ಬೆಂಗಳೂರು –
ಎಸಿಪಿ ಪೊಲೀಸ್ ಅಧಿಕಾರಿ ಯೊಬ್ಬರು ಹೃದಯಾ ಘಾತದಿಂದ ನಿಧನರಾದ ಘಟನೆ ಬೆಂಗಳೂರಿನಲ್ಲಿ ನಡೆದಿದೆ ಹೌದು ಹೃದಯಾಘಾತದಿಂದ ಎಸಿಪಿ ಸಾವನ್ನಪ್ಪಿರುವ ಆಘಾತಕಾರಿ ಘಟನೆ ನಡೆದಿದ್ದು ಯಲಹಂಕದ ಉಪ ವಿಭಾಗದ ಎಸಿಪಿ ಜಯರಾಮ್ ಮೃತಪಟ್ಟ ಅಧಿಕಾರಿ ಯಾಗಿದ್ದಾರೆ.1994ರಲ್ಲಿ ಸಬ್ ಇನ್ಸ್ ಪೆಕ್ಟರ್ ಆಗಿ ಆಯ್ಕೆ ಯಾಗಿದ್ದ ಜಯರಾಮ್ ಬೆಂಗಳೂರು ಸೇರಿ ಹಲವೆಡೆ ಸೇವೆ ಸಲ್ಲಿಸಿದ್ದರು.

ಇಂದು ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಕೋಲಾ ರದ ಸ್ವಗ್ರಾಮದಲ್ಲಿ ಎಸಿಪಿ ಜಯರಾಮ್ ಅಂತ್ಯಕ್ರಿಯೆ ನೆರವೇರಲಿದೆ.ಇನ್ನೂ ಜಯರಾಮ್ ಅವರ ನಿಧನಕ್ಕೆ ಹಲವು ರಾಜಕೀಯ ಮುಖಂಡರು ಹಾಗೂ ಪೊಲೀಸ್ ಇಲಾಖೆಯ ಅಧಿಕಾರಿಗಳು ಸೇರಿದಂತೆ ಹಲವರು ಕಂಬನಿ ಮಿಡಿದಿದ್ದಾರೆ.