ಮಸ್ಕಿ –
ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕರೋನಾ ಪಾಸಿಟಿವ್ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು ಶಾಲೆಯಲ್ಲೂ ಕೂಡಾ ಹೆಚ್ಚಾಗುತ್ತಿದ್ದು ಇನ್ನೂ ಇತ್ತ ರಾಯಚೂರು ಜಿಲ್ಲೆಯ ಮಸ್ಕಿ ಪಟ್ಟಣದ ಸರ್ಕಾರಿ ಬಾಲಕಿಯರ ಪ್ರೌಢಶಾಲೆಯಲ್ಲಿ ಕರೋನಾ ಸ್ಪೋಟಗೊಂಡಿದ್ದು 21 ವಿದ್ಯಾರ್ಥಿನಿಯರಿಗೆ ಕೋವಿಡ್ ದೃಢಪಟ್ಟಿದೆ.ಈ ಒಂದು ಸೋಂಕಿನ ಪ್ರಮಾಣ ಶಾಲೆಯಲ್ಲಿ ಕಂಡು ಬರುತ್ತಿದ್ದು ಇದರಿಂದಾಗಿ ಎಚ್ಚೆತ್ತು ಕೊಂಡು ಕೂಡಲೇ ಶಾಲೆಯಲ್ಲಿ ಎಲ್ಲಾ ಪರೀಕ್ಷೆಗಳನ್ನು ಮಾಡಿಸಲಾಗಿದ್ದು ಇನ್ನೂ ಇತ್ತ ಮೂರು ದಿನ ಶಾಲೆಯನ್ನು ಬಂದ್ ಮಾಡಲಾಗಿದೆ.

ಹಾಗೇ ಶಾಲೆಯ ಎಲ್ಲಾ ವಿದ್ಯಾರ್ಥಿನಿಯರಿಗೆ ಕೋವಿಡ್ ಪರೀಕ್ಷೆ ನಡೆಸಲಾಗುತ್ತಿದೆ ಹಾಗೇ ಶಾಲೆಯ ಎಲ್ಲ ಕೊಠಡಿ ಗಳಿಗೆ ಸಾನಿಟೈಸರ್ ಮಾಡಲಾಗಿದ್ದು ಮಕ್ಕಳ ಆರೋಗ್ಯ ದೃಷ್ಟಿಯಿಂದ ಹೆಚ್ಚು ಕಾಳಜಿ ತೆಗೆದುಕೊಳ್ಳಲಾಗಿದೆ ಎಂದು ಶಾಲೆಯ ಶಿಕ್ಷಕರು ಹೇಳಿದ್ದಾರೆ.