ಬೆಂಗಳೂರು –
ವಿದ್ಯಾರ್ಥಿಗಳ ಜೀವನದಲ್ಲಿ ಎಸ್‌ಎಸ್‌ಎಲ್‌ಸಿ ಬಹು ಮುಖ್ಯವಾದ ಹಂತ.ಈಗಗಾಲೇ ಪರೀಕ್ಷೆಯನ್ನು ಬರೆದು ಫಲಿತಾಂಶಕ್ಕಾಗಿ ಕಾಯುತ್ತಿರುವ ವಿದ್ಯಾರ್ಥಿಗಳಿಗೆ ಶೀಘ್ರವೇ ಫಲಿತಾಂಶ ಪ್ರಕಟವಾಗಲಿದೆ. ಇನ್ನೂ ಎಸ್‌ಎಸ್ ಎಲ್‌ಸಿ ವಿದ್ಯಾರ್ಥಿಗಳ ಮೌಲ್ಯಮಾಪನ ಮುಕ್ತಾಯವಾ ಗಿದ್ದು ಫಲಿತಾಂಶ ಪ್ರಕಟಣೆಗೆ ದಿನಗಣನೇ ಪ್ರಾರಂಭ ವಾಗಿದೆ

SSLC ಪರೀಕ್ಷೆಯನ್ನು ಬರೆದ ವಿದ್ಯಾರ್ಥಿಗಳು ಬೇಸಿಗೆಯ ರಜೆಯನ್ನು ಅನುಭವಿಸುತ್ತಿದ್ದಾರೆ. ಈ ನಡುವೆ ಎಸ್ ಎಸ್ ಎಲ್ ಸಿ ಪರೀಕ್ಷೆಯನ್ನು ಬರೆದಿರುವ ವಿದ್ಯಾರ್ಥಿಗಳ ಉತ್ತರ ಪತ್ರಿಕೆಗಳು ಮೌಲ್ಯಮಾಪನ ಸಂಪೂರ್ಣವಾಗಿ ಮುಗಿದಿದೆ. ಶಿಕ್ಷಕರು ಈಗಾಗಲೇ ವಿದ್ಯಾರ್ಥಿಗಳ ಅಂಕವನ್ನು ನಮೂದಿ ಸಿದ್ದಾರೆ.
SSLC ಪರೀಕ್ಷೆಯನ್ನು ಬರೆದವರೆಷ್ಟು ಗೊತ್ತಾ…..
ಇನ್ನು ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಸಂದರ್ಭದಲ್ಲೂ ಹಿಜಾಬ್ ಗೊಂದಲ ಮುಂದುವರೆದಿತ್ತು.ಆದರೆ ಎಲ್ಲಿಯೂ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳು ಹಿಜಾಬ್ ಧರಿಸಿ ಪರೀಕ್ಷೆಗೆ ಹಾಜರಾಗಿರಲಿಲ್ಲ.ಎಸ್‌ಎಸ್‌ಎಲ್‌ಸಿ ಪರೀಕ್ಷೆ ಯನ್ನು 8,73,846 ವಿದ್ಯಾರ್ಥಿಗಳು ಪರೀಕ್ಷೆಯನ್ನು ಬರೆಯ ಲು ನೊಂದಣಿಯನ್ನು ಮಾಡಿಕೊಂಡಿದ್ದರು.ಇದರಲ್ಲಿ ಬಹು ತೇಕರು ಪರೀಕ್ಷೆಗೆ ಹಾಜರಾಗಿದ್ದರೂ ಬೆರಳೆಣಿಕೆಯ ವಿದ್ಯಾ ರ್ಥಿಗಳಷ್ಟೇ ಗೈರು ಹಾಜರಾಗಿದ್ದರು.
ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಆರಂಭದಿಂದಲೂ ಶಿಕ್ಷಣ ಸಚಿವ ಬಿಸಿ ನಾಗೇಶ್ ವಿದ್ಯಾರ್ಥಿಗಳಿಗೆ ಧೈರ್ಯವನ್ನು ತುಂಬುತ್ತಿದ್ದಾರೆ.ಮಕ್ಕಳಿಗೆ ಪರೀಕ್ಷೆಯ ಭಯ ಇರಬಾರದು ಮತ್ತು ಕೋವಿಡ್ ಕಾರಣದಿಂದಾಗಿ ಕೆಲವು ಶಾಲೆ ಗಳಲ್ಲಿ ಸರಿಯಾಗಿ ಪಠ್ಯವನ್ನು ಬೋಧನೆ ಮಾಡಿರಲಿಲ್ಲ ಆದ್ದರಿಂದ ವಿದ್ಯಾರ್ಥಿಗಳು ಆತಂಕಕ್ಕೆ ಒಳಗಾಗಿದ್ದರು.ಮಕ್ಕಳ ಆತಂಕ ವನ್ನು ದೂರ ಮಾಡಲು ಸರಳವಾದ ಪ್ರಶ್ನೆ ಪತ್ರಿಕೆಯನ್ನು ವಿದ್ಯಾರ್ಥಿಗಳಿಗೆ ನೀಡಲಾಗಿತ್ತು.ಪರೀಕ್ಷೆಯನ್ನು ಬರೆದ ವಿದ್ಯಾರ್ಥಿಗಳು ಸುಲಭವಾದ ಪ್ರಶ್ನೆ ಪತ್ರಿಕೆಯಾದ್ದರಿಂದ ಸಂತಸಗೊಂಡಿದ್ದರು. ಇನ್ನು ಮೌಲ್ಯ ಮಾಪನದ ವೇಳೆಯು ಶಿಕ್ಷಕರು ಕಠಿಣ ದೋರಣೆ ತೋರದೆ ವಿದ್ಯಾರ್ಥಿಗಳ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಮೌಲ್ಯಮಾಪನ ಕಾರ್ಯವನ್ನು ಮುಗಿಸಿದ್ದಾರೆ.