ಬೆಂಗಳೂರು –
ರಾಜ್ಯ ಜಲ ಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಅವರದ್ದು ಎನ್ನಲಾದ ಸಿಡಿಯೊಂದು ಬಿಡುಗಡೆಯಾದ ಬೆನ್ನಲ್ಲೇ ರಾಜ್ಯ ರಾಜಕೀಯದಲ್ಲಿ ಭಾರಿ ಕೋಲಾಹಲ ಎದ್ದಿದೆ. ಇದಿನ್ನೂ ಟ್ರೈಲರ್ ಅಷ್ಟೇ ಅಂತೆ ಇನ್ನೂ ಇಬ್ಬರ ಕಾಮ ಪುರಾಣದ ಸಿಡಿ ಇವೆಯಂತೆ. ಸದ್ಯದಲ್ಲೇ ಇನ್ನಿಬ್ಬರ ಸಚಿವರ ಸಿಡಿ ಬಿಡುಗಡೆಯಾಗಲಿದೆ ಎನ್ನುವ ಚರ್ಚೆಯೂ ಆರಂಭವಾಗಿದೆ.
ಇನ್ನಿಬ್ಬರು ಸಚಿವರ ಸಿಡಿ ಬಿಡುಗಡೆಯಾಗುವ ಬಗ್ಗೆ ರಾಜಕೀಯ ವಲಯದಲ್ಲಿ ಚರ್ಚೆ ನಡೆಯುತ್ತಿದೆ. ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳೆರೆಡೂ ಈ ರೀತಿ ಚರ್ಚೆ ನಡೆಸುತ್ತಿವೆ. ಹಳೇ ಮೈಸೂರು ಭಾಗದ ಒಬ್ಬರು ಮತ್ತು ಉತ್ತರ ಕರ್ನಾಟಕ ಭಾಗದ ಒಬ್ಬ ಸಚಿವರ ಸಿಡಿ ಬಿಡುಗಡೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಆದರೆ ಯಾವಾಗ ಆ ಸಿಡಿಗಳು ಬಿಡುಗಡೆಯಾಗಲಿವೆ ಎನ್ನುವುದರ ಬಗ್ಗೆ ಕುತೂಹಲವಿದ್ದು ಭಾರೀ ಚರ್ಚೆ ನಡೆಯುತ್ತಿದೆ.
ನಾಳೆ ರಾಜ್ಯ ಸಚಿವ ಸಂಪುಟದ ಸಭೆಯಿದ್ದು, ಅದರ ಹಿಂದಿನ ದಿನವೇ ಇಂದು ಒಂದು ಮಹತ್ವದ ಬೆಳವಣಿಗೆ ರಾಜ್ಯದಲ್ಲಾಗಿದೆ.ಸಚಿವ ರಮೇಶ್ ಜಾರಕಿಹೊಳಿ ಅವರು ಸಭೆಗೆ ಬರಲಿದ್ದಾರೆಯೇ ಅಥವಾ ಇಲ್ಲವೇ ಎನ್ನುವುದನ್ನು ಕಾದು ನೋಡಬೇಕಿದೆ ಜೊತೆಯಲ್ಲಿ ಈಗಾಗಲೇ ಅವರು ಎಲ್ಲಿದ್ದಾರೆ ಎಂಬ ಕುರಿತು ತುಂಬಾ ಹೆಚ್ಚಿನ ಪ್ರಮಾಣದಲ್ಲಿ ಬಿಸಿ ಬಿಸಿ ಚರ್ಚೆ ನಡೆಯುತ್ತಿದೆ. ಮುಂದೆ ಏನು ಮಾಡಬೇಕು ಎನ್ನುವುದರ ಬಗ್ಗೆ ಮುಖ್ಯಮಂತ್ರಿಗಳು ಸಚಿವರ ಅಭಿಪ್ರಾಯ ಪಡೆಯಲಿದ್ದಾರೆ ಎನ್ನಲಾಗಿದ್ದು ಇನ್ನೂ ಇಬ್ಬರು ಸಚಿವರು ಯಾರು ಆ ಸಿಡಿ ಯಾರಿಗೆ ಸೇರಿದ್ದು ಯಾರಿದ್ದಾರೆ ಆ ಸೆಕ್ಸ್ ಸಿಡಿ ಯಲ್ಲಿ ಎಂಬ ಕುರಿತು ಬಿಸಿ ಬಿಸಿ ಚರ್ಚೆ ಮಾತುಗಳು ನಡೆಯುತ್ತಿವೆ.