ಬೆಂಗಳೂರು –
ಪ್ರಾಥಮಿಕ ಶಾಲಾ ಪದವೀಧರ ಶಿಕ್ಷಕರ ಪದೋನ್ನತಿಗೆ ಐತಿಹಾಸಿಕ ತೀರ್ಮಾನ ಪ್ರಕಟಿಸಿದ ಶಿಕ್ಷಣ ಸಚಿವರಿಗೆ ಅಭಿನಂದನೆಗಳನ್ನು ಸಲ್ಲಿಸಲಾಯಿತು.ಹೌದು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಕಳೆದ ಐದು ವರ್ಷಗಳ ಅತ್ಯಂತ ಪ್ರಮುಖವಾದ ರಾಜ್ಯದ ಪ್ರಾಥಮಿಕ ಶಾಲಾ ಪದವೀಧರ ಶಿಕ್ಷಕರಿಗೆ ಪರೀಕ್ಷೆ ಇಲ್ಲದೆ 6ರಿಂದ 8 ನೇ ತರಗತಿಗೆ ಪರಿಗಣಿಸುವ ಕುರಿತು ಐತಿಹಾಸಿಕ ತೀರ್ಮಾನ ವನ್ನು ಕೈಗೊಂಡು ರಾಜ್ಯದ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಪರೀಕ್ಷೆ ರಹಿತ ವಾಗಿ 6ರಿಂದ 8ನೇ ತರಗತಿಗೆ ಪರಿಗಣಿಸುವ ಕುರಿತು ಐತಿ ಹಾಸಿಕ ತೀರ್ಮಾನವನ್ನು ಶಿಕ್ಷಣ ಸಚಿವರು ಕೈಗೊಂಡಿರು ತ್ತಾರೆ.
ಇದರಿಂದ ಪದವಿ ಪೂರೈಸಿರುವ ಸುಮಾರು 25000 ದಿಂದ 30000 ಶಿಕ್ಷಕರಿಗೆ ಅನುಕೂಲವಾಗಲಿದೆ. ಇಂತಹ ಮಹತ್ವ ಪೂರ್ಣ ನಿರ್ಧಾರವನ್ನು ಪ್ರಕಟಿಸಿದ ಮಾನ್ಯ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರ ಸ್ವಗೃಹಕ್ಕೆ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷರಾದ ಶಂಭುಲಿಂಗನಗೌಡ ಪಾಟೀಲ್ ರಾಜ್ಯ ಪ್ರಧಾನ ಕಾರ್ಯ ದರ್ಶಿ ಚಂದ್ರಶೇಖರ ನುಗ್ಲಿ,ತುಮಕೂರು ಜಿಲ್ಲಾ ಅಧ್ಯಕ್ಷ ರಾದ ಆರ್.ಪರಶಿವಮೂರ್ತಿ,ಚಿತ್ರದುರ್ಗ ಜಿಲ್ಲಾ ಅಧ್ಯಕ್ಷ ರಾದ ಮಾರುತೇಶ್,ತಿಪಟೂರು ತಾಲ್ಲೂಕು ಅಧ್ಯಕ್ಷರಾದ ಜಿ.ಆರ್.ಜಯರಾo ತಿಪಟೂರು ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಟಿ.ಕೆ. ಪಟ್ಟಾಭಿರಾಮು,ಬಿಜಾಪುರ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಗದೀಶ್ ಬೋಳಸೂರ,ಎಚ್. ಕೆ. ಬೂದಿಹಾಳ,ತಿಪಟೂರು ತಾಲ್ಲೂಕು ಗೌರವಾಧ್ಯಕ್ಷರಾದ ಎಚ್.ಸಿ.ಓಂಕಾರಮೂರ್ತಿ ಸಹಕಾರ್ಯದರ್ಶಿ ಸಿ.ಎಸ್. ನಾಗರಾಜು,ಗುಬ್ಬಿ ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಎನ್.ಟಿ.ಪ್ರಕಾಶ್, ರಾಜ್ಯ ಜಂಟಿ ಕಾರ್ಯದರ್ಶಿ ರಾಜಶೇ ಖರ್ ತಿಪಟೂರು ತಾಲ್ಲೂಕು ಉಪಾಧ್ಯಕ್ಷರಾದ ಸೋಮಶೇ ಖರ್,ಸುಮಾ.ಸಿ.ಎಂ.ಖಜಾಂಚಿ ಮಮತಾ,ಎಸ್.ಎಸ್. ಸಹಕಾರ್ಯದರ್ಶಿ ಸಾವಿತ್ರಮ್ಮ ಮುಂತಾದವರು ಹಾಜರಿ ದ್ದು ಅಭಿನಂದನೆ ಸಲ್ಲಿಸಿದರು.ಅಭಿನಂದನೆ ಸ್ವೀಕರಿಸಿ ಹರ್ಷ ವ್ಯಕ್ತಪಡಿಸಿದ ಮಾನ್ಯ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಹಾಗೂ ಸಕಾಲ ಸಚಿವರಾದ ಬಿ.ಸಿ. ನಾಗೇಶ್ ರವರಿಗೆ ಸಂಘವು ಪದೋನ್ನತಿ ನೀಡುವಾಗ ಪ್ರಾಥಮಿಕ ಶಾಲಾ ಪದವೀಧರ ಶಿಕ್ಷಕರ ಇದುವರೆಗಿನ ಸೇವಾ ಜೇಷ್ಠತೆ ಯನ್ನು ವಿಲೀನ ಮಾಡಿ ಮಾಡಿ ಅನುಕೂಲ ಕಲ್ಪಿಸಿಕೊ ಡಬೇಕೆಂದು ಕೋರಿದರು.ಮತ್ತು ರಾಜ್ಯ ಮಟ್ಟದ ಶೈಕ್ಷಣಿಕ ಕಾರ್ಯಾಗಾರವನ್ನು ತಿಪಟೂರಿನಲ್ಲಿ ಏರ್ಪಡಿಸಲು ಸಚಿವರ ಅನುಮತಿ ಕೋರಲಾಯಿತು ಸದರಿ ಮನವಿಗೆ ಸ್ಪಂದಿಸಿದ ಸಚಿವರು 21 ಮೇ 2022ರಂದು ರಾಜ್ಯಮಟ್ಟದ ಶೈಕ್ಷಣಿಕ ಕಾರ್ಯಾಗಾರವನ್ನು ಹಮ್ಮಿಕೊಳ್ಳಲು ಅನುಮತಿ ನೀಡಿದರು.ಈ ಸಂದರ್ಭದಲ್ಲಿ ಶಿಕ್ಷಣ ಇಲಾಖೆಯ ಇತಿಹಾ ಸದಲ್ಲಿ ಮಹತ್ವದ ತೀರ್ಮಾನವನ್ನು ಕೈಗೊಂಡ ಮಾನ್ಯ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರಾದ ಬಿ.ಸಿ. ನಾಗೇಶ್ ರವರಿಗೆ ರಾಜ್ಯದ ಸಮಸ್ತ ಶಿಕ್ಷಕರ ಪರವಾಗಿ ಅಭಿನಂದಿಸಲಾಯಿತು.