ಧಾರವಾಡ –
ಕೋಟಿ ಕೋಟಿ ದುಬಾರಿ ಬಸ್ ಗೆ ಆಸರೆಯಾಯಿತು ಖಾಲಿ ಬಾಟಲ್ – ಅಧಿಕಾರಿಗಳ ಎದುರೇ ಧಾರವಾಡ ದಲ್ಲಿ ಅನಾವರಣವಾಯಿತು ದುಬಾರಿ ಬೆಲೆಯ ಬಸ್ ವ್ಯವಸ್ಥೆ…..ಏನು ಮಾಡೊದು ಇದು ನಮ್ಮ ಕರ್ಮ ಎಂದ್ರು ಸಿಬ್ಬಂದಿ
ದೇಶದಲ್ಲಿಯೇ ಅತಿ ದೊಡ್ಡ ಸಾರಿಗೆ ಇಲಾಖೆ ಎಂಬ ಕೀರ್ತಿಗೆ ರಾಜ್ಯ ಸಾರಿಗೆ ಇಲಾಖೆಗೆ ಸಲ್ಲುತ್ತದೆ.ಈ ಒಂದು ಸಾರಿಗೆ ಇಲಾಖೆಯ ವ್ಯಾಪ್ತಿ ದೊಡ್ಡದಾಗಿದ್ದು ಸರ್ಕಾರ ಏನೋ ಆಗಾಗ್ಗೆ ಹೊಸ ಬಸ್ ಗಳನ್ನು ಇಲಾಖೆಗೆ ನೀಡು ತ್ತದೆ ಆದರೆ ಅಧಿಕಾರಿಗಳು ಅವುಗಳನ್ನು ಸರಿಯಾಗಿ ನಿರ್ವಹಣೆ ಮಾಡಿಕೊಳ್ಳೊದಿಲ್ಲ ಎಂಬೊದಕ್ಕೆ ತಾಜಾ ಉದಾಹರಣೆ ಧಾರವಾಡದ ಹೊಸ ಬಸ್ ನಿಲ್ದಾಣದಲ್ಲಿ ಕಂಡು ಬಂದ ಚಿತ್ರಣ.
ಹೆಸರಿಗೆ ಮಾತ್ರ ಇದು ವೊಲ್ವೊ ಕಂಪನಿಯ ಬಸ್ ಬೆಳಗಾವಿ ಯಿಂದ ತಿರುಪತಿಗೆ ಹೋಗುವ ಈ ಒಂದು ಬಸ್ ವ್ಯವಸ್ಥೆ ಧಾರವಾಡದ ಹೊಸ ಬಸ್ ನಿಲ್ದಾಣದಲ್ಲಿ ಕಂಡು ಬಂದಿತು.ಸಾಮಾನ್ಯವಾಗಿ ದೂರ ಹೋಗುವ ಬಸ್ ಗಳನ್ನು ಚಾಲಕರು ಹೇಳಿದ ತಕ್ಷಣ ಡಿಪೋ ದಲ್ಲಿ ಮೆಕ್ಯಾನಿಕ್ ಗಳು ನೋಡಿಕೊಂಡು ಸರಿ ಮಾಡಬೇಕು ಅಧಿಕಾರಿಗಳು ಕೂಡಾ ಹೇಳಬೇಕು ಆದರೆ ಇದ್ಯಾವುದು ಆಗುತ್ತಿಲ್ಲ ಹೀಗಾಗಿ ಅಳುಗಾಡುತ್ತಿದ್ದ ಮೀರರ್ ಗೆ ಚಾಲಕರು ಖಾಲಿಯಾದ ಪ್ಲಾಸ್ಟಿಕ್ ಬಾಟಲ್ ಇಟ್ಟು ಕೊಳ್ಳುತ್ತಾ ಮೀರರ್ ಸರಿ ಮಾಡಿಕೊಳ್ಳುತ್ತಿರುವ ಚಿತ್ರಣ ಕಂಡು ಬಂದಿತು.
ಬಸ್ ಯಾಕೆ ಹೋಗುತ್ತಿಲ್ಲ ಎಂದುಕೊಂಡು ಬಸ್ ನಲ್ಲಿದ್ದ ಪ್ರಯಾಣಿಕರು ನೋಡಿದ್ರೆ ಮೀರರ್ ಗೆ ಬಾಟಲ್ ಇಡುತ್ತಿರುವ ಚಿತ್ರಣ ನೋಡಿ ಅಯ್ಯೋ ದೇವರೆ ಎಂದುಕೊಂಡು ಸುಮ್ಮನಾದರು.ಇದು ಕೋಟಿ ಕೋಟಿ ದುಬಾರಿ ಬಸ್ ವ್ಯವಸ್ಥೆ ಎಂಬ ಮಾತುಗಳನ್ನು ಕೂಡಾ ಹೇಳಿದ್ದು ಕಂಡು ಬಂದಿತು.ಇನ್ನೂ ನಿಲ್ದಾಣದಲ್ಲಿದ್ದ ಅಧಿಕಾರಿಗಳು ವಿಶೇಷವಾಗಿತ್ತು
ಒಟ್ಟಾರೆ ಏನೇ ಆಗಲಿ ಸರ್ಕಾರ ಏನೇಲ್ಲಾ ವ್ಯವಸ್ಥೆ ಸೌಲಭ್ಯ ನೀಡಿದ್ರು ಕೂಡಾ ಇಲಾಖೆಯ ಅಧಿಕಾರಿಗಳು ಸಿಬ್ಬಂದಿಗಳು ಸರಿಯಾಗಿ ಕೆಲಸ ಮಾಡೊದಿಲ್ಲ ಎಂಬೊದಕ್ಕೆ ಈ ಒಂದು ಬಸ್ ವ್ಯವಸ್ಥೆ ಒಂದು ಉದಾಹರಣೆ ಸಾಕ್ಷಿಯಾಗಿದ್ದು ಇನ್ನಾದರೂ ಇಲಾಖೆಯ ವೇತನ ತಗೆದುಕೊಳ್ಳುವ ಅಧಿಕಾರಿಗಳು ಸರಿಯಾಗಿ ಕರ್ತವ್ಯ ಮಾಡಿ ಇದ್ದ ವ್ಯವಸ್ಥೆಯಲ್ಲಿ ಬಸ್ ಗಳನ್ನು ಸರಿಯಾಗಿ ನಿರ್ವಹಣೆ ಮಾಡಿ ಚಾಲಕರ,ನಿರ್ವಾಹಕರ ಸಮಸ್ಯೆಗೆ ನಾಂದಿ ಹಾಡುತ್ತಾರೆಯಾ ಎಂಬೊದನ್ನು ಕಾದು ನೋಡಬೇಕಿದೆ.
ಸುದ್ದಿ ಸಂತೆ ನ್ಯೂಸ್ ಧಾರವಾಡ…..