ಹುಬ್ಬಳ್ಳಿ –
ಹುಬ್ಬಳ್ಳಿಯಲ್ಲಿ ಕ್ರಾಂತಿವೀರ ಸಂಗೋಳ್ಳಿ ರಾಯಣ್ಣ ಅಭಿಮಾನಿ ಬಳಗದಿಂದ ಸಂವಿಧಾನ ಶಿಲ್ಪಿ ಡಾ ಬಿ ಆರ್ ಅಂಬೇಡ್ಕರ್ -ಸುರೇಶ ಗೋಕಾಕ ನೇತ್ರತ್ವದಲ್ಲಿ ನಡೆಯಿತು ಜಯಂತೋತ್ಸವ ಕಾರ್ಯಕ್ರಮ
ಸಂವಿಧಾನ ಶಿಲ್ಪಿ ಡಾ ಬಿ ಆರ್ ಡಾ ಬಿ ಆರ್ ಅಂಬೇಡ್ಕರ್ ಅವರ 134 ನೇ ಜಯಂತಿಯನ್ನು ಹುಬ್ಬಳ್ಳಿಯಲ್ಲೂ ಆಚರಣೆ ಮಾಡಲಾಯಿತು.ನಗರದಲ್ಲಿ ಶ್ರೀ ಕ್ರಾಂತಿವೀರ ಸಂಗೋಳ್ಳಿ ರಾಯಣ್ಣ ಅಭಿಮಾನಿ ಬಳಗದಿಂದ ಈ ಒಂದು ಆಚರಣೆಯನ್ನು ಮಾಡ ಲಾಯಿತು.ನಗರದ ಹುಬ್ಬಳ್ಳಿಯ ಸರ್ ಸಿದ್ದಪ್ಪ ಕಂಬಳಿ ಮಾರ್ಗದಲ್ಲಿರುವ ಡಾ ಬಾಬಾ ಸಾಹೇಬ್ ಅಂಬೇಡ್ಕರ್ ರವರ ಮೂರ್ತಿಗೆ ಅಭಿಮಾನಿ ಬಳಗದ ಸಂಸ್ಥಾಪಕ ಅಧ್ಯಕ್ಷರಾದ ಸುರೇಶ ಗೋಕಾಕ ಅವರ ನೇತ್ರತ್ವದಲ್ಲಿ ಈ ಒಂದು ಜಯಂತಿಯನ್ನು ಆಚರಣೆ ಮಾಡಲಾಯಿತು.
ಮೂರ್ತಿಗೆ ಮಾಲಾರ್ಪಣೆ ಮಾಡುವ ಮೂಲಕ 134ನೇ ಜಯಂತೋತ್ಸವವನ್ನು ಶ್ರೀ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅಭಿಮಾನಿಬಳಗದಿಂದ ಆಚರಿಸಲಾಯಿತು. ಈ ಒಂದು ಸಂದರ್ಭದಲ್ಲಿ ಸುರೇಶ ಗೋಕಾಕ ಅಭಿಮಾನಿ ಬಳಗದ ಸ್ನೇಹಿತರಾದ ಅಶೋಕ್ ಆದಿಮನಿ ಯಲ್ಲಪ್ಪ ಅಂಬಿಗೇರ,ದೀಪಕ ಕಲಾಲ,ರಾಮಚಂದ್ರ ದಳವಿ,ನವೀನ ಹತ್ತಿಬೆಳಗಲ್,ದುರ್ಗೇಶ ಪೂಜಾರಿ, ನಾಗರಾಜ ಗೋಕಾಕ್,ಗಣೇಶ ಅಂಬಿಗೇರ್,ಮೌನೇಶ ಮುದಕವಿ, ಹನುಮಂತ ಚಲವಾದಿ,ಅನಿಲ್ ಭಾವೂರ್ ಸೇರಿದಂತೆ ಅಭಿಮಾನಿ ಬಳಗದ ಸ್ನೇಹಿತರು ಆಪ್ತರು ಪಾಲ್ಗೊಂಡು ಸಂವಿಧಾನ ಶಿಲ್ಪಿ ಡಾ ಬಿಆರ್ ಅಂಬೇಡ್ಕರ್ ಅವರ ಜಯಂತಿಗೆ ಸಾಕ್ಷಿಯಾದ್ರು.
ಸುದ್ದಿ ಸಂತೆ ನ್ಯೂಸ್ ಹುಬ್ಬಳ್ಳಿ…..