ಬೆಂಗಳೂರು –
ಬೆಂಗಳೂರಿನ ಕಾಂಗ್ರೇಸ್ ಪಕ್ಷದ ಚಾಮರಾಜಪೇಟೆ ಶಾಸಕ ಜಮೀರ್ ಅಹಮ್ಮದ್ ಗೆ ಐಟಿ ಅಧಿಕಾರಿ ಗಳು ಶಾಕ್ ನೀಡಿದ್ದಾರೆ.ಹೌದು ಬೆಳ್ಳಂ ಬೆಳಿಗ್ಗೆ ಐಟಿ ಅಧಿಕಾರಿಗಳು ಏಕ ಕಾಲದಲ್ಲಿ ನಾಲ್ಕೈದು ಕಡೆಗಳಲ್ಲಿ ದಾಳಿಯನ್ನು ಮಾಡಿದ್ದಾರೆ.ಐಟಿ ವಂಚನೆ ಸೇರಿದಂತೆ ಹಲವು ವಿಚಾರಗಳಲ್ಲಿ ಮಾಹಿತಿಯನ್ನು ಪಡೆದು ಕೊಂಡಿರುವ ಅಧಿಕಾರಿಗಳು ಜಮೀರ್ ಅಹಮ್ಮದ್ ಮನೆಯ ಮೇಲೆ ದಾಳಿಯನ್ನು ಮಾಡಿದ್ದಾರೆ.

ಬೆಳಿಗ್ಗೆ 6 ಗಂಟೆಗೆ ಈ ಒಂದು ದಾಳಿಯನ್ನು ಅಧಿಕಾರಿ ಗಳು ಮಾಡಿದ್ದು ಮನೆ ಮತ್ತು ಅವರ ಒಡೆತನದ ನ್ಯಾಶನಲ್ ಟ್ರಾವೆಲ್ಸ್ ಕಚೇರಿಗಳಲ್ಲೂ ದಾಳಿ ಮಾಡಿ ಪರಿಶೀಲನೆ ಮಾಡ್ತಾ ಇದ್ದಾರೆ.ಕಂಟೋನ್ಮೆಂಟ್ ಬಡಾವಣೆಯಲ್ಲಿರುವ ಇವರ ಮನೆಯ ಮೇಲೆ ದಾಳಿಯನ್ನು ಮಾಡಲಾಗಿದ್ದು ಕಳೆದ ಎರಡು ಗಂಟೆಗಳಿಂದ ಬಿಡುವಿಲ್ಲದೇ ಅಧಿಕಾರಿಗಳು ಪರಿಶೀಲನೆಯನ್ನು ಮಾಡ್ತಾ ಇದ್ದಾರೆ.