ಬಳ್ಳಾರಿ –
ಬಳ್ಳಾರಿ ಜಿಲ್ಲೆಯಿಂದ ನೂತನವಾಗಿ ರಚನೆಗೊಂಡ ವಿಜಯನಗರ ಜಿಲ್ಲೆಯ ಸರ್ಕಾರಿ ನೌಕರರ ಸಂಘಕ್ಕೆ ಪ್ರಥಮ ಅಧ್ಯಕ್ಷರನ್ನಾಗಿ ಜಿ, ಮಲ್ಲಿಕಾರ್ಜುನ ಗೌಡ ಇವರನ್ನು ನೇಮಕ ಮಾಡಿ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷರಾದ ಶ್ರೀ ಸಿ, ಎಸ, ಷಡಾಕ್ಷರಿ ಮತ್ತು ರಾಜ್ಯ ಮಹಾ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಜಗದೀಶ ಗೌಡಪ್ಪ ಪಾಟೀಲರು ಆದೇಶವನ್ನು ಮಾಡಿದ್ದಾರೆ

ಜಿಲ್ಲೆಯ ವಿಭಜನೆ ಆದ ನಂತರ ನೂತನ ಜಿಲ್ಲೆಗೆ ಒಳಪಡುವ ತಾಲೂಕುಗಳಾದ ಹರಪನಹಳ್ಳಿ ಹಡಗಲಿ,ಹಗರಿ ಬೊಮ್ಮನಹಳ್ಳಿ,ಕೊಟ್ಟೂರು, ಕೂಡ್ಲಿ ಗಿ ಹಾಗೂ ಹೊಸಪೇಟೆ ತಾಲೂಕಿನ ಸರ್ಕಾರಿ ನೌಕರ ರ ಸಂಘದ ಅಧ್ಯಕ್ಷರುಗಳು ಮತ್ತು ಕಾರ್ಯಕಾರಿ ಸಮಿತಿಯ ಸದಸ್ಯರು ನೂತನ ಜಿಲ್ಲಾ ಘಟಕ ವನ್ನು ಘೋಷಣೆ ಮಾಡುವಂತೆ ಒತ್ತಾಯಿಸಿ ಪ್ರಸ್ತಾವನೆ ಯನ್ನು ಮಾಡಿದ್ದರು ಸದರಿ ಪ್ರಸ್ಥಾವನೆಯನ್ನು ಬಳ್ಳಾರಿ ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ರಾದ ಶಿವಾಜಿ ರಾವ್ ಇವರು ಅನುಮೋದಿಸಿ ರಾಜ್ಯಾಧ್ಯಕ್ಷರನ್ನು ಕೋರಿಕೊಂಡ ಪ್ರಯುಕ್ತ ಸಂಘದ ಬೈಲಾ ನಿಯಮದಂತೆ ಹೊಸಪೇಟೆ ತಾಲೂಕು ಘಟಕದ ಅಧ್ಯಕ್ಷರಾಗಿದ್ದ ಮಲ್ಲಿಕಾರ್ಜುನ ಗೌಡ ಕಂದಾಯ ಇಲಾಖೆ ಇವರನ್ನು ನೂತನ ವಿಜಯ ನಗರ ಜಿಲ್ಲೆಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ರಾಗಿ ನೇಮಕ ಮಾಡಿದ್ದಾರೆ ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಕಡ್ಲಿ ವೀರಭದ್ರೇಶ ತಿಳಿಸಿದರು

ಮಲ್ಲಿಕಾರ್ಜುನ ಗೌಡ ಇವರ ಆಯ್ಕೆಯನ್ನು ಜಿಲ್ಲೆ ಯ ಎಲ್ಲಾ ತಾಲೂಕುಗಳ ಅಧ್ಯಕ್ಷರುಗಳಾದ ಹರಪ ನಹಳ್ಳಿ ಸಿದ್ದಲಿಂಗನ ಗೌಡರು, ಹಡಗಲಿ ಎಂ.ಪಿ.ಎಂ ಅಶೋಕ, ಹಗರಿ ಬೊಮ್ಮನಹಳ್ಳಿ ಯಂಕಾರೆಡ್ಡಿ, ಕೊಟ್ಟೂರು ಜಗದೀಶ, ಕೂಡ್ಲಿಗಿ ಶಿವರಾಜ್ ಇವರು ಸ್ವಾಗತಿಸಿ, ನೂತನ ವಿಜಯನಗರ ಜಿಲ್ಲೆಯ ಅಧ್ಯಕ್ಷರಾದ ಮಲ್ಲಿಕಾರ್ಜುನ ಗೌಡ ಅಭಿನಂದಿಸಿ ದ್ದಾರೆ ಮತ್ತು ಬಳ್ಳಾರಿ ಜಿಲ್ಲೆಯ ಅಧ್ಯಕ್ಷರಾದ ಶಿವಾಜಿ ರಾವ್ ಇವರು ನೂತನ ಜಿಲ್ಲಾ ಘಟಕಕ್ಕೆ ಸಂಪೂರ್ಣ ಬೆಂಬಲ ನೀಡುವುದಾಗಿ ತಿಳಿಸಿ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ

ಹೊಸಪೇಟೆ ತಾಲೂಕು ಘಟಕ ವಿಜಯನಗರ ಜಿಲ್ಲಾ ಘಟಕವಾಗಿ ಘೊಷಣೆ ಆಗಿದ್ದನ್ನು ಹೊಸಪೇಟೆಯ ಸರ್ಕಾರಿ ನೌಕರರ ಸಂಘದ ಸರ್ವ ಪದಾಧಿಕಾರಿಗ ಳು ಸ್ವಾಗತಿಸಿ ಅಧ್ಯಕ್ಷರಿಗೆ ಅಭಿನಂದನೆ ಸಲ್ಲಿಸಿದರು