ರಬಕವಿ-ಬನಹಟ್ಟಿ –
ಹಿಜಾಬ್ ವಿಚಾರದಲ್ಲಿ ರಬಕವಿ ಬನಹಟ್ಟಿ ಯಲ್ಲಿ ಶಿಕ್ಷಕ ರೊಬ್ಬರ ಮೇಲೆ ನಡೆದ ಹಲ್ಲೆಗೆ ಖಂಡನೆ ವ್ಯಕ್ತವಾಗಿದೆ.ನಿನ್ನೆ
ಶಿಕ್ಷಕರ ಮೇಲಿನ ಹಲ್ಲೆ ಖಂಡಿಸಿ ಇಂದು ಬನಹಟ್ಟಿ ಬಂದ್ ಗೆ ಕರೆ ನೀಡಲಾಗಿದ್ದು ಜೋರಾಗಿ ನಡೆಯುತ್ತಿದೆ.ಬನಹಟ್ಟಿ ಪೊಲೀಸ್ ಠಾಣೆಯಿಂದ ತಹಶೀಲ್ದಾರ ಕಚೇರಿವರೆಗೆ ಮಾತ್ರ ಪ್ರತಿಭಟನೆ ನಡೆಸಲು ಅನುಮತಿಸಿದ್ದರಿಂದ ಬನಹ ಟ್ಟಿಯ ಪೊಲೀಸ್ ಠಾಣೆ ಎದುರು ಜಮಾವಣೆಗೊಂಡ ಹಿಂದೂಪರ ಸಂಘಟನೆಗಳು ನ್ಯಾಯ ಒದಗಿಸುವಂತೆ ಘೋಷಣೆಗಳನ್ನು ಕೂಗಿದರು.

ಈ ವೇಳೆ ಮೆರವಣಿಗೆಗೆ ಅವಕಾಶ ಕೊಡಬೇಕೆಂದು ಪೊಲೀಸ್ ಠಾಣೆ ಎದುರು ಪೊಲೀಸ್ ಅಧಿಕಾರಿಗಳ ಜೊತೆ ಪ್ರತಿಭಟನಾಕಾರರು ವಾಗ್ವಾದ ನಡೆಸಿದರು.ಈ ಸಂದರ್ಭ ದಲ್ಲಿ ಬಾಗಲಕೋಟೆ ಎಸ್. ಪಿ. ಲೋಕೇಶ್ ಜಗಲಾಸರ ಸ್ಥಳಕ್ಕೆ ಆಗಮಿಸಿ ಪ್ರತಿಭಟನಾಕಾರರ ಜೊತೆ ಮಾತುಕತೆ ನಡೆಸಿದರು. ಆದರೂ ಪ್ರತಿಭಟನಾಕಾರರು ಒಪ್ಪಲಿಲ್ಲ.

ನಂತರ ಅಲ್ಲಿಂದ ಬಂದ್ ನ ಪ್ರತಿಭಟನೆಯಲ್ಲಿ ಪಾಲ್ಗೊಂಡ ಸಾವಿರಾರು ಹಿಂದೂ ಪರ ಸಂಘಟನೆಯವರು ತಹಶಿಲ್ದಾ ರರ ಕಚೇರಿಗೆ ತೆರಳಿ ಈ ಘಟನೆಗೆ ಕಾರಣಿಕರ್ತರಾದ ವರನ್ನು ಕೂಡಲೇ ಬಂದಿಸಿ ಅಗತ್ಯ ಕ್ರಮತೆಗೆದುಕೊಳ್ಳ ಬೇಕೆಂದು ಮನವಿ ಸಲ್ಲಿಸಿದರು.