ಬೆಂಗಳೂರು –
ಶಿಕ್ಷಕರನ್ನ ನೇಮಿಸೋದು ಪಾಠ ಮಾಡೋದಕ್ಕೆ ಸಂಸಾರ ನೋಡಲಿಕ್ಕಲ್ಲ ಎಂದು ಹೇಳಿಕೆ ನೀಡಿರುವ ಶಿಕ್ಷಣ ಸಚಿವರ ಹೇಳಿಕೆಗೆ ವ್ಯಾಪಕ ಖಂಡನೆ ವ್ಯಕ್ತವಾಗುತ್ತಿದೆ. ಈ ಒಂದು ಹೇಳಿಕೆಯನ್ನು ನೀಡಿರುವ ಶಿಕ್ಷಣ ಸಚಿವ ಬಿ ಸಿ ನಾಗೇಶ್ ವಿರುದ್ದ ರಾಜ್ಯದ ಶಿಕ್ಷಕರು ಈಗ ಸಿಡಿದೆದ್ದಿದ್ದಾರೆ.ನಾವು ಕೂಡಾ ಸಂಸಾರಿಗಳೇ ಸ್ವಾಮಿ ನಮಗೂ ಸಂಸಾರ ಮಕ್ಕಳು ತಂದೆ ತಾಯಿ ಬಂಧು ಬಳಗ ಹೀಗೆ ನಿಮ್ಮ ಹಾಗೇ ಎಲ್ಲವೂ ಇದೆ ಇನ್ನೂ ಮುಂದೆ ಸನ್ಯಾಸಿಗಳಿಗೆ ಮಾತ್ರ ಈ ಒಂದು ಶಿಕ್ಷಕ ಹುದ್ದೆ ಅಂತಾ ಮಾಡಿ ಎಂದು ಸಲಹೆ ನೀಡಿದ್ದಾರೆ.
ಹೌದು ರಾಜ್ಯದ ಶಿಕ್ಷಕರಿಗೆ ಈ ಒಂದು ಶಿಕ್ಷಣ ಸಚಿವರ ಹೇಳಿಕೆ ಅವಮಾನವನ್ನು ಮಾಡಿದಂತಾಗಿದ್ದು ಹೀಗಾಗಿ ಈ ಒಂದು ಹೇಳಿಕೆಯಿಂದಾಗಿ ನಾಡಿನ ಶಿಕ್ಷಕರು ಈಗ ಶಿಕ್ಷಣ ಸಚಿವರ ವಿರುದ್ಧ ಸಿಡಿದೆದ್ದಿದ್ದಾರೆ.
ಸಂಸಾರ ಎನ್ನೊದು ನಮ್ಮ ಭಾರತೀಯ ಸಂಸ್ಕೃತಿಯ ದ್ಯೋತಕ,ಸಂಸಾರ ನಮ್ಮ ಸಮಾಜದ ನಂಬಿಕೆ ಅಡಿಪಾಯ ಭಾರತೀಯರ ಆಸ್ಮಿತೆ,ನಾವು ಭಾರತೀಯ ಸಂಸ್ಕೃತಿಯ ಉದ್ದಾರಕರು ಎಂದು ಬೀಗುವವರ ಬಾಯಲ್ಲಿ ಈ ಒಂದು ಹೇಳಿಕೆ ಅಕ್ಷಮ್ಯ ಅಪರಾಧ ಎಂದು ನಾಡಿನ ಶಿಕ್ಷಕರು ಹೇಳಿ ಖಂಡನೆ ಮಾಡಿದ್ದಾರೆ
ಈ ಕೂಡಲೇ ಸಚಿವರು ನಾಡಿನ ಶಿಕ್ಷಕರ ಕ್ಷಮೆಯನ್ನು ಕೇಳಿ ಶಿಕ್ಷಕರ ಬಗ್ಗೆ ಹಗುರವಾಗಿ ಮಾತನಾಡಿದ್ದು ತಪ್ಪು ಹೀಗಾಗಿ ಕೂಡಲೇ ಶಿಕ್ಷಕರ ಕ್ಷಮೆಯನ್ನು ಕೇಳಬೇಕು ಹಾಗೇ ಇವರನ್ನು ಕೂಡಲೇ ಸಚಿವ ಸಂಪುಟದಿಂದ ಕೈಬಿಡುವಂತೆ ಇವರು ಮುಖ್ಯಮಂತ್ರಿಯವರಿಗೆ ಒತ್ತಾಯವನ್ನು ಶಿಕ್ಷಕರು ಆಗ್ರಹ ಮಾಡಿದರು ಇವರ ಒಂದು ಹೇಳಿಕೆಯಿಂದಾಗಿ ನಾಡಿನ ಶಿಕ್ಷಕರಿಗೆ ಅವಮಾನ ಮಾಡಿದಂತಾಗಿದ್ದು ನಿಜವಾ ಗಿಯೂ ಹೀಗೆ ಮಾತನಾಡಿದ್ದು ದೊಡ್ಡ ತಪ್ಪು ಎಂದಿದ್ದಾರೆ