ಹೊಸಪೇಟೆ
ಮಕ್ಕಳಿಗೆ ವಿಷವುಣಿಸಿ ನೇಣು ಬಿಗಿದುಕೊಂಡು ದಂಪತಿಗಳಿಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಧಾರುಣ ಘಟನೆ ಹೊಸಪೇಟೆಯಲ್ಲಿ ನಡೆದಿದೆ.

ಬಳ್ಳಾರಿ ಜಿಲ್ಲೆಯ ಹೊಸಪೇಟೆ ತಾಲೂಕಿನ ಗಾದಿಗನೂರು ಗ್ರಾಮದಲ್ಲಿ ಈ ಒಂದು ಧಾರುಣ ಘಟನೆ ನಡೆದಿದೆ.ಒಂದೇ ಕುಟುಂಬದ ನಾಲ್ವರು ಸಾವಿಗೀಡಾಗಿದ್ದಾರೆ.

ಮಕ್ಕಳಿಗೆ ವಿಷವುಣಿಸಿದ ದಂಪತಿಗಳು ನಂತರ ತಾವುಗಳು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡು ಸಾವಿಗೆ ಶರಣಾಗಿದ್ದಾರೆ. ನಂಜುಂಡೇಶ್ಚರ( 32) ಪತ್ನಿ ಪಾರ್ವತಿ, ಮಕ್ಕಳಾದ ಮೂರು ವರ್ಷದ ಗೌತಮಿ, 2 ವರ್ಷದ ಮಗ ಸ್ವರೂಪ್ ಮೃತ ದುರ್ದೈವಿಗಳಾಗಿದ್ದಾರೆ.

ನಂಜುಂಡೇಶ್ವರ ಜಿಂದಾಲ್ ಕಂಪನಿಯಲ್ಲಿ ನೌಕರರರಾಗಿದ್ದನು ತುಂಬು ಸಂಸಾರ ಮುದ್ದಾದ ಮಕ್ಕಳು ಕೈತುಂಬಾ ಸಂಬಳ ಹೀಗೆ ಎಲ್ಲಾ ಸರಿಯಾಗಿದ್ದ ನಂಜುಂಡೇಶ್ವರ ಕುಟುಂಬದೊಂದಿಗೆ ಸಾವಿಗೆ ಶರಣಾಗಲು ಕಾರಣವೇನು ಈ ಕುರಿತಂತೆ ಸಾವಿನ ಚೀಟಿಯೊಂದನ್ನು ಬರೆದಿಟ್ಟಿದ್ದಾನೆ.

ಡೆತ್ ನೋಟ್ ಬರೆದಿಟ್ಟು ವಿಷಯ ತಿಳಿದ ಗಾದಿಗನೂರು ಪೊಲೀಸರು ಸ್ಥಳಕ್ಕೇ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಮಕ್ಕಳಿಗೆ ವಿಷವುಣಿಸಿ, ದಂಪತಿಗಳಿಬ್ರು ಸಾವಿಗೆ ಕಾರಣವಾದರು ಏನು ಎಂಬ ಕುರಿತು ಪೊಲೀಸರು ತನಿಖೆ ಮಾಡ್ತಾ ಇದ್ದಾರೆ.

ನೇಣು ಬೀಗಿದುಕೊಂಡಿದ್ದಾದರೂ ಯಾಕೇ ಕುಟುಂಬದ ಸಾಮೂಹಿಕ ಸಾವಿಗೆ ಕಾರಣವೇನು ಈ ಎಲ್ಲಾ ಪ್ರಶ್ನೆಗಳಿಗೆ ಗಾದಿಗನೂರು ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ಮಾಡ್ತಾ ಇದ್ದಾರೆ.