ಹುಬ್ಬಳ್ಳಿ –
ಕುಟುಂದವರೊಂದಿಗೆ ಗಣಪತಿ ದರ್ಶನದೊಂದಿಗೆ ಪೂಜೆ ನೆರವೇರಿಸಿದ ಪಾಲಿಕೆಯ ಆಯುಕ್ತ ಡಾ ಈಶ್ವರ ಉಳ್ಳಾಗಡ್ಡಿ – ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ನೌಕರರ ಸಂಘದಿಂದ ಸ್ಧಾಪನೆಗೊಂಡ ಗಣಪತಿ – ಆಯುಕ್ತರಿಗೆ ಸಾಥ್ ನೀಡಿದ ಪಾಲಿಕೆಯ ಸಿಬ್ಬಂದಿಗಳು ಅಧಿಕಾರಿಗಳು
ಎಲ್ಲೇಡೆ ಗೌರಿ ಗಣೇಶ ಹಬ್ಬದ ಸಡಗರ ಸಂಭ್ರಮ ಮನೆ ಮಾಡಿದ್ದು ಇನ್ನೂ ಇತ್ತ ರಾಜ್ಯದ ಎರಡನೇಯ ದೊಡ್ಡ ಮಹಾನಗರ ಪಾಲಿಕೆ ಎಂದೇ ಹೆಸರಾಗಿರುವ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯಲ್ಲೂ ಗೌರಿ ಗಣೇಶ ಹಬ್ಬದ ಸಡಗರ ಸಂಭ್ರಮ ಮನೆ ಮಾಡಿದ್ದು ಪಾಲಿಕೆಯ ಆವರಣದಲ್ಲೂ ಗಣೇಶನನ್ನು ಪ್ರತಿಷ್ಠಾಪನೆ ಮಾಡಲಾಗಿದೆ.
ಇನ್ನೂ ಪಾಲಿಕೆಯ ಆಯುಕ್ತ ಡಾ ಈಶ್ವರ ಉಳ್ಳಾಗಡ್ಡಿ ಯವರು ಪತ್ನಿ ಯೊಂದಿಗೆ ಗೌರಿ ಗಣೇಶನ ದರ್ಶನ ಪಡೆದುಕೊಂಡು ಪೂಜೆಯನ್ನು ಮಾಡಿದರು.ಹೌದು ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ನೌಕರರ ಸಂಘದಿಂದ ಸ್ಫಾಪನೆಗೊಂಡಿರುವ ಈ ಒಂದು ಗಣೇಶ ನಿಗೆ ಪಾಲಿಕೆಯ ಆಯುಕ್ತ ಡಾ ಈಶ್ವರ ಉಳ್ಳಾಗಡ್ಡಿಯ ವರು ವಿಶೇಷವಾದ ಪೂಜೆಯನ್ನು ಸಲ್ಲಿಸಿ ದರ್ಶನವನ್ನು ಮಾಡಿದರು.
ಪತ್ನಿ ಸೌಮ್ಯ ಮಗಳ ಸಾನ್ವಿ, ಆಯುಕ್ತರ ಕಚೇರಿಯ ಸಿಬ್ಬಂದಿಗಳಾದ ಶ್ರೀಧರ ಸಣ್ಣಪ್ಪಗೌಡರ,ನೌಕರರ ಸಂಘದ ಅಧ್ಯಕ್ಷರು ಸಿಬ್ಬಂದಿಗಳು ಸೇರಿದಂತೆ ಹಲವರು ಉಪಸ್ಥಿತರಿದ್ದರು.ಇದೇ ವೇಳೆ ಪಾಲಿಕೆಗೆ ನೌಕರರಿಗೆ ಸಿಬ್ಬಂದಿಗಳಿಗೆ ಸೇರಿದಂತೆ ಸರ್ವರಿಗೂ ಒಳ್ಳೇಯದಾ ಗಲಿ ಎಲ್ಲಾ ವಿಘ್ನಗಳು ನಿವಾರಣೆಯಾಗಿ ಒಳ್ಲೇಯದಾ ಗಲಿ ಎಂದು ಸಾಮೂಹಿಕವಾಗಿ ಗಣಪತಿಗೆ ಪೂಜೆಯನ್ನು ಸಲ್ಲಿಸಿ ಪ್ರಾರ್ಥನೆಯನ್ನು ಮಾಡಲಾಯಿತು.
ಸುದ್ದಿ ಸಂತೆ ನ್ಯೂಸ್ ಹುಬ್ಬಳ್ಳಿ……