ಬೆಂಗಳೂರು –
ದೇಶದಲ್ಲಿ ಕೊರೋನಾ ಸೋಂಕಿನ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿವೆ. ಎರಡನೇಯ ಅಲೆಯ ಅಬ್ಬರ ಜೋರಾಗುತ್ತಿರುವ ಹಿನ್ನಲೆಯಲ್ಲಿ ದೇಶಾದ್ಯಂತ ಕೇಂದ್ರ ಸರ್ಕಾರದ ಅಡಿಯಲ್ಲಿನ ಸ್ಮಾರಕಗಳು ಮತ್ತು ವಸ್ತುಸಂಗ್ರಹಾಲಯಗಳನ್ನು ಮೇ.15ರವರೆಗೆ ಮುಚ್ಚುವಂತೆ ಆದೇಶಿಸ ಮಾಡಲಾಗಿದೆ.
ಈ ಕುರಿತಂತೆ ಆರ್ಕ್ಯಾಲಜಿ ಆಫ್ ಇಂಡಿಯಾದ ನಿರ್ದೇಶಕ ಎನ್.ಕೆ.ಪಾಟಕ್ ಆದೇಶ ಹೊರಡಿಸಿದ್ದು, ಕೊರೋನಾ ಸೋಂಕಿನ ಪ್ರಕರಣಗಳ ಸಂಖ್ಯೆ ಹೆಚ್ಚ ಳ ಹಿನ್ನಲೆಯಲ್ಲಿ ಕೂಡಲೇ ಕೇಂದ್ರ ಸರ್ಕಾರದ ಅಧೀ ನದಲ್ಲಿ ಬರುವಂತ ಮಾನ್ಯೂಮೆಂಟ್, ಮ್ಯೂಸಿಯಂ ಗಳನ್ನೂ ಕೂಡಲೇ ಮೇ.15ರವರೆಗೆ ಮುಚ್ಚುವಂತೆ ಆದೇಶಿಸಿದ್ದಾರೆ.
ಹೀಗಾಗಿ ಕೇಂದ್ರ ಸರ್ಕಾರದ ವ್ಯಾಪ್ತಿಯಲ್ಲಿನ ದೇಶದ ಎಲ್ಲಾ ಪ್ರಾಚ್ಯವಸ್ತು ಸ್ಥಳಗಳಿಗೆ ಸಧ್ಯ ಬೀಗ ಹಾಕ ಲಾಗಿದೆ. ದೇಶದಲ್ಲಿ ದಿನದಿಂದ ದಿನಕ್ಕೆ ಮಹಾಮಾರಿ ಕೊರೊನಾ ಹೆಚ್ಚಾಗುತ್ತಿದ್ದು ಹೀಗಾಗಿ ಈ ಒಂದು ನಿರ್ಧಾರವನ್ನು ತಗೆದುಕೊಳ್ಳಲಾಗಿದ್ದು ಇನ್ನೂ ಮುಂದೆ ಸಾರ್ವಜನಿಕರು ಪ್ರವಾಸಕ್ಕೆ ಹೋಗುವ ಮುನ್ನ ನೀವು ಈ ಒಂದು ವಿಚಾರ ನಿಮ್ಮ ಗಮನಕ್ಕೆ ಇರಲಿ ಸಾರ್ವಜನಿಕರೇ