ಸರ್ಕಾರಿ ಶಾಲೆಯ ಮಕ್ಕಳಿಗೆ ಕರೋನಾ ಪಾಸಿಟಿವ್ ಆತಂಕದಲ್ಲಿ ಶಾಲೆಯ ಮಕ್ಕಳು ಶಿಕ್ಷಕರು…..

Suddi Sante Desk

ಚಾಮರಾಜನಗರ –

ಶಾಲಾ ಮಕ್ಕಳಿಗೆ ಕರೋನಾ ಪಾಸಿಟಿವ್ ಕಾಣಿಸಿಕೊಂಡ ಘಟನೆ .ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲೂಕಿನ ಕೊಡಗಾಪುರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದಿದೆ. ಹೌದು ಶಾಲೆಯಲ್ಲಿನ ಇಬ್ಬರು ಮಕ್ಕಳಿಗೆ ಪಾಸಿಟಿವ್ ಕಾಣಿಸಿಕೊಂಡಿದ್ದು ಇಬ್ಬರು ಶಾಲಾ ಮಕ್ಕಳಿಗೆ‌ ಪಾಸಿಟಿವ್ ಹಿನ್ನಲೆಯಲ್ಲಿ ಸಧ್ಯ ಶಾಲೆಯ 70 ಮಕ್ಕಳಿಗೆ ಕೋವಿಡ್ ಟೆಸ್ಟ್ ಮಾಡಿಸಲಾಗಿದೆ. ಇನ್ನೂ ಮುಂಜಾಗೃತಾ ಕ್ರಮವಾಗಿ ಶಾಲೆಯಲ್ಲಿ ಎಲ್ಲಾ ಸಿದ್ದತೆಗಳನ್ನು ಮಾಡಲಾಗಿದ್ದು ಶಿಕ್ಷಕ ಪೋಷಕರಿಂದ ಇಬ್ಬರು ಮಕ್ಕಳಿಗೆ ಪಾಸಿಟಿವ್ ಹರಡಿದೆ.

ಕಬ್ಬಳ್ಳಿ ಸರ್ಕಾರಿ‌ ಶಾಲೆಯ‌ ಶಿಕ್ಷಕನಿಗೆ ಪಾಸಿಟಿವ್ ಕಂಡು ಬಂದಿದ್ದು ತಂದೆಯಿಂದ ಇಬ್ಬರು ಮಕ್ಕಳಿಗೂ ಪಾಸಿಟಿವ್. ತಂದೆ ಕಬ್ನಳ್ಳಿ ಸರ್ಕಾರಿ ಶಾಲೆಯಲ್ಲಿ ಶಿಕ್ಷಕ.ಇಬ್ಬರು‌ ಮಕ್ಕಳು ಕೊಡಗಾಪುರ ಶಾಲೆಯಲ್ಲಿ ಓದುತ್ತಿದ್ದಾರೆ.ಮಕ್ಕಳಿಗೆ ಪಾಸಿಟಿವ್ ಬಂದ ಹಿನ್ನಲೆಯಲ್ಲಿ ಕೊಡಗಾಪುರ ಸರ್ಕಾರಿ ಶಾಲೆಯ 70 ಮಕ್ಕಳಿಗೂ ಕೋವಿಡ್ ಟೆಸ್ಟ್ ಮಾಡಿಸಲಾ ಗಿದೆ.ಬಿಇಓ ಶಾಂತಮೂರ್ತಿ ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲೂಕಿನ ಸೋಮಳ್ಳಿ ಗ್ರಾಮ ಪಂಚಾಯ್ತಿ ಯಿಂದ ಸ್ಯಾನಿಟೈಸರ್ ಮಾಡಿಸಿದ್ದು ಕೊಡಗಾಪುರ ಸರ್ಕಾರಿ ಹಿರಿಯ ಪ್ರಾಥಮಿಕ‌ ಶಾಲೆಯ ಮಕ್ಕಳು ಆರೋ ಗ್ಯದ ಮೇಲೆ ನಿಗಾ ವಹಿಸಿದೆ ಶಿಕ್ಷಣ ಇಲಾಖೆ ಮತ್ತು ಅಧಿಕಾ ರಿಗಳು.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.