ಪುತ್ತೂರು –
ಸಾಮಾನ್ಯವಾಗಿ ಸರ್ಕಾರಿ ಶಾಲೆಗಳು ಕೆಲವು ಕಡೆಗಳಲ್ಲಿ ಸುಸಜ್ಜಿತವಾಗಿದ್ದರೆ ಇನ್ನೂ ಕೆಲವು ಕಡೆಗಳಲ್ಲಿ ಸೋರುತ್ತಿರು ತ್ತಿದ್ದು ಹಾಗೇ ಹೀಗೆ ಇರುತ್ತವೆ ಕೆಲವು ಕಡೆಗಳಲ್ಲಿ ಚಳಿಗಾಲ ಮುಗಿದ ಬಳಿಕ ಬೇಸಿಗೆಯ ಬಿಸಿಯಲ್ಲಿ ಶಾಲೆಯಲ್ಲಿ ಮಕ್ಕಳು ಪಾಠ ಕೇಳೋದು ತ್ರಾಸದಾಯಕ ಕೆಲಸವಾದರೆ ಬಹುತೇಕ ಎಲ್ಲಾ ಶಾಲೆಗಳೂ ಕಾಂಕ್ರೀಟ್ ಕಟ್ಟಡಗಳೇ ಆಗಿದ್ದು ಬೇಸಿಗೆಯಲ್ಲಿ ಎಲ್ಲಾ ಶಾಲೆಗಳ ಗೋಳು ಇದೇ ಆಗಿದೆ.ಆದರೆ ದಕ್ಷಿಣ ಕನ್ನಡ ಜಿಲ್ಲೆಯ ಈ ಶಾಲೆಯ ಮಕ್ಕಳಿ ಗೆ ಮಾತ್ರ ಇಂಥ ಬಿಸಿಲಿನ ತಲೆ ಬಿಸಿಯಿಲ್ಲ ಈ ಶಾಲೆಯಲ್ಲಿ ಗಿಡಗಳ ಬಳ್ಳಿಗಳಿಂದಲೇ ಮುಚ್ಚಲ್ಪಟ್ಟ ಹಸಿರು ಹೊದಿಕೆಯ ರಂಗಮಂಟಪವೊಂದಿದ್ದು ದಿನಕ್ಕೆ ಒಂದೆರಡು ಗಂಟೆ ಇದೇ ಹಸಿರ ಹೊದಿಕೆಯಲ್ಲಿ ಕೂಲ್ ಆಗಿ ತರಗತಿ ಕೇಳುವ ವ್ಯವಸ್ಥೆಯನ್ನು ಈ ಶಾಲೆ ಮಾಡಿಕೊಟ್ಟಿದ್ದು ಇದರಿಂದಾಗಿ ವಿದ್ಯಾರ್ಥಿಗಳು ಖುಷಿ ಖುಷಿಯಾಗಿ ಪಾಠ ಕೇಳುತ್ತಿದ್ದಾರೆ. ಹೌದು, ಇದು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂ ಕಿನ ಕೆಯ್ಯೂರಿನ ಕರ್ನಾಟಕ ಪಬ್ಲಿಕ್ ಸ್ಕೂಲ್ ನ ವಿಶೇಷ ತರಗತಿ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗಿರುವ ಈ ಸರಕಾರಿ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಪಾಠ ನಡೆಸಲು ಕೊಠಡಿಗಳ ಸಮಸ್ಯೆ ಎದುರಾದಾಗ ಸ್ಥಳೀಯ ಕೃಷಿಕರ ಸಹಾಯದಿಂದ ತೆಂಗಿನ ಹಾಗೂ ಅಡಿಕೆ ಗರಿಗಳನ್ನು ಬಳಸಿ ಕ್ಲಾಸ್ ರೂಂ ನಿರ್ಮಿಸುವ ಮೂಲಕ ಈ ಶಾಲೆ ಎಲ್ಲರ ಗಮನ ಸೆಳೆದಿದೆ
