ಬೆಂಗಳೂರು –
ಕೇಂದ್ರದ ನಾಗರೀಕ ಸೇವಾ ಪರೀಕ್ಷೆಯಲ್ಲಿ 151ನೇ ರಾಂಕ್ ಪಡೆದಿರುವ ಸಹಕಾರ ಸಂಘಗಳ ಲೆಕ್ಕ ಪರಿಶೋಧನಾ ಇಲಾಖೆಯ ಸಹಾಯಕ ನಿರ್ದೇಶಕ ವಿನಯ್ ಕುಮಾರ್ ಗಾದಗೆ ಅವರನ್ನು ಸಹಕಾರ ಸಚಿವ ಎಸ್.ಟಿ.ಸೋಮಶೇ ಖರ್ ಅವರು ಬುಧವಾರ ಅಭಿನಂದಿಸಿದರು.

ಮೂಲತಃ ಬೀದರ್ ನಗರದವರಾದ ವಿನಯ್ ಕುಮಾರ್ ಅವರು ಎಂಬಿಬಿಎಸ್ ಪದವೀಧರರು.2019ರ ಕರ್ನಾಟ ಕದ ನಾಗರಿಕ ಸೇವಾ ಪರೀಕ್ಷೆಯಲ್ಲಿ ತೇರ್ಗಡೆಯಾಗಿ ಸಹಕಾರ ಸಂಘಗಳ ಲೆಕ್ಕಪರಿಶೋಧನಾ ಇಲಾಖೆಯಲ್ಲಿ ಸಹಾಯಕ ನಿರ್ದೇಶಕರಾಗಿ ಬೆಂಗಳೂರಿನಲ್ಲಿ ಈಗಾಗಲೇ ಸೇವೆ ಸಲ್ಲಿಸುತ್ತಿದ್ದಾರೆ.ನಾಗರಿಕ ಸೇವೆಯಲ್ಲಿ ಇನ್ನೂ ಹೆಚ್ಚಿನ ಯಶಸ್ಸು ಉನ್ನತ ಸ್ಥಾನಮಾನ ಸಿಗಲಿ ಎಂದು ಸಹಕಾರ ಸಚಿವರು ಶುಭಕೋರಿದರು.