ಬೆಂಗಳೂರು –
ರಾಜ್ಯಾದ್ಯಂತ ಇಂದು CRP,BRP,Eco ಅವರ ಕೌನ್ಸಲಿಂಗ್ ಇಂದಿನಿಂದ ಆರಂಭಗೊಂಡಿದೆ.ಹೌದು ಹತ್ತು ಹಲವಾರು ಸಮಸ್ಯೆ ಗೊಂದಲ ಗಳ ನಡುವೆ ರಾಜ್ಯದ್ಯಂತ ಇಂದು ಕೌನ್ಸಲಿಂಗ್ ಪ್ರಕ್ರಿಯೆ ಆರಂಭಗೊಂಡಿದ್ದು ಇನ್ನೂ ರಾಜ್ಯದ ಹಲವೆಡೆ ಶಿಕ್ಷಕ ಬಂಧುಗಳು ಈ ಒಂದು ಪ್ರಕ್ರಿಯೆಯಲ್ಲಿ ಪಾಲ್ಗೊಂಡು ಸ್ಥಳವನ್ನು ಆಯ್ಕೆ ಮಾಡಿಕೊಂಡರು

ಇಲಾಖೆಯ ಅಧಿಕಾರಿಗಳಿಂದ ಆದೇಶ ಪ್ರತಿಗಳನ್ನು ಪಡೆದುಕೊಂಡು ಪಡೆದುಕೊಂಡ ಸ್ಥಳಕ್ಕೇ ಆದೇಶ ಪ್ರತಿ ಯೊಂದಿಗೆ ತೆರಳಿದರು ಶಿಕ್ಷಕರು ಶಿಕ್ಷಕಿಯರು.ಇನ್ನೂ ಈ ಒಂದು ಪ್ರಕ್ರಿಯೆ ರಾಜ್ಯಾದ್ಯಂತ ಕಂಡು ಬಂದಿತು ಸರಳ ವಾಗಿ ಯಾವುದೇ ಗೊಂದಲ ಸಮಸ್ಯೆಯಿಲ್ಲದೇ ಈ ಒಂದು ಕೌನ್ಸಲಿಂಗ್ ಪ್ರಕ್ರಿಯೆ ನಡೆದಿದ್ದು ಕಂಡು ಬಂದಿತು.ಇನ್ನೂ ಇವೆಲ್ಲದರ ನಡುವೆ ಕೌನ್ಲಲಿಂಗ್ ನಲ್ಲಿ ಪಾಲ್ಗೊಂಡು ವರ್ಗಾ ವಣೆಗೊಂಡ ಶಿಕ್ಷಕ ಬಂಧುಗಳಿಗೆ ನಾಡಿನ ಮೂಲೆ ಮೂಲೆ ಗಳಿಂದ ಶಿಕ್ಷಕ ಬಂಧುಗಳಿಂದ ಅಭಿನಂದನೆಗಳ ಮಹಾ ಪೂರ ಹರಿದು ಬರುತ್ತಿವೆ