ನವದೆಹಲಿ –
ಮೊನ್ನೆ ಮೊನ್ನೆಯಷ್ಟೇ ಏರಿಕೆಯಾಗಿದ್ದ ಗೃಹಬಳಕೆಯ ಅನಿಲ ಸಿಲಿಂಡರ್ (14.2 ಕೆ.ಜಿ) ದರವನ್ನು ಮತ್ತೆ ಈಗ ಮತ್ತೆ 25 ರೂ.ನಷ್ಟು ಏರಿಕೆ ಮಾಡಲಾಗಿದೆ. ಈ ಮೂಲಕ ಬೆಲೆ ಏರಿಕೆಯಿಂದ ತತ್ತರಿಸಿರುವಂತ ಜನಸಾಮಾನ್ಯರಿಗೆ ದರ ಏರಿಕೆಯ ಬರೆಯನ್ನು ನೀಡಿ ಮತ್ತೆ ಬಿಗ್ ಶಾಕ್ ನೀಡಲಾಗಿದೆ.
ಇದು ಫೆಬ್ರವರಿ ತಿಂಗಳೊಂದರಲ್ಲೇ ಮೂರನೇ ಬಾರಿಗೆ ಏರಿಕೆಯಾದಂತಾಗಿದೆ. ದೆಹಲಿಯಲ್ಲಿ ಗೃಹಬಳಕೆಯ ಅಡುಗೆ ಅನಿಲ ಸಿಲಿಂಡರ್ ಬೆಲೆ ಈಗ 794 ರೂ. ಫೆಬ್ರವರಿ ತಿಂಗಳೊಂದರಲ್ಲೇ ಸಿಲಿಂಡರ್ ಮೇಲೆ 100 ರೂ ಆಗಿದೆ.ಇದಕ್ಕೂ ಮೊದಲು LPG ಸಿಲಿಂಡರ್ ಬೆಲೆಯನ್ನು ಫೆಬ್ರವರಿ 14 ಮತ್ತು ಫೆಬ್ರವರಿ 4 ರಂದು ಏರಿಸಲಾಗಿತ್ತು
ಭಾರತದ ಇತ್ತೀಚಿನ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಅಡುಗೆ ಅನಿಲ ದರಗಳು ತಿಂಗಳಲ್ಲಿ ಮೂರು ಬಾರಿ ಏರಿಕೆಯಾಗಿವೆ. ಡಿಸೆಂಬರ್ ನಿಂದ ಅಡುಗೆ ಅನಿಲ ದರವನ್ನು ಪ್ರತಿ ಸಿಲಿಂಡರ್ ಗೆ 200 ರೂ. ಭಾರತದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಯಾದ ಹಿನ್ನೆಲೆಯಲ್ಲಿ ಎಲ್ ಪಿಜಿ ಬೆಲೆ ಏರಿಕೆ ಕಂಡಿದೆ.ನೈಸರ್ಗಿಕ ಅನಿಲ ಮತ್ತು ಕಚ್ಚಾ ತೈಲ ವನ್ನು ಮರು ಉತ್ಪಾದಿಸುವ ಒಂದು ಉಪ ಉತ್ಪನ್ನ LPG ಗ್ಯಾಸ್ ಸಿಲಿಂಡರ್ ಗಳ ಬೆಲೆಯನ್ನು ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ನಿರ್ಧರಿಸುತ್ತವೆ. 2020 ರ ನವೆಂಬರ್ ವರೆಗೆ ಮಾಸಿಕ ಆಧಾರದಲ್ಲಿ ಇದನ್ನು ಪರಿಷ್ಕರಿಸಲಾಗುತ್ತದೆ. ಆದರೆ, ಡಿಸೆಂಬರ್ ನಲ್ಲಿ OMC ಗಳು ಎರಡು ಬಾರಿ ದರ ಏರಿಕೆ ಮಾಡಿದವು.ಈಗ ಮತ್ತೆ ಏರುತ್ತಲೇ ಇದೆ.