ಧಾರವಾಡ –
ಬನಶಂಕರಿ ಬಡಾವಣೆಯಲ್ಲಿ ಕಳೆಗಟ್ಟಿದ ನವರಾತ್ರಿ ವೈಭವ – ಬಡಾವಣೆಯ ಮಹಿಳೆಯರಿಂದ ವಿಶೇಷವಾಗಿ ಕಂಡು ಬರುತ್ತಿದೆ ದಾಂಡಿಯಾ ಡ್ಯಾನ್ಸ್
ದೇಶದ ಎಲ್ಲೇಡೆ ನವರಾತ್ರಿಯ ಸಡಗರ ಸಂಭ್ರಮ ಕಳೆಗಟ್ಟಿದ್ದು ಇನ್ನೂ ಇತ್ತ ಧಾರವಾಡದ ಬನಶಂಕರಿ ಬಡಾವಣೆಯಲ್ಲೂ ನವರಾತ್ರಿಯ ವೈಭವ ವಿಶೇಷವಾಗಿ ಕಂಡು ಬರುತ್ತಿದೆ.ಹೌದು ಬದಲಾದ ಜೀವನದ ನಡುವೆಯೂ ಕೂಡಾ ಪ್ರತಿ ವರ್ಷದಂತೆ ಈ ವರ್ಷವೂ ಕೂಡಾ ಬಡಾವಣೆಯ ಮಹಿಳೆಯರು ಪ್ರತಿ ದಿನ ರಾತ್ರಿ ದಾಂಡಿಯಾ ನೃತ್ಯವನ್ನು ಮಾಡಿಕೊಂಡು ಬರುತ್ತಿದ್ದಾರೆ.
ಬಡಾವಣೆಯಲ್ಲಿ ದಾಂಡಿಯಾ ನೃತ್ಯಕ್ಕಾಗಿ ಎಲ್ಲಾ ವ್ಯವಸ್ಥೆಗಳನ್ನು ಮಾಡಿಕೊಂಡು ಪ್ರತಿ ದಿನ ರಾತ್ರಿ ಮೂರು ಗಂಟೆಗಳ ಕಾಲ ದಾಂಡಿಯಾ ನೃತ್ಯವನ್ನು ಮಾಡುತ್ತಿ ದ್ದಾರೆ.ಬದಲಾದ ಜೀವನದ ನಡುವೆಯೂ ಕೂಡಾ ಬಿಡುವಿಲ್ಲದ ಕೆಲಸ ಕಾರ್ಯಗಳ ನಡುವೆಯೂ ಕೂಡಾ ಮಹಿಳೆಯರೆಲ್ಲರೂ ಒಂದೇಡೆ ಸೇರಿಕೊಂಡು ದಾಂಡಿಯಾ ಮಾಡುತ್ತಾ ನವರಾತ್ರಿ ಹಬ್ಬವನ್ನು ವಿಶೇಷವಾಗಿ ಆಚರಣೆ ಮಾಡುತ್ತಿದ್ದಾರೆ.
