ರಾಜ್ಯದಲ್ಲಿ ಕರೊನಾ ಸ್ಪೊಟ – ರಾಜ್ಯ ಸರ್ಕಾರದಿಂದ ಹೊಸ ರೂಲ್ಸ್ ರಿಲೀಸ್ – ನಾಳೆಯಿಂದ ಏನೇಲ್ಲಾ ಇರೊದಿಲ್ಲ ಇರುತ್ತೇ ಇಲ್ಲಿದೆ ಪಕ್ಕಾ ಮಾಹಿತಿ…..

Suddi Sante Desk

ಬೆಂಗಳೂರು –


ರಾಜ್ಯದಲ್ಲೂ ಕೂಡಾ ಕರೋನಾದ ಎರಡನೇಯ ಅಲೆಯ ಅಬ್ಬರ ಜೋರಾಗಿದೆ. ದಿನದಿಂದ ದಿನಕ್ಕೆ ಎರಡನೇಯ ಅಲೆ ಹೆಚ್ಚಾಗುತ್ತಿದ್ದ ಇದರಿಂದ ಎಚ್ಚೆತ್ತುಕೊಂಡ ರಾಜ್ಯ ಸರ್ಕಾರ ರಾಜ್ಯದಲ್ಲಿ ಕೆಲವು ಚಟುವಟಿಕೆಗಳಿಗೆ ನಿಯಂತ್ರಣ ಹಾಕಿದೆ. ಹೌದು
ರಾಜ್ಯ ಸರ್ಕಾರದಿಂದ ಕೊರೋನಾ ನಿಯಂತ್ರಣ ಕ್ಕಾಗಿ ಟಫ್ ರೂಲ್ಸ್ ಜಾರಿಗೊಳಿಸಲಾಗಿದೆ. ಹೊಸ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದ್ದು ಕೊರೋನಾ ಹೆಚ್ಚಳದ ಜಿಲ್ಲೆಗಳಲ್ಲಿ ಟಫ್ ರೂಲ್ಸ್ ಜಾರಿಗೊಳಿಸಿದೆ.

ಪ್ರಮುಖವಾಗಿ ಈವರೆಗೆ ರಾಜ್ಯದಲ್ಲಿ ಜಾರಿಯಲ್ಲಿದ್ದ ವಿದ್ಯಾಗಮನವೂ ಸೇರಿದಂತೆ 6 ರಿಂದ 9ನೇ ತರಗತಿ ಗಳನ್ನು ಮತ್ತೆ ಬಂದ್ ಮಾಡಿ ಸ್ಥಗಿತಗೊಳಿಸಲಾಗಿದೆ. 10, 11 ಹಾಗೂ 12ನೇ ತರಗತಿಗಳು ಪ್ರಸ್ತುತ ಇರುವಂತೆಯೇ ಮುಂದುವರೆಯುತ್ತವೆ. ಆದಾಗ್ಯೂ ತರಗತಿಗಳಿಗೆ ವಿದ್ಯಾರ್ಥಿಗಳಿಗೆ ಹಾಜರಾತಿಯನ್ನು ಕಡ್ಡಾಯವಾಗಿರುವುದಿಲ್ಲ.

ಇನ್ನೂ ಉನ್ನತ ಶಿಕ್ಷಣ ಹಾಗೂ ವೃತ್ತಿಪರ ಕೋರ್ಸ್ ಗಳ ತರಗತಿಗಳಲ್ಲಿ ಮಂಡಳಿಯು, ವಿವಿ ಪರೀಕ್ಷೆ ಬರೆಯುವ ಹಾಗೂ ವೈದ್ಯಕೀಯ ಶಿಕ್ಷಣದ ತರಗತಿ ಗಳನ್ನು ಹೊರತು ಪಡಿಸಿ, ಇತರ ಎಲ್ಲಾ ತರಗತಿಗ ಳನ್ನು ಸ್ಥಗಿತಗೊಳಿಸಲಾಗಿದೆ.ವಸತಿ ಶಾಲೆಗಳು, ಬೋರ್ಡಿಂಗ್ ಇರುವ ಶಾಲೆಗಳಲ್ಲಿ 10, 11 ಹಾಗೂ 12ನೇ ತರಗತಿ ಬೋರ್ಡ್ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಹೊರತಾಗಿ ಎಲ್ಲಾ ತರಗತಿಗಳನ್ನು ಸ್ಥಗಿತಗೊಳಸಲಾಗಿದೆ.

