ಬೆಂಗಳೂರು –
ಸನ್ಮಾನ್ಯ ಶ್ರೀ ಸುರೇಶ್ ಕುಮಾರ್ ಸಾಹೇಬರಿಗೆ………..ಸನ್ಮಾನ್ಯರೆ ಕಳೆದ ಎರಡು ವರ್ಷಗಳಿಂದ ರಾಜ್ಯದ ಶಿಕ್ಷಕರ ಸಂಘಟನೆಯ ಜೊತೆ,ವಯಕ್ತಿಕವಾಗಿ ತಮ್ಮ ಜೊತೆ ಹಲವಾರು ಬಾರಿ ನಮ್ಮ ಭಾವನೆಗಳನ್ನು ಹಂಚಿಕೊಂಡಿದ್ದೆವೆ. ಬಹಳ ಹತ್ತಿರದಿಂದ ನಾವು ತಮ್ಮನ್ನು ನೋಡಿದ್ದೇವೆ, ಗಮನಿಸಿದ್ದೇವೆ ತಾವು ಬಲು ಅಪರೂಪದ ವ್ಯಕ್ತಿ ಅನ್ನುವುದಕ್ಕಿಂತ ಬಹಳ ಶ್ರೇಷ್ಠ ಮಾನವೀಯ ಗುಣ ಗಳನ್ನು ಹೊಂದಿರುವ ವ್ಯಕ್ತಿತ್ವವನ್ನು ಅಳವಡಿಸಿಕೊಂ ಡಿದ್ದು ನಿಜವಾಗಲೂ ನಮಗೆ ಆತೀವ ಹೆಮ್ಮೆ ಎನಿ ಸುತ್ತದೆ.

ಹುದ್ದೆ ಅಧಿಕಾರ ಗಳನ್ನು ಮೀರಿ ತಾವು ಮಾನವೀ ಯತೆಯ ಪರಿಕಲ್ಪನೆಯ ಒಬ್ಬ ಪರಿಪೂರ್ಣ ಮತ ಹೊಂದಿರುವ ವ್ಯಕ್ತಿ ಎಂದು ನಾವು ಬಹಳ ಹತ್ತಿರದಿಂ ದ ಗಮನಿಸಿದ್ದೇವೆ.ಚಿಕ್ಕ ಚಿಕ್ಕ ವಿಷಯಗಳನ್ನು ಕೂಡ ಗಮನಿಸಿ ಅಭಿನಂದಿಸಿ ಪ್ರೇರೆಪಿಸುವ ತಮ್ಮ ಹಲ ವಾರು ಅನುಭವಗಳನ್ನು ಜೊತೆಗೆ ಅವುಗಳನ್ನು ಸಾಮಾಜಿಕ ಜಾಲತಾಣಗಳ ಮೂಲಕ ಹಂಚಿಕೊಂ ಡು ಅವರನ್ನು ಪ್ರೇರೇಪಿಸುವ ತಾವು ನಾಡಿನ ಧೀಮಂತ ನಾಯಕರು ಮತ್ತು ಧೀಮಂತ ಶಕ್ತಿಯೆಂ ದರೆ ತಪ್ಪಾಗಲಾರದು.

ಹೀಗಿರುವಾಗ ಇತ್ತೀಚಿಗೆ ನಡೆದ ಚಾಮರಾಜನಗರ ಘಟನೆಗೆ ನೊಂದು ತಾವು ರಾಜೀನಾಮೆ ಕೊಡುವ ಇಂಗಿತವನ್ನು ವ್ಯಕ್ತಪಡಿಸಿದ್ದನ್ನು ನೋಡಿ ನಮ್ಮ ಭಾವನೆಯಲ್ಲಿ ತಾವು ಮತ್ತಷ್ಟು ಉತ್ತುಂಗಕ್ಕೇರಿದ್ದಿರಿ. ಹುದ್ದೆ ಅಧಿಕಾರದ ದಾಹದಿಂದ ಏನಾದರೂ ಅಧಿಕಾ ರ ಬೀಡದ ಮನಸುಗಳ ಮಧ್ಯೆ ಮಾನವೀಯತೆಯ ಕಂಪನಕ್ಕೆ ಒಳಪಟ್ಟು ನನ್ನದಲ್ಲದ ತಪ್ಪಿಗೆ ಹುದ್ದೆಯ ನ್ನು ತ್ಯಜಿಸುವ ಆ ಶೇಷ ಗುಣವನ್ನು ಹೊಂದಿರುವ ಬಹಳಷ್ಟು ಜನ ಅಪರೂಪದ ನಾಯಕರಲ್ಲಿ ತಾವು ಅಪರೂಪರಾಗಿ ಕಾಣುತ್ತೀರಿ.