ಬನಶಂಕರಿ ಮಹಿಳಾ ಮಂಡಳದ ಮಹಿಳೆಯರಿಂದ ಈ ಒಂದು ದಾಂಡಿಯಾ ನೃತ್ಯ ವೈಭವ ನಡೆಯುತ್ತಿದ್ದು ಮಂಡಳದ ಅಧ್ಯಕ್ಷರಾದ ಶ್ರೀಮತಿ ಸರೋಜಾ ಉಳ್ಳಾಗಡ್ಡಿ,ಉಪಾಧ್ಯಕ್ಷರಾದ ಶ್ರೀಮತಿ ಲಲಿತಾ ಮೆಣಸಿನಕಾಯಿ,ಕಾರ್ಯದರ್ಶಿಗಳಾದ ಶ್ರೀಮತಿ ಜ್ಯೋತಿ ತಿಬೇಲಿ,ಶ್ರೀಮತಿ ಗೌರಮ್ಮ ಸೋಲಗಿ,ಭಾರತಿ ಲಾಲಗುಂದ್ರಿ,ಶ್ರೀಮತಿ ವಿದ್ಯಾ ಬಳ್ರೂರು.ಸದಸ್ಯರಾದ ಶ್ರೀಮತಿ ಜ್ಯೋತಿ ಉಳ್ಳಾಗಡ್ಡಿ,ಶ್ರೀಮತಿ ಶಾಂತಾ ಧರಿಯಣ್ಣನವರ,ಶ್ರೀಮತಿ ಭಾರತಿ ತುರಮರಿ,ಶ್ರೀಮತಿ ಸೀಮಾ ಹರಿವಾಣ,ಶ್ರೀಮತಿ ಸುಧಾ ಹಿರೇಮಠ,ಶ್ರೀಮತಿ ರೂಪಾ ಸಿದ್ದಣ್ಣನವರ,ಶ್ರೀಮತಿ ಪೂಜಾ ಗಿಣಿ,
ವಿಜಯಲಕ್ಷ್ಮಿ ಮಾನ್ವಿ,ಶ್ರೀಮತಿ ರೇಣುಕಾ ಭಜಂತ್ರಿ, ಶ್ರೀಮತಿ ಸುನಿತಾ ಜ್ಯೋತಿಭಾ,ಶ್ರೀಮತಿ ಕಾವ್ಯಾ ಪಾಟೀಲ್,ಶ್ರೀಮತಿ ನೀಲಮ್ಮ ಕೋಟಂಕಿ,ಶ್ರೀಮತಿ ಕೋಟಿ, ಇನ್ನೂ ಈ ಒಂದು ನಾರಿಯರ ದಾಂಡಿಯಾ ನೃತ್ಯಕ್ಕೆ ಕೋರಿಯೊಗ್ರಾಫರ್ ಆಗಿ ಕುಮಾರಿ ಶ್ರೀಗೌರಿ ಉಳ್ಳಾಗಡ್ಡಿ,ಭೂಮಿಕಾ,ಸುಶ್ಮಿತಾ,ಮಿಥುಲಾ,ಮೃದುಲಾ,ರಿವಾ,ಮನಸ್ವಿ,ಡಿಜೆ ವಾಲಾಗಳಾಗಿ ಇವರೊಂದಿಗೆ ರಕ್ಷೀತ್ ,ವಿಕಾಸ,ಅಭಿ,ಸಮರ್ಥ,ಹೊಳೆಬಸು ಸೇರಿದಂತೆ ಹಲವರು ಸಾಥ್ ನೀಡಿ
ಬಡಾವಣೆಯ ಮಹಿಳೆಯರ ದಾಂಡಿಯಾ ನೃತ್ಯಕ್ಕೆ ಸಾಥ್ ನೀಡಿದ್ದಾರೆ. ಒಟ್ಟಾರೆ ಸಧ್ಯ ಎಲ್ಲೇಡೆ ಮಹಿಳೆಯರ ದಾಂಡಿಯಾ ನೃತ್ಯ ವಿಶೇಷವಾಗಿ ಕಂಡು ಬರುತ್ದಿದ್ದು ಇತ್ತ ಬನಶಂಕರಿ ಬಡಾವಣೆಯಲ್ಲೂ ಕೂಡಾ ಅದ್ದೂರಿಯಾಗಿ ಕಂಡು ಬರುತ್ದಿದ್ದು ನವರಾತ್ರಿ ಹಿನ್ನಲೆಯಲ್ಲಿ ಪ್ರತಿ ದಿನ ಮೂರು ಗಂಟೆಗಳ ಕಾಲ ದಾಂಡಿಯಾ ಡ್ಯಾನ್ಸ್ ಮಾಡುತ್ತಾ ಸಂಭ್ರಮಿಸುತ್ತಿದ್ದಾರೆ.
ಸುದ್ದಿ ಸಂತೆ ನ್ಯೂಸ್ ಧಾರವಾಡ…..