ಚಿಕ್ಕಬಳ್ಳಾಪುರ –
ಚಿಕ್ಕಬಳ್ಳಾಪುರ ದಲ್ಲಿ ಶಿಕ್ಷಕ ವಿಶ್ವನಾಥ್ ಕೊಲೆ ಯನ್ನು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಖಂಡಿಸಿದೆ.ನಿನ್ನೆಯಷ್ಟೇ ಸರ್ಕಾರಿ ಶಾಲೆಯ ಶಿಕ್ಷಕ ವಿಶ್ವನಾಥ್ ಅವರನ್ನು ದುಷ್ಕರ್ಮಿ ಗಳು ಕೊಲೆ ಮಾಡಿದ್ದರು.ಅಮಾನುಷವಾಗಿ ಹಾಗೇ ಕ್ರೂರವಾಗಿ ಶಿಕ್ಷಕ ನನ್ನು ಕೊಲೆ ಮಾಡಲಾಗಿತ್ತು.ಈ ಒಂದು ಕೊಲೆ ನಡೆದ ನಂತರ ನಾಡಿನ ಯಾವುದೇ ಒಂದೇ ಒಂದು ಶಿಕ್ಷಕರ ಸಂಘಟನೆ ಯವರು ಈ ಒಂದು ಕೊಲೆಯ ಕುರಿತು ಧ್ವನಿ ಎತ್ತದೆ ಮೌನವಾ ಗಿದ್ದರು.ಈ ಒಂದು ವಿಚಾರ ಕುರಿತು ಕೊನೆಗೂ ಚಿಕ್ಕಬಳ್ಳಾಪುರ ದಲ್ಲಿ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಚಿಕ್ಕಬಳ್ಳಾಪುರ ಇವರು ಘಟನೆ ಯನ್ನು ಖಂಡಿಸಿದ್ದಾರೆ.

ಹೌದು ನಿನ್ನೆ ನಡೆದ ಈ ಒಂದು ಕೃತ್ಯದ ನಂತರ ಯಾರು ಕೂಡಾ ಖಂಡಿಸದೇ ಧ್ವನಿ ಎತ್ತದೆ ಮೌನ ವಾಗಿರುವ ಕುರಿತು ನಿಮ್ಮ ಸುದ್ದಿ ಸಂತೆ ನ್ಯೂಸ್ ಇಂದು ವರದಿ ಯೊಂದನ್ನು ಪ್ರಕಟಿಸಿತ್ತು

ಅತ್ತ ವರದಿ ಪ್ರಕಟವಾಗುತ್ತಿದ್ದಂತೆ ಇತ್ತ ಇದರಿಂದ ಎಚ್ಚೆತ್ತುಕೊಂಡ ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ಶಾಖೆಯ ಶಿಕ್ಷಕರು ಘಟನೆ ಯನ್ನು ಖಂಡಿಸಿದ್ದಾರೆ.ಅಧ್ಯಕ್ಷೆನ್ ಜಿ ರೆಡ್ಡಪ್ಪ, ಪ್ರಧಾನ ಕಾರ್ಯದರ್ಶಿ ಎನ್ ಬಾಲಪ್ಪ ನೇತೃತ್ವದಲ್ಲಿ ಶಿಕ್ಷಕ ಬಳದವರು ಘಟನೆ ಯನ್ನು ಖಂಡಿಸಿದ್ದಾರೆ ಅಲ್ಲದೇ ಕೊಲೆಯನ್ನು ಖಂಡಿಸಿ ಶಿಕ್ಷಕ ಬಳದವರು ತಹಶೀಲ್ದಾರ್ ಮತ್ತು ಪೊಲೀಸ್ ಇನ್ಸ್ಪೆಕ್ಟರ್ ಅವರಿಗೆ ಮನವಿ ಸಲ್ಲಿಸಿದರು

ಗೌರಿಬಿದನೂರು ತಾಲ್ಲೂಕಿನ ತಹಶೀಲ್ದಾರ್ ಮತ್ತು ಇನ್ಸ್ಪೆಕ್ಟರ್ ಅವರಿಗೆ ಮನವಿ ನೀಡಿ ಕೊಲೆ ಪ್ರಕರಣ ವನ್ನು ಕೂಡಲೇ ತನಿಖೆಯನ್ನು ಮಾಡಿ ಆರೋಪಿ ಗಳನ್ನು ಬಂಧಿಸಿ ನ್ಯಾಯವನ್ನು ಒದಗಿಸುವಂತೆ ಸರ್ವ ಶಿಕ್ಷಕ ಬಂಧುಗಳು ಒತ್ತಾಯವನ್ನು ಮಾಡಿ ದರು. ಈ ಒಂದು ಸಂದರ್ಭದಲ್ಲಿ ಗೌರಿಬಿದನೂರು ಶಾಖೆಯ ಘಟಕದ ಎಲ್ಲಾ ಸದಸ್ಯರು ಶಿಕ್ಷಕರು ಸೇರಿದಂತೆ ಹಲವರು ಉಪಸ್ಥಿತರಿದ್ದು ಕೊಲೆಯನ್ನು ಖಂಡಿಸಿದರು