ತಮ್ಮಂತವರು ರಾಜ್ಯದ ಶಿಕ್ಷಣ ಇಲಾಖೆಯ ನಾಯಕ ತ್ವ ವಹಿಸಿಕೊಂಡಿರುವುದು ನಮಗೆ ನಮ್ಮೆ ಇದೆ ನಿಮ್ಮಲ್ಲೊಂದು ಕಳಕಳಿಯ ದಿನ ಸಾಮಾಜಿಕ ಬದುಕಿನಲ್ಲಿ ಹಲವಾರು ಏರುಪೇರು ಬರುವುದನ್ನು ತಾವು ಕಂಡಿದಿರಿ, ತಮಗೆ ಅದನ್ನು ಹೇಳುವಷ್ಟು ದೊಡ್ಡವರಲ್ಲ.

ಆದರೆ ಒಂದಂತು ಸತ್ಯ. ಸಾಮಿಪ್ಯದಿಂದ ನೋಡಿ ರುವ ನಿಮ್ಮನ್ನು ಕಂಡಿತ ಕಳೆದುಕೊಳ್ಳಲು ಇಷ್ಟ ಪಡುವುದಿಲ್ಲ. ಏನೇ ಆಗಿರಲಿ ತಾವು ನೊಂದುಕೊ ಳ್ಳದೆ ಧೈರ್ಯದಿಂದ ಮುನ್ನುಗ್ಗಬೇಕು. ನಮ್ಮೆಲ್ಲರ ಇಲಾಖೆಯ ಜವಾಬ್ದಾರಿಯನ್ನು ಪರಿಪೂರ್ಣವಾಗಿ ನಡೆಸಬೇಕೆಂಬ ಅದಮ್ಯ ಆಸೆ ನಮ್ಮದು. ಖಂಡಿತ ವಾಗಿಯೂ ನಿಮ್ಮ ಮಾರ್ಗದರ್ಶನ ನಮಗಿರಲಿ ನಿಮ್ಮೊಗೆ ನಾವು ಇರುತ್ತೇವೆ ಎಂಬ ಸಂತಸದ ನುಡಿ ಗಳೊಂದಿಗೆ ಇದೋ ಈ ನಾಡಿನ ಶೈಕ್ಷಣಿಕ ನಾಯಕ ರಾದ ತಮ್ಮಲ್ಲಿ ಕಳಕಳಿಯ ವಿನಂತಿ.ಹೀಗೆ ವಿನಂತಿ ಯ ಭಾವನೆಯ ಮಾತುಗಳನ್ನು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಮಾಡಿಕೊಂಡಿದೆ

ಸಂಘದ ಅಧ್ಯಕ್ಷ ಶಂಭುಲಿಂಗನಗೌಡ ಪಾಟೀಲ ಸಂಘದ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ನುಗ್ಗಲಿ ಮತ್ತು ಸರ್ವ ಸದಸ್ಯರು ಶಿಕ್ಷಕರ ಪರವಾಗಿ ಮಾನ್ಯ ಶಿಕ್ಷಣ ಸಚಿವರಿಗೆ ಆತ್ಮಸ್ಥೈರ್ಯದೊಂದಿಗೆ ನಿಮ್ಮೊಂದಿಗೆ ನಾವು ಎನ್ನುತ್ತಾ ಭರವಸೆಯನ್ನು ತುಂಬಿದ್ದಾರೆ.