ಹಾವೇರಿ –
ವರ್ಗಾವಣೆಗೆ ಶಿಕ್ಷಕರೊಬ್ಬರಿಂದ ಹಣಕ್ಕೆ ಬೇಟಿಕೆ ಇಟ್ಟಿದ್ದ ಬಿಇಒ ಕಚೇರಿಯ ಮ್ಯಾನೇಜರ್ ರೊಬ್ಬರು ಎಸಿಬಿ ಬಲೆಗೆ ಬಿದ್ದು ಈಗ ಜೈಲು ಸೇರಿದ್ದಾರೆ. ಹೌದು ಶಿಕ್ಷಕರ ವರ್ಗಾವಣೆಗೆ ಶಿಕ್ಷಕರೊಬ್ಬರಿಂದಲೇ ಹಣದ ಬೇಡಿಕೆಯನ್ನಿಟ್ಟ ಬಿಇಒ ಕಚೇರಿಯ ಮ್ಯಾನೇಜರ್ ರೊಬ್ಬರು ಹಾವೇರಿ ಎಸಿಬಿ ಬಲೆಗೆ ಬಿದ್ದಿದ್ದರು. ಜಿಲ್ಲೆಯ ಶಿಗ್ಗಾವಿ ಪಟ್ಟಣದ ಬಿಇಒ ಕಚೇರಿ ಮ್ಯಾನೇ ಜರ್ ಸುರೇಶ ಗಿರೇಪ್ಪ ರೊಡ್ಡಣ್ಣ ವರ ಎಸಿಬಿ ಬಲೆಗೆ ಬಿದ್ದ ಮ್ಯಾನೇಜರ್ ಆಗಿದ್ದು ಇನ್ನೂ ವರ್ಗಾವಣೆ ಗೆಂದು ಶಿಕ್ಷಕರೊಬ್ಬರಿಂದ ನಾಲ್ಕು ಸಾವಿರ ರೂಪಾ ಯಿ ಲಂಚದ ಹಣಕ್ಕೆ ಬೇಡಿಕೆ ಇಟ್ಟಿದ್ದರು.ಈ ಕುರಿ ತಂತೆ ಶಿಕ್ಷಕ ಹನುಮಂತಪ್ಪ ಹಳ್ಳೆಪ್ಪನವರ ಎಸಿಬಿ ಗೆ ದೂರನ್ನು ನೀಡಿದ್ದರು.ಈಗಾಗಲೇ ಮುಂಚಿತವಾಗಿ ಒಂದು ಸಾವಿರ ರೂಪಾಯಿ ಹಣವನ್ನು ಶಿಕ್ಷಕರಿಂದ ಪಡೆದು ಇಂದು ಇನ್ನೂಳಿದ 3 ಸಾವಿರ ರೂಪಾಯಿ ಪಡೆಯುತ್ತಿರುವ ಸಂದರ್ಭದಲ್ಲಿ ದಾವಣಗೆರೆ ಭ್ರಷ್ಟಾಚಾರ ನಿಗ್ರಹ ದಳ ತಂಡಕ್ಕೆ ಸಿಕ್ಕಿಬಿದ್ದಿದ್ದರು. ಪಟ್ಟಣದ ಗಾಂಧಿನಗರದ ಶಾಲೆ ಶಿಕ್ಷಕ ಹನುಮಂ ತಪ್ಪ ಭರಮಪ್ಪ ಹಳ್ಳೆಪ್ಪನವರ ಅವರ ವರ್ಗಾವಣೆ ಮಾಡಲು ರೂಪಾಯಿ 4 ಸಾವಿರ ಬೇಡಿಕೆ ಇಟ್ಟಿದ್ದರು.

ಮುಂಗಡವಾಗಿ 1 ಸಾವಿರ ಮೊದಲೇ ಪಡೆದಿದ್ದು, ಉಳಿದ 3 ಸಾವಿರ ರೂಪಾಯಿ ಹಣವನ್ನು ಲಂಚ ಪಡೆಯುವ ಸಂದರ್ಭದಲ್ಲಿ ಎಸಿಬಿ ಅಧಿಕಾರಿಗಳು ದಾಳಿ ನಡೆದಿತ್ತು. ದಾವಣಗೆರೆ ವಲಯದ ಎಸಿಬಿ ಎಸ್ಪಿ ಜಯಪ್ರಕಾಶ ನೇತೃತ್ವದಲ್ಲಿ ಡಿವೈಎಸ್ಪಿ ಮಹಾಂತೇಶ ಜಿದ್ದಿ.ಇನ್ಸ್ಪೆಕ್ಟರ್ ಗಳಾದ ಎಸ್.ಕೆ. ಪಟ್ಟಣಕೂಡಿ,ಪ್ರಭಾವತಿ ಶೇಖವಡಿ, ಸಿಬ್ಬಂದಿ ಗಳಾದ ಬಿ.ಎಸ್.ಕರಡಣ್ಣವರ,ಕಡಕೊಳ, ಅಗಸಿಕೆರಿ ವೆಂಕಟೇಶ ಹುಲಿಹಳ್ಳಿ, ಮಂಜುನಾಥ, ಮೂಲಿಮನಿ ಕಾಂಬಳೆ, ಬಸಪ್ಪ ಕಾರ್ಯಾಚರಣೆಯಲ್ಲಿ ಪಾಲ್ಗೊಂ ಡಿದ್ದು ಸಧ್ಯ ಭಷ್ಟ ಬಿಇಒ ಕಚೇರಿಯ ಮ್ಯಾನೇಜರ್ ಗಿರೇಪ್ಪ ಅವರನ್ನು ವಶಕ್ಕೆ ತಗೆದುಕೊಂಡಿದ್ದ ಅಧಿಕಾ ರಿಗಳು ಎಲ್ಲಾ ಕಾರ್ಯಗಳನ್ನು ಮುಗಿಸಿ ಶೋಧವ ನ್ನು ಮಾಡಿ ನ್ಯಾಯಾಧೀಶರ ಎದುರು ಹಾಜರು ಮಾಡಿ ನ್ಯಾಯಾಲಯಕ್ಕೆ ಹಾಜರು ಮಾಡಿದ್ದಾರೆ. ಸಧ್ಯ 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಆದೇಶವನ್ನು ನೀಡಿದ್ದು ಹೀಗಾಗಿ ಜೈಲು ಸೇರಿದ್ದಾರೆ.