ಬೇಸಿಗೆಯ ಬಿಸಿಲಿಗೆ ತಂಪನ್ನೆರೆಯುವ ಈ ಕ್ಲಾಸ್ ರೂಂ ನಲ್ಲಿ ಕುಳಿತುಕೊಳ್ಳಲು ವಿದ್ಯಾರ್ಥಿಗಳು ಖುಷಿಯನ್ನೂ ಪಡುತ್ತಿದ್ದರು.ಇದೇ ಶಾಲೆಯಲ್ಲಿ ಇದೇ ರೀತಿಯ ಪ್ರಕೃತಿದತ್ತ ಕ್ಲಾಸ್ ರೂಂ ಗಳಿಗೆ ಹೆಚ್ಚಿನ ಪ್ರಾಶಸ್ತ್ಯವನ್ನೂ ನೀಡಲಾಗು ತ್ತದೆ.ಮಕ್ಕಳ ಮನೋರಂಜನಾ ಕಾರ್ಯಕ್ರಮಗಳಿಗಾಗಿ ನಿರ್ಮಿಸಲಾಗಿರುವ ರಂಗಮಂಟಪದಲ್ಲೂ ಈ ಶಾಲೆಯ ಮಕ್ಕಳಿಗೆ ತರಗತಿಯನ್ನು ಕೇಳುವ ಅವಕಾಶವನ್ನು ಕಲ್ಪಿಸ ಲಾಗಿದೆ.ಇತರ ಶಾಲೆಗಳ ರಂಗಮಂದಿರಗಳಿಗಿಂತ ವಿಭಿನ್ನ ವಾಗಿರುವ ಈ ರಂಗಮಂದಿರದ ಮೇಲ್ಫಾವಣಿ ಸಂಪೂರ್ಣ ಹಸಿರ ಬಳ್ಳಿಗಳಿಂದಲೇ ತುಂಬಿದ್ದು ಬೇಸಿಗೆಯಲ್ಲಿ ತಂಪ ಗೆಯ ವಾತಾವರಣವನ್ನು ಸೃಷ್ಟಿಸುತ್ತದೆ.ಈ ಕಾರಣ ಕ್ಕಾಗಿಯೇ ಈ ಶಾಲೆಯ ಪ್ರತೀ ತರಗತಿಯ ಮಕ್ಕಳಿಗೂ ದಿನಕ್ಕೆ ಒಂದೋ, ಎರಡೋ ಗಂಟೆಗಳ ಕಾಲ ಇದೇ ಹಸಿರು ಹೊದಿಕೆಯ ರಂಗಮಂಟಪದಲ್ಲಿ ಪಾಠ ಮಾಡಲಾಗುತ್ತದೆ ಬೇಸಿಗೆಯ ಬಿಸಿ ಮಕ್ಕಳ ಆರೋಗ್ಯದ ಮೇಲೆ ಪರಿಣಾಮ ಬೀರದಿರಲಿ ಎನ್ನುವ ಕಾರಣಕ್ಕಾಗಿ ಈ ವ್ಯವಸ್ಥೆಯನ್ನು ಈ ಶಾಲೆಯಲ್ಲಿ ಮುಂದುವರಿಸಿಕೊಂಡು ಹೋಗಲಾಗಿದೆ. ಮಂಟಪದ ಮೇಲ್ಫಾವಣಿಗೆ ಆರೋಗ್ಯಕ್ಕೆ ಯಾವುದೇ ದುಷ್ಪರಿಣಾಮವನ್ನು ಬೀರದ ಗಿಡ,ಬಳ್ಳಿಗಳನ್ನು ಬೆಳೆಸಲಾ ಗಿದ್ದು ಪ್ರತೀ ವರ್ಷವೂ ಇವುಗಳ ನಿರ್ವಹಣೆಯನ್ನೂ ಮಾಡಲಾಗುತ್ತಿದೆ.