ಶಿಕ್ಷಣ ಸಚಿವರಿಗೆ ಕರೋನಾ ಪಾಸಿಟಿವ್ – ನನ್ನ ಸಂಪರ್ಕಕ್ಕೆ ಬಂದವರೆಲ್ಲರೂ ಪರೀಕ್ಷೆ ಮಾಡಿಸಿಕೊಳ್ಳಿ ಎಂದರು ಸಚಿವರು

Suddi Sante Desk

ಬೆಂಗಳೂರು –

ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ ಸಿ ನಾಗೇಶ್ ಅವರಿಗೆ ಕರೋನಾ ಪಾಸಿಟಿವ್ ಆಗಿದೆ.ಕೋವಿಡ್ ನ ಲಕ್ಷಣಗಳು ಕಂಡು ಬಂದ ಹಿನ್ನಲೆಯಲ್ಲಿ ಪರೀಕ್ಷೆ ಮಾಡಿಸಿ ಕೊಂಡ ಸಚಿವರಿಗೆ ವರದಿಯಲ್ಲಿ ಪಾಸಿಟಿವ್ ಬಂದಿದೆ

ಇನ್ನೂ ಸಧ್ಯ ಸಚಿವರು ಕ್ವಾರಂಟೈನ್ ಆಗಿದ್ದಾರೆ.ಒಂದು ಕಡೆ ರಾಜ್ಯದಲ್ಲಿ ಮತ್ತೆ ದಿನದಿಂದ ದಿನಕ್ಕೆ ಕರೋನಾ ಮಹಾ ಮಾರಿ ಹೆಚ್ಚಾಗುತ್ತಿದ್ದು ಮತ್ತೊಂದು ಕಡೆಗೆ ಸಚಿವ ಸಂಪುಟ ದ ಒರ್ವ ಸಚಿವರಲ್ಲಿಯೂ ಪಾಸಿಟಿವ್ ಕಂಡು ಬಂದಿದ್ದು ಸಧ್ಯ ಸಚಿವರು ಕ್ವಾರಂಟೈನ್ ಆಗಿದ್ದು ಇನ್ನೂ ಈನಡುವೆ ನನ್ನ ಸಂಪರ್ಕಕ್ಕೆ ಬಂದವರು ಪರೀಕ್ಷೆ ಮಾಡಿಸಿಕೊಳ್ಳಿ ಎಂದು ಸಂದೇಶವನ್ನು ಸಚಿವ ಬಿ ಸಿ ನಾಗೇಶ್ ಅವರು ನೀಡಿದ್ದಾರೆ.

ಸಧ್ಯ ಕರೋನಾ ದ ಸಾಮಾನ್ಯ ಲಕ್ಷಣಗಳು ಸಚಿವರಲ್ಲಿ ಕಾಣಿಸಿಕೊಂಡಿದ್ದು ಚಿಕಿತ್ಸೆಯನ್ನು ಪಡೆದುಕೊಳ್ಳದೇ ಮನೆಯಲ್ಲಿಯೇ ಕ್ವಾರಂಟೈನ್ ಆಗಿದ್ದಾರೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.