ಬೆಂಗಳೂರು –
ನಿನ್ನೆಯಿಂದ ಯಾವುದೇ ವಾಟ್ಸ್ ನಲ್ಲಿ ಯಾವುದೇ ಗ್ರೂಪ್ ನಲ್ಲಿ ಎಲ್ಲಿ ನೋಡಿದರು ನೊಡಿದರೇ ಒಂದೇ ಒಂದು ಮೇಸೆಜ್ ಪಿಂಕ್ ಬಣ್ಣದ ಹೊಸ ಬಗೆ ವಾಟ್ಸ್ ಆಫ್ Update Your Whatsapp To Enjoy New Features with Pink Look ಹೀಗೆ ಒಂದು ಸಿಂಬಲ್ ಜೊತೆಗೆ ಪಿಂಕ್ ವಾಟ್ಸಪ್, ನ್ಯೂ ವರ್ಶನ್ ಹೆಸರಿನಲ್ಲಿ ಲಿಂಕ್ ಒಂದು ಹರಿದಾ ಡುತ್ತಿದೆ.ನೋಡು ನೋಡುತ್ತಲೆ ಸಾಲು ಸಾಲಾಗಿ ಈ ಒಂದು ಸಂದೇಶವನ್ನು ಫಾರವರ್ಡ್ ಮಾಡಿದ್ದೇ ಮಾಡಿದ್ದು ಇನ್ನೂ ಇದರ ಬಗ್ಗೆ ಅಲ್ಪ ಸ್ವಲ್ಪನೂ ನಮ್ಮವರು ತಿಳಿದುಕೊಳ್ಳದೇ ಲಿಂಕ್ ನ್ನು ಗುಂಪು ಗುಂಪು ವಾಟ್ಸ್ ಆಪ್ ಗಳಿಗೆ ಹಾಕಿದ್ದೇ ಹಾಕಿದ್ದು ಇನ್ನೂ ಕುತೂಹಲದಿಂದ ಕೆಲವರು ಇದನ್ನು ಒತ್ತಿದ ಅದೆಷ್ಟೋ ಮಂದಿ ಲಿಂಕಾಸುರನ ಹೊಸ ಅವತಾರ ವನ್ನು ಒಮ್ಮೇ ಲಿಂಕ್ ಒತ್ತಿ ನಂತರ ಅದನ್ನು ಕಂಡು ಬೆಚ್ಚಿ ಬಿದ್ದಿದ್ದಾರೆ.
ಹೌದು ಮಧ್ಯಾಹ್ನದ ನಂತರ ವಾಟ್ಸ್ ಆಪ್ ಮತ್ತು ಇತರೆ ಸಾಮಾಜಿಕ ಜಾಲ ತಾಣಗಳಲ್ಲಿ ಆರಂಭಗೊಂ ಡ ಈ ಒಂದು ಸಂದೇಶದ ಆರ್ಭಟ ಇನ್ನೂ ನಿಲ್ಲುತ್ತಿ ಲ್ಲ ಪ್ರತಿಯೊಬ್ಬರು ಈ ಒಂದು ಸಂದೇಶವನ್ನು ಫಾರ್ ವರ್ಡ್ ಮಾಡಿದ್ದೇ ಮಾಡಿದ್ದು ಇನ್ನೂ ಮಾಡುತ್ತಲೇ ಇದ್ದಾರೆ.
ನಿನ್ನೇ ಸಂಜೆ ವಾಟ್ಸಪ್ ಜಾಲತಾಣದಲ್ಲಿ ವಿಶೇಷ ಅತಿಥಿಯಾಗಿ ಈ ಒಂದು ಸಂದೇಶ ಆರಂಭವಾಗಿದ್ದು ಪಿಂಕ್ ಬಣ್ಣದ ಸಿಂಬಲ್ ಜೊತೆಗೆ ಪಿಂಕ್ ವಾಟ್ಸಪ್, ನ್ಯೂ ವರ್ಶನ್ ಹೆಸರಿನಲ್ಲಿ ಲಿಂಕ್ ಒಂದು ಹರಿದಾ ಡುತ್ತಿದೆ ಲಿಂಕ್ ಒತ್ತಿದ ಅದೆಷ್ಟೋ ಮಂದಿ ನಂತರ ಲಿಂಕ್ ನ್ನು ಒತ್ತಿ ಬೆಚ್ಚಿ ಬಿದ್ದಿದ್ದಾರೆ ಅದರಿಂದ ಹೇಗೆ ಹೊರಗೆ ಬರೊದು ಎನ್ನುತ್ತಾ ಮೊಬೈಲ್ ನ್ನು ರಿಸ್ಟಾರ್ಟ್ ಮಾಡಿದ್ದೇ ಮಾಡಿದ್ದು.
ಬೇರೇನೂ ಹಾನಿ ಇಲ್ಲದಿದ್ದರೂ, ಈ ಲಿಂಕ್ ತನ್ನಿಂದ ತಾನೇ ಒತ್ತಿದ ವ್ಯಕ್ತಿ ಎಷ್ಟು ಗ್ರೂಪ್ ಗಳಲ್ಲಿ ಸದಸ್ಯರಾ ಗಿದ್ದಾರೆ ಮತ್ತು ಅವರ ಜೊತೆ ವೈಯಕ್ತಿಕವಾಗಿ ಯಾರೆಲ್ಲ ಲಿಂಕ್ ಹೊಂದಿದ್ದಾರೆ ಅವೆರಲ್ಲರಿಗೂ ಈ ಲಿಂಕ್ ಹೋಗ್ತಾ ಇತ್ತು. ಹೊಸ ವರ್ಷನ್ ಏನೋ ಇರಬೇಕು ಎಂದು ಹೊಸ ವ್ಯಕ್ತಿ ಅದನ್ನು ಒತ್ತಿದ ಕೂಡಲೇ ಅದು ಮತ್ತೆ ಎಲ್ಲರ ಜೊತೆಗೂ ಹಂಚಿಕೆ ಆಗ್ತಾ ಇತ್ತು.
