಿತು.

ಹೌದು ರಾಜ್ಯ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪರವಾಗಿ ಜಿಲ್ಲೆಯ ಮಾಲೂರು ಬಿಇಒ ಅವರಿಗೆ ಶಿಕ್ಷಕರ ವರ್ಗಾವಣೆ ಸೇರಿದಂತೆ ಹಲವು ಸಮಸ್ಯೆಗಳು ಹಾಗೂ ಕೆಲವು ಬೇಡಿಕೆಗಳನ್ನು ಪಟ್ಟಿ ಮಾಡಿ ಮನವಿಯನ್ನು ಸಲ್ಲಿಸಲಾಯಿತು.

ಶಿಕ್ಷಕರ ವರ್ಗಾವಣೆ ಸೇರಿದಂತೆ ಒಟ್ಟು ಏಳು ಪ್ರಮುಖ ಬೇಡಿಕೆಗಳನ್ನು ಈಡೇಸುವಂತೆ ಒತ್ತಾಯ ವನ್ನು ಶಿಕ್ಷಕರ ಸಂಘ ದಿಂದ ಮಾಡಲಾಯಿತು

ಸಂಘದ ಅಧ್ಯಕ್ಷರಾದ ಅಧ್ಯಕ್ಷರಾದ ವೆಂಕಟೇಶ್ ಗೌಡ ಅವರ ನೇತ್ರತ್ವದಲ್ಲಿ ಸದಸ್ಯರು ಮತ್ತು ಶಿಕ್ಷಕ ಬಂಧುಗಳಾದ ಆಂಜನಪ್ಪ, M G ನಾಗರಾಜ್ ಮುನಿನಾರಾಯಣಪ್ಪ ನಂದೀಶ್. ರವಿಕುಮಾರ್, G ಮುನಿಯಪ್ಪ, ಶಶಿಧರ್ , ಸಂಜೀವಪ್ಪ, ಕೆ ನಾಗರಾಜ್, ನಾಗರಾಜ್ R V, ಸುಬ್ರಮಣಿ, ಅನ್ಸರ್ ಅಹಮದ್, ದೊಡ್ಡಿ ನಾರಾಯಣಸ್ವಾಮಿ,ಅಶೋಕ್, ಇತರರು ಉಪಸ್ಥಿತರಿದ್ದು ಮನವಿಯನ್ನು ಸಲ್ಲಿಸಿದರು.