ಧಾರ್ಮಿಕ ಸ್ಥಳಗಳಲ್ಲಿ ವೈಯಕ್ತಿಕವಾಗಿ ಪ್ರಾರ್ಥನೆ ಮಾಡಲು ಅವಕಾಶವಿರುತ್ತದೆ. ಆದರೆ ಗುಂಪು ಸೇರುವ ಕಾರ್ಯಕ್ರಮಗಳನ್ನು ನಿಷೇಧ ಮಾಡಲಾಗಿ ದೆ.ಇನ್ನೂ ಪ್ರಮುಖವಾಗಿ ಅಪಾರ್ಮೆಂಟ್ ಕಾಂಪ್ಲೆಕ್ಸ್ ಗಳಲ್ಲಿ, ಸಾಮಾನ್ಯವಾಗಿ ನಿವಾಸಿಗಳು, ಜನರು ಸೇರುವ ಸ್ಥಳಗಳಾದ ಜಿಮ್, ಪಾರ್ಟಿ ಹಾಲ್ ಗಳು, ಕ್ಲಬ್, ಈಜುಕೊಳ ಇತ್ಯಾದಿಗಳು ಉಳಿದಂತೆ ಎಲ್ಲಾ ಜಿಮ್ ಗಳು ಹಾಗೂ ಈಜುಕೊಳಗಳು ಮುಚ್ಚಲ್ಪಟ್ಟಿ ರುತ್ತವೆ.

ಯಾವುದೇ ತರಹದ ದೊಡ್ಡ ರಾಲಿ ಮುಷ್ಕರ, ಧರಣಿ ಇತ್ಯಾದಿಗಳನ್ನು ನಿಷೇಧಿಸಲಾಗಿದೆ. ಇನ್ನೂ ಸಾರ್ವಜ ನಿಕ ಸಾರಿಗೆಗಳಲ್ಲಿ ಪ್ರಯಾಣಿಕರ ಸಂಖ್ಯೆಯು ನಿಗದಿ ಪಡಿಸಿರುವ ಆಸನದ ವ್ಯವಸ್ಥೆಯನ್ನು ಮೀರುವಂತಿ ಲ್ಲ ಇದರೊಂದಿಗೆ ಕಛೇರಿಗಳು ಹಾಗೂ ಇತರ ಕೆಲಸ ನಿರ್ವಹಿಸುವ ಸ್ಥಳಗಳಲ್ಲಿ ಸಾಧ್ಯವಾದಷ್ಟು ಮನೆ ಯಿಂದಲೇ ಕೆಲಸ ನಿರ್ವಹಿಸುವ ಅಭ್ಯಾಸ ವ್ಯವಸ್ಥೆ ಯನ್ನು ಪಾಲಿಸುವುದು.ಬೆಂಗಳೂರು ನಗರ, ಗ್ರಾಮಾಂತರ, ಬಿಬಿಎಂಪಿ ಸೇರಿದಂತೆ ಮೈಸೂರು, ಕಲಬುರ್ಗಿ, ದಕ್ಷಿಣ ಕನ್ನಡ, ಉಡುಪಿ, ಬೀದರ್ ಮತ್ತು ಧಾರವಾಡ ಜಿಲ್ಲೆಗಳಲ್ಲಿ ಸಿನಿಮಾ ಹಾಲ್ ಗಳಲ್ಲಿ ಪರ್ಯಾಯ ಆಸನಗಳಲ್ಲಿ ಕೂರುವಂತೆ, ಒಂದು ಬಿಟ್ಟು ಮತ್ತೊಂದು ಸೀಟುಗಳಲ್ಲಿ ಕುಳಿತು ಕೊಳ್ಳುವಂತೆ ಗರಿಷ್ಠ 50 ವೀಕ್ಷಕರಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಇನ್ನೂ ಬೆಂಗಳೂರು ನಗರ, ಗ್ರಾಮಾತಂರ ಬಿಬಿಎಂಪ ವ್ಯಾಪ್ತಿ ಸೇರಿದಂತೆ ಮೈಸೂರು, ಕಲಬುರ್ಗಿ, ದಕ್ಷಿಣ ಕನ್ನಡ, ಉಡುಪಿ, ಬೀದರ್ ಮತ್ತು ಧಾರವಾಡ ಜಿಲ್ಲೆಗಳ್ಲಲಿ ಪಬ್, ಬಾರ್, ಕ್ಲಬ್, ರೆಸ್ಟೋರೆಂಟ್ ಗಳಲ್ಲಿ ಗರಿಷ್ಠ ಗ್ರಾಹಕ ರ ಸಂಖ್ಯೆಯು ಶೇ.50ರಷ್ಟು ಮೀರುವಂತಿಲ್ಲ.
ಈ ನಿಯಮ ಉಲ್ಲಂಘಿಸಿದ್ರೇ ಕ್ರಮವನ್ನು ಕೈಗೊಳ್ಳುವ ಸೂಚನೆಯನ್ನು ಸರ್ಕಾರ ನೀಡಿದೆ. ಅಲ್ಲದೇ ಸಾರ್ವಜನಿಕ ಸ್ಥಳಗಳಲ್ಲಿ ಧಾರ್ಮಿಕ ಆಚರಣೆಗಳು, ಜಾತ್ರೆ, ಮಹೋತ್ಸವಗಳು ಮೇಳ ಗಳು ಗುಂಪು ಸೇರುವುದರ ನಿಷೇಧ ಮಾಡಲಾಗಿದೆ. ಈ ನಿಯಮಗಳು 20-04-2021 ರವರೆಗೆ ಮುಂದು ವರೆಯಲಿದ್ದು ಮತ್ತೇನಾಗಲಿದೆ ಎಂಬುದನ್ನು ಕಾದು ನೋಡಬೇಕು

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.