ಕಳೆದ ನಾಲ್ಕು ವರ್ಷಗಳ ಹಿಂದೆ ಈ ಮಂಟಪವನ್ನು ಹಸಿರ ಹೊದಿಕೆಯ ಮೇಲ್ಫಾವಣಿಯನ್ನಾಗಿ ರೂಪಿಸಬೇಕು ಎನ್ನುವ ಉದ್ಧೇಶದಿಂದಲೂ ಈ ಶಾಲೆಯ ಸಿಬ್ಬಂದಿಗಳು ನಾಲ್ಕು ವಿಧದ ಬಳ್ಳಿಗಳನ್ನು ನೆಟ್ಟಿದ್ದಾರೆ. ಫ್ಯಾಷನ್ ಫ್ಲೋರಾ ಡೆನ್ ಬರ್ಜಿಯಾ ಗ್ರ್ಯಾಂಡಿ ಫ್ಲೋರಾ ಮತ್ತು ಫ್ಯಾಷನ್ ಫ್ರೂಟ್ ಬಳ್ಳಿಗಳನ್ನು ಈ ಮೇಲ್ಫಾವಣಿಗೆ ಬಿಡಲಾಗಿದೆ. ನಾಲ್ಕು ವರ್ಷದ ಅವಧಿಯಲ್ಲಿ ಅತ್ಯಂತ ಸಮೃದ್ಧವಾಗಿ ಬೆಳೆದು ಮೇಲ್ಫಾವಣಿ ತುಂಬಾ ಅವರಿಸಿ ಕೊಂಡಿರುವ ಈ ಬಳ್ಳಿಗಳು ಹಲವು ರೀತಿಯ ಪಕ್ಷಿಗಳಿಗೂ ವಾಸಸ್ಥಾನವಾಗಿದೆ. ಪ್ರತೀ ದಿನವೂ ಹನಿ ನೀರಾವರಿ ಮೂಲಕ ನೀರು ಪೂರೈಕೆ ಮಾಡಲಾಗುತ್ತಿದ್ದು ಶಾಲೆಯ ಮಕ್ಕಳೇ ಈ ಗಿಡಗಳನ್ನು ಪೋಷಿಸಿ, ಸಂರಕ್ಷಿಸುತ್ತಿದ್ದಾರೆ. ಅಲ್ಲದೇ ಶಾಲೆಯ ಸುತ್ತಮುತ್ತ ಇರುವಂತಹ ಸಾರ್ವಜನಿ ಕರೂ ಈ ಗಿಡ ಬಳ್ಳಿಗಳಿಗೆ ಯಾವುದೇ ರೀತಿಯ ಹಾನಿ ಯನ್ನೂ ಮಾಡದೆ ತಮ್ಮ ಕೈಲಾದ ಸಹಾಯ ಮಾಡುವ ಮೂಲಕ ಈ ಶಾಲೆಯನ್ನು ಹಸಿರ ಶಾಲೆಯನ್ನಾಗಿ ಮಾಡಲು ಮುಂದಾಗಿದ್ದಾರೆ. ಈ ಗಿಡ ಬಳ್ಳಿಗಳನ್ನು ರಂಗ ಮಂಟಪದ ಮೇಲ್ಫಾವಣಿಗೆ ಹಾಕಿದ ಬಳಿಕ ರಂಗಮಂಟಪ ದಲ್ಲಿ ನಡೆಯುವ ಪ್ರತೀ ಸಭೆ-ಸಮಾರಂಭಗಳಿಗೆ ಹಾಕಲಾ ಗುವ ಶಾಮಿಯಾನಗಳಿಗೆ ನೀಡಬೇಕಾದ 2 ಸಾವಿರದಷ್ಟು ಹಣವನ್ನೂ ಉಳಿಸಿಕೊಂಡಿದೆ.