ಇನ್ನೂ ಆ ಲಿಂಕ್ ಒತ್ತಿದ ಕೂಡಲೇ ತನ್ನಷ್ಟಕ್ಕೇ ಅವರ ಹೆಸರಲ್ಲಿ ಅದೇ ಲಿಂಕ್ ಫಾರ್ವರ್ಡ್ ಆಗ್ತಾ ಇತ್ತು. ಯಾರ ಜೊತೆಗೆಲ್ಲಾ ವಾಟ್ಸಪ್ ಕನೆಕ್ಷನ್ ಇಟ್ಟುಕೊಂ ಡಿದ್ದಾರೋ ಅವರೆಲ್ಲರಿಗೂ ಲಿಂಕ್ ತನ್ನಿಂದ ತಾನೇ ಹೋಗ್ತಾ ಇತ್ತು. ಪಿಂಕ್ ಹೆಸರಲ್ಲಿ ಯಾರೋ ಮಾಂತ್ರಿ ಕ ಲಿಂಕ್ ಬಿಟ್ಟು ಯಾಮಾರಿಸಿದ್ದಾರೆಂತೆ ಅದು ಮಾತ್ರ ನಿಜವಾಗಿದೆ.
ಇದು ಹೊಸ ರೀತಿಯ ವೈರಸ್ ಆಗಿದ್ದು ವಾಟ್ಸ್ ಆಪ್ ನಲ್ಲಿ ಕುಟ್ಟುತ್ತಾ ಇರುವ ಶೂರರೆಲ್ಲಾ ಈ ಲಿಂಕಾಸುರನ ಕೂಪಕ್ಕೆ ಸಿಲುಕಿ ಕೆಲಕಾಲ ಒದ್ದಾಡಿ ದ್ದಾರೆ. ಕೆಲವರಂತೂ ಈ ಲಿಂಕ್ ವೈರಸ್ ಅನ್ನೋದು ಗೊತ್ತಾಗುತ್ತಲೇ ಮತ್ತೆ ಡಿಲೀಟ್ ಬಟನ್ ಒತ್ತಲು ಆರಂಭಿಸಿದ್ದಾರೆ. ಆದರೆ ಒಮ್ಮೆ ಒತ್ತಿದರೆ ಮುಗೀತು ಕ್ಷಣಾರ್ಧದಲ್ಲಿ ಸಾವಿರಾರು ಮಂದಿಗೆ ಲಿಂಕ್ ಹಂಚಿಕೆಯಾಗಿರುತ್ತೆ.
ಸಾವಿರಾರು ಮಂದಿ ಈ ಲಿಂಕ್ ಕೂಪಕ್ಕೆ ಒದ್ದಾಡು ವಂತಾಗಿದೆ. ಮಾಧ್ಯದವರು ಕೂಡಾ ಇದರಿಂದ ಹೊರತಾಗಿಲ್ಲವೆಂಬಂತೆ ಕಂಡುಬಂದಿತು. ಈ ಬಗ್ಗೆ ಗೂಗಲ್ ನಲ್ಲಿ ಕೇಳಿ ನೋಡಿದರೆ, ಪಿಂಕ್ ವಾಟ್ಸಪ್ ಅನ್ನೋ ಕಾನ್ಸಪ್ಟ್ ಇದೆಯಂತೆ. ಒಂದೇ ಮೊಬೈಲ್ ನಲ್ಲಿ ಎರಡು ರೀತಿಯಲ್ಲಿ ವಾಟ್ಸ್ ಆಪ್ ಬಳಕೆಗೆ ಅನುವು ಮಾಡುವ ಆಪ್ ಅದು.ಒಂದೇ ನಂಬರಿ ನಲ್ಲಿ ಎರಡು ಬಗೆಯಲ್ಲಿ ವಾಟ್ಸಪ್ ಬಳಕೆ ಮಾಡಿಕೊ ಳ್ಳಲು ಪಿಂಕ್ ವಾಟ್ಸಪ್ ಬಳಕೆ ಮಾಡಬಹುದು ಎಂದಿದೆ.
ಆದರೆ, ಈ ಪಿಂಕ್ ವಾಟ್ಸಪ್ ಹೆಸರಲ್ಲಿ ಯಾರೋ ಕಿಡಿಗೇಡಿಗಳು ಈ ರೀತಿಯ ವೈರಸ್ ಲಿಂಕನ್ನೇ ತೆರೆದು ಹರಿಯಬಿಟ್ಟಿದ್ದಾರೆ.ಇನ್ನೂ ನಿಮಗೆ ಬೇರೆ ಈ ತರಹದ ಯಾವುದೇ ಸಂದೇಶಗಳು ನಿಮಗೆ ಬರುವ ಮೊದಲು ನೀವು ಅವುಗಳ ಬಗ್ಗೆ ಸ್ವಲ್ಪು ತಿಳಿದುಕೊಂ ಡು ನೋಡಿ ನಂತರ ನಿಮಗೆ ಬೇಕಾದರೆ ಅವಶ್ಯಕತೆ ಇದ್ದರೆ ಆ ಆಫ್ ನ್ನು ನಿಮ್ಮ ಮೊಬೈಲ್ ಗೆ ಹಾಕಿಕೊ ಳ್ಳಿ ಇಲ್ಲವಾದರೆ ರಿಮೂವ್ ಮಾಡಿ