ಕಲಬುರಗಿ – ದೂರು ದಾಖಲಿಸಲು ವಿಫಲರಾದ ಕಲಬುರಗಿಯ ಸ್ಟೇಷನ್ ಬಜಾರ್ ಪೋಲಿಸ್ ಠಾಣಾಧಿಕಾರಿಗೆ ಠಾಣೆ ಎದುರಿನ ರಸ್ತೆಯನ್ನು ಒಂದು ವಾರಗಳ ಕಾಲ ಸ್ವಚ್ಛಗೊಳಿಸುವಂತೆ ಕಲಬುರಗಿ ಹೈಕೋರ್ಟ್ ಪೀಠ ನಿರ್ದೇಶನ ನೀಡಿದೆ.
ಕಲಬುರಗಿಯ ಮಿಣಜಗಿ ತಾಂಡಾದ ತಾರಾಬಾಯಿ ಎಂಬುವರು ಮಗ ಸುರೇಶ್ ನಾಪತ್ತೆಯಾಗಿದ್ದಾನೆ ಅಂತ ದೂರು ನೀಡಲು ಠಾಣೆಗೆ ಬಂದಿದ್ರು ಆದ್ರೆ ಪೊಲೀಸ್ ಠಾಣೆ ಯಲ್ಲಿ ಮಗನ ನಾಪತ್ತೆ ದೂರು ದಾಖಲಿಸಿ ಕೊಂಡಿರಲಿಲ್ಲ ಹಾಗಾಗಿ ತಾರಾಬಾಯಿ 2020 ರ ಅಕ್ಟೋಬರ್ 20 ರಂದು ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ದರು.
ತಾರಾಬಾಯಿ ನೀಡಿದ ದೂರಿನ ಬಗ್ಗೆ ಡೈರಿಯಲ್ಲಿ ದಾಖಲಿಸಿಲ್ಲ. FIR ನ್ನು ದಾಖಲಿಸಿಲ್ಲ CRPC ಅಡಿಯಲ್ಲಿ ಸೂಚಿಸಲಾದ ಕಾರ್ಯ ವಿಧಾನಗಳನ್ನು ಫೋಲಿಸ್ ಅಧಿಕಾರಿ ಪಾಲಿಸದ ಕಾರಣ ಈ ಸಮಸ್ಯೆ ಉಧ್ಭವಿಸಿದೆ ಎಂದು ನ್ಯಾಯಮೂರ್ತಿ ಸುನೀಲ್ ದತ್ತ ಯಾದವ್ ಮತ್ತು ನ್ಯಾಯಮೂರ್ತಿ ಪಿ. ಕೃಷ್ಣಭಟ್ ಅವರಿದ್ದ ವಿಭಾಗೀಯ ಪೀಠ ಅಭಿಪ್ರಾಯ ಪಟ್ಟಿತು.
ಸಮುದಾಯದ ಸೇವೆ ಮಾಡಲು ಪೋಲಿಸ್ ಅಧಿಕಾರಿ ಸಿದ್ದರಿದ್ದಾರೆ. ನ್ಯಾಯಾಲಯ ಮೃಧುತ್ವ ತಾಳಬೇಕು ಎಂದು ಅಧಿಕಾರಿ ಪರ ವಕೀಲರು ಕೋರಿದರು. ಹೀಗಾಗಿ ಹೈ ಕೋರ್ಟ್ ಪೋಲಿಸ್ ರ ವಿರುದ್ಧ ಗರಂ ಆಗಿ ಪೋಲಿಸ್ ಠಾಣೆಯ ಮುಂಭಾಗದ ರಸ್ತೆಯನ್ನು ಒಂದು ವಾರ ಸ್ವಚ್ಛಗೊಳಿಸುವಂತೆ ನಿರ್ದೇಶನ ನೀಡಿದೆ.