ಬೆಂಗಳೂರು –
ನಿನ್ನೆಯಷ್ಟೇ ರಾಜ್ಯ ಶಿಕ್ಷಣ ಸಚಿವ ಸುರೇಶ್ ಕುಮಾರ್ ಎಸ್ ಎಸ್ ಎಲ್ ಸಿ ಪರೀಕ್ಷೆಯ ದಿನಾಂಕವನ್ನು ಘೋಷಣೆ ಮಾಡಿದ್ದರು.ಅತ್ತ ಪರೀಕ್ಷಾ ದಿನಾಂಕ ಘೋಷಣೆಯಾಗುತ್ತಿದ್ದಂತೆ ಇತ್ತ ಆರೋಗ್ಯ ಸಚಿವ ಡಿ ಸುಧಾಕರ್ ನಮ್ಮನ್ನು ಯಾವುದೇ ಸಲಹೆ ಪಡೆಯದೆ ನಮ್ಮನ್ನು ಕೇಳದೆ ದಿನಾಂಕವನ್ನು ಘೋಷಣೆ ಮಾಡಿದ್ದಾರೆ ಎನ್ನುತ್ತಾ ತಮ್ಮಲ್ಲಿನ ಅಸಮಾಧಾನವನ್ನು ಹೊರಹಾಕಿದ್ದರು.
ಇದರ ಬೆನ್ನಲ್ಲೇ ಪರೀಕ್ಷಾ ವಿಚಾರದಲ್ಲಿ ದಿನಾಂಕದ ಘೋಷಣೆ ಬೆನ್ನಲ್ಲೇ ದೊಡ್ಡ ಮಟ್ಟದಲ್ಲಿ ಚರ್ಚೆಯಾ ಗಿತ್ತು ಇಬ್ಬರು ಸಚಿವರ ನಡುವಿನ ಸಚಿವರ ಸಮನ್ವ ಯದ ಕೊರತೆಯಿಂದಾಗಿ ಈ ಒಂದು ಸಮಸ್ಯೆಯಾಗಿ ದೆ ಎಂದುಕೊಂಡ ನಾಡಿನ ಮುಖ್ಯಮಂತ್ರಿ ಯಡಿ ಯೂರಪ್ಪ ಇದಕ್ಕೆ ತೆರೆ ಎಳೆದಿದ್ದಾರೆ.ಹೌದು ಈ ಕುರಿತಂತೆ ಮುಖ್ಯಮಂತ್ರಿ ಅವರು ಬೆಳ್ಳಂ ಬೆಳಿಗ್ಗೆ ಟ್ವೀಟ್ ಮಾಡಿ ಈ ಕುರಿತಂತೆ ಶಿಕ್ಷಣ ಸಚಿವರು ನನ್ನೊಂದಿಗೆ ಚರ್ಚಿಸಿ ಪರೀಕ್ಷೆಗೆ ದಿನಾಂಕ ನಿಗದಿಪಡಿ ಸಿದ್ದಾರೆ. ಇದೊಂದು ಏಕಪಕ್ಷಿಯ ತೀರ್ಮಾನವಲ್ಲ ಈ ಕುರಿತಂತೆ ಯಾವುದೇ ಗೊಂದಲವನ್ನು ಸೃಷ್ಟಿ ಸೊದು ಬೇಡ ಎಂದಿದ್ದಾರೆ. ಈ ಮೂಲಕ ಮುಖ್ಯ ಮಂತ್ರಿ ಅವರು ಇಬ್ಬರು ಸಚಿವರ ನಡುವಿನ ವೈಮನಸ್ಸಿನ ವಿಚಾರಕ್ಕೆ ತೆರೆ ಎಳೆದು ಮುಂದಿನ ದಾರಿಗೆ ಸರಳತೆಯನ್ನು ಮಾಡಿಕೊಟ್ಟು ಗೊಂದಲಕ್ಕೆ ತೆರೆ ಎಳೆದು ಪರೀಕ್ಷೆಗೆ ಯಾವುದೇ ಸಮಸ್ಯೆಯಾಗ ದಂತೆ ಪೂರ್ಣ ವಿರಾಮವನ್ನು ಎಳೆದಿದ್ದಾರೆ.