ಮೈಸೂರು –
ಕೋವಿಡ್ ಇಂಜೆಕ್ಷನ್ ತಗೆದುಕೊಳ್ಳುವ ವಿಚಾರ ಕುರಿತು ಸರ್ಕಾರ ಗಳು ಎಷ್ಟೋ ಜಾಗೃತಿ ತಿಳುವಳಿಕೆ ಮೂಡಿಸಿದರು ಕೂಡಾ ಇನ್ನೂ ತಗೆದುಕೊಳ್ಳಲು ಹಿಂದೆ ಮುಂದೆ ನೋಡತಾ ಇದ್ದಾರೆ.ಇದೇಲ್ಲದರ ನಡುವೆ ಆರೋಗ್ಯ ಇಲಾಖೆಯ ಸಿಬ್ಬಂದಿ ಗಳು ಹೊಸದೊಂದು ಪ್ರಯೋಗಕ್ಕೆ ಮುಂದಾಗಿದ್ದಾರೆ
ಹೌದು ಕರೊನಾ ಇಂಜೆಕ್ಷನಮ್ಮ, ಇಂಜೆಕ್ಷನ್ನೂ…..!
ಫಸ್ಟ್‌ನೇ ಡೋಸು,ಸೆಕೆಂಡ್‌ನೇ ಡೋಸು.
ಯಾರ್ ಹಾಕಿಸಿಕೊಂಡಿಲ್ಲ ಬರ್ರಮ್ಮೋ,ಬರ್ರಪ್ಪೋ…
ಹತ್ತಿ ಬುಡ್ಸಕ್ ಹೋಗಿರೋರು….ಜೋಳದ್ ಮೆದೆ, ರಾಗಿ ತೆನೆ ಎತ್ತಕ್ ಹೋಗಿರೋರು…ಬ್ಯಾರಲ್ ಬೇಯ್ಸಕ್ ಹೋಗಿರೋರು…
ಯಾರಿದ್ದೀರಿ ಬನ್ರಪ್ಪೋ ಬನ್ನಿ. ಫಸ್ಟ್‌ನೇ ಡೋಸು, ಎರಡನೇ ಡೋಸು…ಮಾರಾಟದ ವಸ್ತುವಂತೆ ಬೀದಿ ಬೀದಿಗಳಲ್ಲಿ ಕೊರೋನ ಲಸಿಕೆ ವಿತರಣೆ ಮುಂದಾಗಿದ್ದಾರೆ
ಮೈಸೂರು ಜಿಲ್ಲೆ ಸರಗೂರು ತಾಲೂಕಿನ ಬೀದಿ ಬೀದಿಯಲ್ಲಿ ಕರೋನ ಲಸಿಕೆ ಜಾಗೃತಿ ಸಾಮಾಜಿಕ ಜಾಲತಾಣದಲ್ಲಿ ಹೀಗೊಂದು ವಿಡಿಯೋ ವೈರಲ್.
ಹಾಡಿ ಹಾದಿಯಲ್ಲಿ ಸಾರುತ್ತ ಸಾಗಿದ ಆರೋಗ್ಯ ಇಲಾಖೆ ಸಿಬ್ಬಂದಿ.
ಯಶವಂತಪುರ ಗ್ರಾಮದಲ್ಲಿ ವಿಶೇಷ ಲಸಿಕಾ ಅಭಿಯಾನದಲ್ಲಿ ಈ ಒಂದು ಚಿತ್ರಣ ಕಂಡು ಬಂದಿತು.ಎಚ್.ಡಿ.ಕೋಟೆ ಸಮೀಪದ ಎಂ.ಸಿ. ತಳಲು ಗ್ರಾಮ ಪಂಚಾಯತಿ ವ್ಯಾಪ್ತಿಯ ಗ್ರಾಮದಲ್ಲಿ ನಡೆದಿದೆ.