ಕ್ರಿಕೆಟ್ ಆಟಗಾರ ರಿಷಬ್ ಪಂತ್ ಕಾರು ಅಪಘಾತ – ಗಂಭೀರವಾಗಿ ಗಾಯಗೊಂಡಿರುವ ರಿಷಬ್ ಪಂತ್ ಆಸ್ಪತ್ರೆಗೆ ದಾಖಲು

Suddi Sante Desk
ಕ್ರಿಕೆಟ್ ಆಟಗಾರ ರಿಷಬ್ ಪಂತ್ ಕಾರು ಅಪಘಾತ – ಗಂಭೀರವಾಗಿ ಗಾಯಗೊಂಡಿರುವ ರಿಷಬ್ ಪಂತ್ ಆಸ್ಪತ್ರೆಗೆ ದಾಖಲು

ನವದೆಹಲಿ

ಭಾರತ ಕ್ರಿಕೆಟ್ ತಂಡದ ಯುವ ಆಟಗಾರ ರಿಷಬ್ ಪಂತ್ ಕಾರು ಅಪಘಾತವಾಗಿದೆ.ಇನ್ನೂ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಕ್ರಿಕೆಟಿಗ ರಿಷಭ್ ಪಂತ್‌ಗೆ ಗಂಭೀರ ಗಾಯಗಳಾಗಿದ್ದು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ದೆಹಲಿಯಿಂದ ಮನೆಗೆ ಮರಳುತ್ತಿದ್ದಾಗ ಈ ಒಂದು ಅಪಘಾತ ಸಂಭವಿಸಿದೆ.ರೂರ್ಕಿಯ ನರ್ಸನ್ ಗಡಿಯಲ್ಲಿರುವ ಹಮ್ಮದ್ಪುರ್ ಝಾಲ್ ಬಳಿ ಅವರ ಕಾರು ಅಪಘಾತವಾಗಿದೆ. ಅಪಘಾತ ದಲ್ಲಿ ತೀವ್ರವಾಗಿ ಗಾಯಗೊಂಡಿರುವ ರಿಷಭ್ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ದೆಹಲಿಯ ಏಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಕಾಲಿಗೆ ಗಾಯಗಳಾಗಿದ್ದು ಇದಕ್ಕಾಗಿ ಪ್ಲಾಸ್ಟಿಕ್ ಸರ್ಜರಿಯನ್ನು ಮಾಡಲಾಗಿದೆ.ರಿಷಭ್ ಪಂತ್ ಅವರ ಹಣೆ ಮತ್ತು ಕಾಲಿಗೆ ಗಾಯಗಳಾಗಿದ್ದು ಸುದ್ದಿ ತಿಳಿದ ಪೊಲೀಸ್ ವರಿಷ್ಠಾಧಿಕಾರಿ ದೇಹತ್ ಸ್ವಪನ್ ಕಿಶೋರ್ ಸಿಂಗ್ ಸ್ಥಳಕ್ಕೆ ಆಗಮಿಸಿ ಪರಿ ಶೀಲನೆ ನಡೆಸಿ ಮುಂದಿನ ಕ್ರಮವನ್ನು ಕೈಗೊಂಡಿ ದ್ದಾರೆ.

ಇನ್ನೂ ಸದ್ಯ ರಿಷಭ್ ಪಂತ್ ಅವರ ಆರೋಗ್ಯ ಸ್ಥಿರವಾಗಿದ್ದು ಅವರನ್ನು ದೆಹಲಿಯ ಏಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.ಕಾರು ಹೇಗೆ ಅಪಘಾತವಾಗಿದೆ ಎಂಬ ಕುರಿತಂತೆ ಪರಿಶೀಲನೆ ಮಾಡುತ್ತಿದ್ದು ಕಾರಿಗೆ ಬೆಂಕಿ ಹೊತ್ತಿಕೊಂಡಿದ್ದು ಬೆಂಕಿಯನ್ನು ಬಹಳ ಕಷ್ಟಪಟ್ಟು ಹತೋಟಿಗೆ ತಂದಿದ್ದು ಈ ಕುರಿತು ಪರಿಶೀಲನೆ ಮಾಡಲಾಗು ತ್ತಿದ್ಜು ರಿಷಭ್ ಪಂತ್ ದೆಹಲಿಯಿಂದ ರೂರ್ಕಿಗೆ ಕಾರಿನಲ್ಲಿ ಬರುತ್ತಿದ್ದರು ಅಂದ ಹಾಗೇ ರಿಷಬ್ ಪಂತ್ ಅವರ ಮನೆ ರೂರ್ಕಿಯಲ್ಲಿದೆ ಇದೇ ವೇಳೇ ಅವರ ಕಾರು ನರ್ಸಾನ್ ಪಟ್ಟಣವನ್ನು ತಲುಪಿದಾಗ ಕಾರು ಅನಿಯಂತ್ರಿತವಾಗಿ ಪಲ್ಟಿ ಯಾಗಿದ್ದು ಕಂಬಗಳಿಗೆ ಡಿಕ್ಕಿ ಹೊಡೆದಿದ್ದು ಎಲ್ಲ ವನ್ನೂ ಪೊಲೀಸರು ಪರಿಶೀಲನೆ ಮಾಡತಾ ಇದ್ದಾರೆ.

ಸುದ್ದಿ ಸಂತೆ ನ್ಯೂಸ್ ರೂರ್ಕಿ…..

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.